Advertisement

UV Fusion: ಹೀಗ್ಯಾಕೆ!

12:22 PM Jan 15, 2024 | Team Udayavani |

ಕಾಲವು ಕಳೆಯುವುದು ಸೂರ್ಯನ ಕಿರಣ ತಾಗಿರುವ ಮಂಜು ಕರಗಿದಂತೆ.  ಹಗಲಿರುಳಿದ್ದಂತೆ, ಬಾಳಲ್ಲಿ ನೋವು ನಲಿವಿದೆ, ನಿರಂತರ ಏಳು ಬೀಳಿನ ಹೋರಾಟವಿದೆ. ಇಲ್ಲಿ ಗೆಲುವು ಸೋಲಿನ ಜತೆಯಲ್ಲಿ ನಿರಂತರ ಕಾದಾಟ ಇದ್ದೇ ಇರುತ್ತದೆ.

Advertisement

ಬದುಕಿನ ಪುಟಗಳಲ್ಲಿ ಎಲ್ಲವೂ ಅಂದುಕೊಂಡಂತೆ ಪದಗಳ ಜೋಡಣೆ, ವಾಕ್ಯದ ರಚನೆ ಇರದು. ಇಲ್ಲಿ ನಗುವಿದೆ, ಅಳುವಿದೆ, ಜೀವನದಲ್ಲಿ ಗತಿಸುವ ಪ್ರತಿ ಸನ್ನಿವೇಶಗಳು ಅನುಭವ ಎನ್ನುವ ಆಗಸದಂಗಳದಲ್ಲಿ ಹಾರಾಡುವಂತೆ ಮಾಡುತ್ತವೆ. ಅಲ್ಲಿ ಹಾರಾಡುವ ಚಿಲಿಪಿಲಿಗುಟ್ಟುವ ಅನುಭವಗಳು ಸಂತಸದ ತೋರಣವಾಗಿರಬಹುದು, ಇಲ್ಲವೇ ದುಃಖದ ಹೊರಣವು ಆಗಿರಬಹುದು.

ಕಾಲವೇ ಪ್ರಶ್ನೆ ಕಾಲವೇ ಉತ್ತರ. ಕಾಲವೇ ಎಲ್ಲದರ ಮೂಲ. ಸುಖ ದುಃಖದ ಪ್ರಶ್ನೆಯ ಸರಣಿಗೆ ಕಾಲವೇ ಉತ್ತರಿಸುತ್ತದೆ. ಹುಟ್ಟು ಸಾವಿನ ನಡುವಿನ ಬದುಕ ಅದೆಷ್ಟೋ ನೀತಿ ನಿಯಮಗಳನ್ನು ಕಾಲದೊಂದಿಗೆ ಕಲಿತುಕೊಳ್ಳುತ್ತೇವೆ. ಇಲ್ಲಿ ಕಲಿತ ವಿಚಾರ, ಸಮಾಚಾರ, ಆಚಾರಗಳು ನಮ್ಮಯ ಬಾಳಿನ ಸಂಚಾರದಲ್ಲಿ ಸರಿ ತಪ್ಪುಗಳ ಬೇಟೆಗೆ ಸಹಕಾರಿಯಾಗುತ್ತವೆ.

ಆದದ್ದು ಆಗಿ ಹೋಗಲಿ. ಮುಂದೆ ಆಗಬೇಕಿರುವ ಬಗ್ಗೆ ಚಿಂತೆಯಿರಲಿ. ಆಗಿ ಹೋದ ಯೋಚನೆಯಲ್ಲಿಯೇ ದಿನಗಳನ್ನು ಕಳೆದು ನಿನ್ನ ಸಮಯವನ್ನು ಕೈ ಚೆಲ್ಲುವ ಬದಲು ಇಂದಿನ ದಿನಗಳಲ್ಲಿ ಏನಾಗಬೇಕೆಂದು ತಿಳಿ ಮೊದಲು. ನೆನೆದಷ್ಟು ನೆನಪಿನ ಆಳವನ್ನು ತೋಡುತ್ತಾ ಹೋಗುತ್ತದೆ.ಅದಕ್ಕೆ ಕೊನೆಯೆಂಬುದು ಇರದು. ನೆನೆದಷ್ಟು ನೆನಪುಗಳ ವ್ಯಾಪ್ತಿ ಹೆಚ್ಚಾಗಿ ನಮಗೆ ಮುಂದಿನ ದಿನಗಳಲ್ಲಿ ಏನನ್ನು ಮಾಡಬೇಕೆಂಬುದಾಗಿ ಅರಿಯಲು, ತಿಳಿಯಲು ತೊಡಕನ್ನು ಉಂಟುಮಾಡಬಹುದು. ಗತಿಸಿ ಹೋದ ಘಟನೆಗಳನ್ನು ಅಲ್ಲೇ ಬಿಟ್ಟು ಮುಂದುವರೆಯಿರಿ. ಅದರ  ಸುತ್ತಲೂ ಸುಮ್ಮನೆ ತಿರುಗುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ.

ಯೋಚನೆಗಳು ಬೆನ್ನು ಬಿಡದೆ ಕಾಡಿದಾಗ ಅದರಿಂದ ಆಗುವ  ಸಂಕಟಗಳು ಹೆಚ್ಚು. ಅದರಿಂದ ಹೊರಬರಲೇಬೇಕು ಒಂದೊಮ್ಮೆ ಅದು ಅಸಾಧ್ಯವೆನಿಸಿದರೆ ಮುಂದಿನ ಒಳ್ಳೆಯ ದಿನಗಳನ್ನು ನಾವೇ ಕೈ  ಚೆಲ್ಲಿಕೊಂಡಂತೆ. ಮನ ಪರಿವರ್ತನೆ ಯಾತ್ರೆ ಮನದಲ್ಲಿ ಶುರುವಾದರೆ ಮಾತ್ರ ಎಲ್ಲವೂ ಸಾಧ್ಯ. ಇಲ್ಲಿ ಯಾವುದು ಅಸಾಧ್ಯವಲ್ಲ. ತಿಳಿದು ನೋಡು, ಕಹಿ ನೆನಪ ತುಳಿದು ನೋಡು.

Advertisement

-ಗಿರೀಶ್‌ ಪಿ.ಎಂ.

ವಿವಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next