ಮುಂಬಯಿ: ಜನಪ್ರಿಯ ಇ-ವಾಣಿಜ್ಯ ತಾಣಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗುರುವಾರ (ಜುಲೈ28) #Boycott ಅಮೆಜಾನ್, # Boycott ಫ್ಲಿಪ್ ಕಾರ್ಟ್ ಟಾಪ್ ಟ್ರೆಂಡಿಂಗ್ ಆಗಿದೆ…ಅದಕ್ಕೆ ಕಾರಣ…ಬಾಲಿವುಡ್ ನಟ ದಿ.ಸುಶಾಂತ್ ಸಿಂಗ್ ರಜಪೂತ್!
ಏನಿದು ವಿವಾದ?
ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತು ಖಿನ್ನತೆಯಿಂದ ಕೂಡಿರುವ ಭಾವಚಿತ್ರದ ಟೀ ಶರ್ಟ್ ಅನ್ನು ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. 2020ರ ಜೂನ್ ನಲ್ಲಿ ಮುಂಬಯಿ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ (34ವರ್ಷ)ಅವರ ಶವ ಪತ್ತೆಯಾಗಿತ್ತು.
ಇದನ್ನೂ ಓದಿ:ವಾರದೊಳಗೆ ಮೀಸಲಾತಿ ಪ್ರಕಟಿಸಿ, ಚುನಾವಣೆ ಪ್ರಕ್ರಿಯೆ ಆರಂಭಿಸಿ: ಸರ್ಕಾರಕ್ಕೆ ಸುಪ್ರೀಂ ಆದೇಶ
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಗೆ ಒಳಗಾಗಿರುವ ಭಾವಚಿತ್ರದ ಟೀ ಶರ್ಟ್ ಅನ್ನು ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಇ-ವಾಣಿಜ್ಯ ಫ್ಲ್ಯಾಟ್ ಫಾರಂನಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಸುಶಾಂತ್ ಖಿನ್ನತೆಗೆ ಒಳಗಾಗಿರುವಂತ ಭಾವಚಿತ್ರ ಬಳಸಿ ಟೀ ಶರ್ಟ್ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಗಮನಿಸಿದ ಸುಶಾಂತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿ, Boycott ಅಮೆಜಾನ್, Boycott ಫ್ಲಿಪ್ ಕಾರ್ಟ್ ಹ್ಯಾಶ್ ಟ್ಯಾಗ್ ಮೂಲಕ ವೈರಲ್ ಮಾಡಿದ್ದು, ಟ್ರೆಂಡಿಂಗ್ ಆಗಲು ಕಾರಣವಾಗಿತ್ತು ಎಂದು ವರದಿ ವಿವರಿಸಿದೆ.
“ ಮೃತ ವ್ಯಕ್ತಿಯನ್ನು ಬಳಸಿಕೊಂಡು ನಿಮ್ಮ ವಸ್ತುವನ್ನು ಮಾರಾಟ ಮಾಡಲು ಫ್ಲಿಪ್ ಕಾರ್ಟ್ ಗೆ ಯಾವತ್ತೂ ಸಾಧ್ಯವಾಗಲ್ಲ. ಅವರ ಕುಟುಂಬ ವರ್ಗದವರ ಬಗ್ಗೆ ಆಲೋಚಿಸಿ. ನೀವೂ ಕೂಡಾ ಶೀಘ್ರದಲ್ಲೇ ಕರ್ಮ ಫಲ ಅನುಭವಿಸುತ್ತೀರಿ” ಎಂದು ಟ್ವಿಟರ್ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.