Advertisement

ಅಮೆರಿಕ ದಾಳಿ ಮಾಡುತ್ತೆ ನಾವೇಕೆ ಮಾಡಬಾರದು?

12:30 AM Feb 28, 2019 | Team Udayavani |

“ಭಯೋತ್ಪಾದಕ ಬಿನ್‌ ಲಾಡೆನ್‌ನನ್ನು ಪಾಕಿಸ್ತಾನದೊಳಗೆ ಹೋಗಿ ಕೊಲ್ಲಲು ಅಮೆರಿಕಕ್ಕೆ ಸಾಧ್ಯವಿದೆ ಎನ್ನುವುದಾದರೆ, ಪಾಕಿಸ್ತಾನದ ಮೇಲೆ ದಾಳಿ ಮಾಡಲು ಭಾರತಕ್ಕೂ ಸಾಧ್ಯವಿದೆ” ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಹೇಳಿದ್ದಾರೆ. “”ಪುಲ್ವಾಮಾ ದಾಳಿಯಾಗಿ ಒಂದು ವಾರದ ನಂತರ ಪಾಕಿಸ್ತಾನದಲ್ಲಿ ನಮ್ಮ ವಾಯುಪಡೆ ದಾಳಿ ನಡೆಸಿ ಪ್ರತೀಕಾರ ಕೈಗೊಂಡಿದೆ. ಒಂದು ವಾರ ಕಾಯ್ದಿದ್ದೂ ತುಸು ಹೆಚ್ಚೇ ಆಯಿತು. ಆದರೆ, ಮಂಗಳವಾರದ ಇಡೀ ದಿನದ ಬೆಳವಣಿಗೆಗಳನ್ನು ಒಮ್ಮೆ ತಿರುಗಿ ನೋಡಿದಾಗ ಆ ಒಂದು ವಾರದ ಅವಧಿ ಒಂದು ದಿನದಂತೆ ಭಾಸವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಜತೆಗೆ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಳ್ಳಬಹುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next