Advertisement

ಯುವ ಪೀಳಿಗೆಯ ಜವಾಬ್ದಾರಿ; ನಾವು ಯಾಕೆ ಮತ ಹಾಕಬೇಕು

03:44 PM Mar 25, 2019 | keerthan |

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತಿದ್ದಾರೆ.ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

Advertisement

ಯುವ ಪೀಳಿಗೆಯ ಜವಾಬ್ದಾರಿ
ಮತ ಹಾಕುವುದು ನನ್ನ ಹಕ್ಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು. ಹೊಸದಾಗಿ ರಚಿತವಾದಂತಹ ಸರಕಾರದಿಂದ ನನ್ನ ನಿರೀಕ್ಷೆಯೆಂದರೆ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಗಳು ತನ್ನ ಉತ್ತಮ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ಬಳಸುತ್ತಿದೆ. ಆದುದರಿಂದ ಅದರ ಬಳಕೆ ಮೇಲೆ ನಿಯಂತ್ರಣ ಹೇರುವ ಕ್ರಮವನ್ನು ದೇಶಾಂದ್ಯತ ತರಬೇಕು.
 ಸವಿತಾ ಸಾಣೂರು, ವೈಕುಂಠ ಬಾಳಿಗಾ ಕಾಲೇಜು, ಉಡುಪಿ

ಆಮಿಷಕಾಗಿ ಮತ ಮಾರಿಕೊಳಬೇಡಿ
ನನ್ನ ಕ್ಷೇತ್ರದ, ರಾಜ್ಯ ಹಾಗೂ ದೇಶದ ಅಭಿವೃದ್ಧಿ, ಒಳಿತಿಗಾಗಿ ನಾನು ಮತ ಚಲಾಯಿಸಬೇಕು. ಮತದಾನ ನಮ್ಮೆಲ್ಲರಮೂಲಭೂತ ಹಕ್ಕು ಹಾಗೂ ಕರ್ತವ್ಯ ಕೂಡ. ಆದರೆ ಅದನ್ನು ಹಣಕ್ಕಾಗಿ, ಆಮಿಷಕ್ಕಾಗಿ ಮಾರಿಕೊಳ್ಳಬಾರದು. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಹೊಣೆಗಾರಿಕೆ ಸಮರ್ಥವಾಗಿನಿಭಾಯಿಸೋಣ.
ಶ್ರೀಕಲಾ ಶಿರಿಯಾರ, ಬ್ಯಾರೀಸ್‌ ಶಿಕ್ಷಣ ವಿದ್ಯಾಲಯ, ಕೋಡಿ

ಒಂದು ಮತ ದೇಶದ ಅಭಿವೃದ್ಧಿಗೆ ಹಿತ
ಯುವ ಜನತೆ ಯೋಚಿಸಿ ಮತಚಲಾಯಿಸಬೇಕು. ದೇಶಕ್ಕಾಗಿಹಿರಿಯರಯ ಮಾಡಿದ ತ್ಯಾಗವನ್ನು ಸ್ಮರಿಸಿದರೆ ಖಂಡಿತಾ ಮತದಾನದಕಾರ್ಯದಲ್ಲಿ ನಾವುಭಾಗಿಯಾಗುತ್ತೇವೆ. ನಮ್ಮ ಒಂದು ಮತದೇಶದ ಅಭಿವೃದ್ಧಿಗೆ ಕಾರಣವಾಗಲಿದೆಎಂಬುದನ್ನು ನಾವು ಸ್ಮರಿಸಬೇಕು. ಚುನಾಯಿಸುವನಾಯಕ ಹೃದಯವಂತ,ಯುವ ಜನರಿಗೆ ಪ್ರೇರಣೆಯಾಗಲಿ.
-ನಯನಾ, ಎಂಜಿಎಂ ಕಾಲೇಜು, ಉಡುಪಿ

ಉತ್ತಮ ಅಭ್ಯರ್ಥಿಗೇ ಮತ ಹಾಕಿ
ನಾವು ಮತದಾನದಲ್ಲ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಮ್ಮ ಭವಿಷ್ಯದ ಕೆಲಸ ಮಾಡುತ್ತಿದ್ದೇವೆ ಎಂದು ಅರ್ಥ ಬರುತ್ತದೆ. ನಾವು ಚುನಾಯಿಸುವ ಪ್ರತಿನಿಧಿ ಯಾವ ಧರ್ಮ, ಯಾವ ಪಕ್ಷ, ಯಾವ ಜಾತಿಗೆ ಸೇರಿದ್ದಾನೆ ಎಂದು ಯೋಚಿಸುವ ಅಗತ್ಯ ಇಲ್ಲ. ನಮ್ಮಕ್ಷೇತ್ರದ ಪರವಾದ ಧ್ವನಿ ಎತ್ತುವ ನಾಯಕರನ್ನು ಚುನಾಯಿಸಬೇಕಾಗಿದೆ. ರಾಜಕೀಯಪಕ್ಷಗಳನ್ನು ನೋಡಿ ಮತದಾನ ಮಾಡುವಕ್ರಮ ಸ್ವೇಚ್ಛಾಚಾರಕ್ಕೆ ಕಾರಣವಾಗದಿರಲಿ. ಸೂಕ್ತ ಅಭ್ಯರ್ಥಿಗೆ ನಿಮ್ಮ ಮತ ಅಚ್ಚಾಗಲಿ.
ಸಾತ್ವಿಕ್‌ ಗಡಿಯಾರ್‌,ಪಿಪಿಸಿ ಕಾಲೇಜು

