Advertisement
ಬೇಸಿಗೆ ಬಂತಂದ್ರೆ ಸಾಕು, ಹಣ್ಣುಗಳತ್ತ ಎಲ್ಲರೂ ಕಣ್ ಹೊಡೀತಾರೆ. ಮನುಷ್ಯ ಹಣ್ಣಿನ ರಸವನ್ನು ಯಥೇಚ್ಚವಾಗಿ ಸೇವಿಸುವುದು ಬೇಸಿಗೆಯ ಕಾಲದಲ್ಲಿಯೇ. ಇದರಿಂದ ಶರೀರವು ಕೂಲ್ ಆಗುವುದಲ್ಲದೆ, ಆರೋಗ್ಯವೂ ಚೆನ್ನಾಗಿರುತ್ತದೆ.
Related Articles
ಅಡಚಣೆ ಸಂಭವಿಸಿದಾಗ, ಹಣ್ಣಿನ ರಸವನ್ನು ಸೇವಿಸುವುದರಿಂದ ಪುನಃ ಪಚನ ಕ್ರಿಯೆಯು ಸರಾಗವಾಗಿ ಕರುಳಿನ ಮಾರ್ಗವು ಸುಸ್ಥಿತಿಯಲ್ಲಿ ಉಳಿಯುತ್ತದೆ.
ನೈಸರ್ಗಿಕವಾಗಿ ವಿಟಮಿನ್ ಪಡೆಯುವ ಸುಲಭವಾದ ದಾರಿಯೆಂದರೆ ಹಣ್ಣುಗಳ ಸೇವನೆ. ಇವುಗಳು ದೇಹಕ್ಕೆ ಟಾನಿಕ್‌ನಂತೆ ಶಕ್ತಿ ನೀಡುತ್ತವೆ.
Advertisement
ಸೀಬೆ ಹಣ್ಣು, ಸೀತಾಫಲ, ಲಿಂಬೆ, ಮೂಸಂಬಿ,ಕಿತ್ತಳೆ ಮುಂತಾದ ಹಣ್ಣುಗಳಲ್ಲಿ ವಿಟಮಿನ್
“ಸಿ’ ಇರುತ್ತದೆ.
ಒಂದು ದೊಡ್ಡ ಮಾವಿನ ಹಣ್ಣನ್ನು ಒಬ್ಬ ಮನುಷ್ಯ ಸೇವಿಸುವುದರಿಂದ, ಒಂದು ವಾರಕ್ಕೆ ಸಾಕಾಗುವಷ್ಟು ವಿಟಮಿನ್ “ಎ’ ಸಿಗುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ “ಸಿ’ ಹಾಗೂ ಕರೋಟಿನ್ ಹೇರಳವಾಗಿ ಇರುತ್ತದೆ.
ಈ ಕರೋಟಿನ್ ಅಂಶವು ನಮ್ಮ ದೇಹದಲ್ಲಿ ಸೇರಿ ವಿಟಮಿನ್ “ಎ’ ಆಗಿ ಪರಿವರ್ತನೆಗೊಳ್ಳುತ್ತದೆ. ಸೀತಾಫಲ ಹಣ್ಣಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದ್ದು, ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಉಪಕಾರಿ. ಹಣ್ಣುಗಳನ್ನು ಸೇವಿಸುವುದರಿಂದ ಪಚನಕ್ರಿಯೆ ಚೆನ್ನಾಗಿ ಆಗಿ, ಮಲವಿಸರ್ಜನೆ ಸುಲಭವಾಗುತ್ತದೆ. ನಮ್ಮ ದೇಹದಲ್ಲಿರುವ ಆ್ಯಸಿಡ್, ಅಲ್ಕಲಿಗಳ ಸಮತೋಲನವನ್ನು ಕಾಪಾಡಲು ಹಣ್ಣಿನ ರಸ ಸೇವನೆ ಉತ್ತಮ. ಆಹಾರದ ಜೊತೆಗೆ ದೇಹ ಸೇರುವ ವಿಷಕಾರಿ ಅಂಶಗಳನ್ನು ನಿಷ್ಕ್ರಿಯಗೊಳಿಸು ವಲ್ಲಿಯೂ ಹಣ್ಣುಗಳು ಸಹಕಾರಿ. ಹಣ್ಣಿನ ರಸವನ್ನು ಫ್ರಿಡ್ಜ್ನಲ್ಲಿ ಶೇಖರಿಸಿ, ಕುಡಿಯಬಾರದು. ಯಾವಾಗಲೂ ರಸವನ್ನು ತಯಾರಿಸಿದ ಕೂಡಲೇ ಕುಡಿಯುವುದರಿಂದ ಅದರಲ್ಲಿರುವ ಸತ್ವಗಳು ಹಾಳಾಗುವುದಿಲ್ಲ. ಹಣ್ಣುಗಳನ್ನು ಕಚ್ಚಾ ಅಥವಾ ಪಕ್ವ ಸ್ಥಿತಿಯಲ್ಲಿ ಸೇವಿಸುವುದರಿಂದ ಅನುಕೂಲಗಳು ಜಾಸ್ತಿ. ಹಣ್ಣುಗಳನ್ನು ಬೇಯಿಸಿಯೂ ತಿನ್ನಬಾರದು. ಏಕೆಂದರೆ, ಅದರಲ್ಲಿರುವ ಪೋಷಕಾಂಶ, ಲವಣಾಂಶ ಹಾಗೂ ಕಾಬೋìಹೈಡ್ರೇಟ್‌ಗಳು ಕಡಿಮೆಯಾಗುತ್ತವೆ. ಹಾಗೆಯೇ, ತರಕಾರಿ ಜತೆ ಯಲ್ಲಿ ಸೇವಿಸುವುದೂ ಒಳ್ಳೆಯದಲ್ಲ. ಹಣ್ಣು ಗಳನ್ನು ಆದಷ್ಟು ಪ್ರತ್ಯೇಕವಾಗಿ ತಿಂದರೆ ಒಳ್ಳೆಯದು. ಆಹಾರದೊಂದಿಗೂ ತಿನ್ನಬಹುದು. ಕಣ್ಣಿನ ದೃಷ್ಟಿಯ ಸಮಸ್ಯೆ ಇದ್ದವರು ಪ್ರತಿದಿನವೂ ದಾಳಿಂಬೆ ಹಣ್ಣಿನ ಸೇವನೆ ರೂಢಿಸಿಕೊಳ್ಳುವುದು ಉತ್ತಮ. ಎಪ್ರಿಕಾಟ್, ಒಣದ್ರಾಕ್ಷಿ, ಖರ್ಜೂರದಲ್ಲಿ
ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ, ಮೂಳೆಗಳು ಗಟ್ಟಿಗೊಳ್ಳುವುದಲ್ಲದೇ, ಒಳ್ಳೆಯ ರಕ್ತ ವರ್ಧಿಸಲು ಸಹಾಯಕ. ತಾಜಾ ಹಣ್ಣಿನಂತೆ ಡ್ರೈ ಪ್ರೂಟ್ಸ್‌ಗಳನ್ನೂ ಡಯಟ್ ಗೆ ಸೇರಿಸಿ. ವೇದಾ