Advertisement

ದೇಶದ ಅಭಿವೃದ್ಧಿಗೆ ನಿರ್ಣಾಯಕ
ನನ್ನ ಒಂದು ಮತವೂ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಹಾಗಾಗಿ ಉತ್ತಮ ನಾಯಕರನ್ನುಆಯ್ಕೆ ಮಾಡುವುದು ನನ್ನ ಕರ್ತವ್ಯಕೂಡ ಹೌದು. ಮತದಾನದಲ್ಲಿ ಭಾಗಿಯಾದರೆ ಮಾತ್ರ ನಾಳಿನ ದಿನ ನಮ್ಮ ಜನಪ್ರತಿನಿಧಿಯನ್ನು ತಪ್ಪು ಮಾಡಿದರೆ ಪ್ರಶ್ನಿಸುವ ಅಧಿಕಾರವಿರುತ್ತದೆ. ಹಾಗಾಗಿ ಮತದಾನ ಕಡ್ಡಾಯವಾಗಿ ಮಾಡುತ್ತೇನೆ.
 ಸಚಿನ್‌ ಮರಕಾಲ, ಬ್ಯಾರೀಸ್‌ ಶಿಕ್ಷಣ ವಿದ್ಯಾಲಯ ಕೋಡಿ

ಮತ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ..
ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಈ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಯುವ ಪೀಳಿಗೆಯ ಮತದಾನದ ಅವಶ್ಯಕತೆ ಹೆಚ್ಚಿದೆ. ಯುವಜನತೆಯ ಒಂದೊಂದು ಮತ ದೇಶದ ಭವಿಷ್ಯ ನಿರ್ಧರಿಸುತ್ತದೆ. ಇದಕ್ಕಾಗಿ ಮತದಾನಕ್ಕೆ ಮಹತ್ವವಿದೆ.
ಶರಣ್ಯಾ ಶೆಟ್ಟಿ, ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

ನಮಗೆ ಸಿಕ್ಕ ಅಧಿಕಾರ ಬಳಸೋಣ
ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಇದು ಸಂವಿಧಾನಬದ್ದ ಹಕ್ಕಾಗಿದೆ. ಸಂವಿಧಾನ ನಮಗೆ ನೀಡಿರುವ ಅಧಿಕಾರವನ್ನು ನಾವು ಅನುಭವಿಸುವದೇ ಆದರೆ ನಾವು ಮತದಾನದ ಮೂಲಕ ಪಾಲ್ಗೊಳ್ಳಬೇಕು. ನಾವು ಮತದಾನ ಪ್ರಕ್ರಿಯೆಯಲ್ಲಿಪಾಲ್ಗೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಸರಕಾರ ಅನ್ಯಮಾರ್ಗದಲ್ಲಿ ನಡೆದರೆ ಟೀಕಿಸಬಹುದಾಗಿದೆ.
ಶಾಂತೇರಿ ಶೆಣೈ, ಪಿಪಿಸಿ ಕಾಲೇಜು

ಯುವಜನತೆಯ ಜವಾಬ್ದಾರಿ
ಮತ ಹಾಕುವುದು ನನ್ನ ಹಕ್ಕು ಮತ್ತು ಕರ್ತವ್ಯ. ನಿರೀಕ್ಷೆಗಳೊಂದಿಗೆ ಮತ ಹಾಕುತ್ತೇವೆ. ಆ ನಿರೀಕ್ಷೆ ಸಾಕಾರಗೊಂಡಾಗ ನಮ್ಮ ಮತ ಸಾರ್ಥಕವಾಯಿತೆನಿಸುತ್ತದೆ. ಯುವ ಜನತೆಗೆ ರಾಷ್ಟ್ರ ನಿರ್ಮಾಣದಲ್ಲಿ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕರ್ತವ್ಯವನ್ನು ಮಾಡಲೇಬೇಕು.
ಅನುಷಾ ಶೆಟ್ಟಿ, ವೈಕುಂಠ ಬಾಳಿಗಾ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next