ನವದೆಹಲಿ: 2023ರ ಜ.1ರಿಂದ ಭಾರತದಲ್ಲಿ ಮಾರಾಟ ಮಾಡುವ ಎಲ್ಲಾ ಮೊಬೈಲ್‌ಗಳಿಗೆ 15 ಸಂಖ್ಯೆಯ ಐಎಂಐಇ ನಂಬರ್ ನೋಂದಣಿಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಕಂಪನಿಗಳು ಮೊಬೈಲ್ ಮಾರಾಟಕ್ಕೂ ಮೊದಲು ಅದರ ಐಎಂಐಇ ನಂಬರ್ ಅನ್ನು ನಕಲಿ ತಡೆ ಮತ್ತು ಕಳೆದುಹೋದ ಹ್ಯಾಂಡ್‌ಸೆಟ್ ಬ್ಲಾಕಿಂಗ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ.
ಸೆ.26ರ ಅಧಿಸೂಚನೆಯ ಪ್ರಕಾರ, ಮೊಬೈಲ್ ತಯಾರಿಕಾ ಕಂಪನಿಗಳು ಭಾರತದಲ್ಲಿ ತಯಾರಿಸಿದ ಪ್ರತಿಯೊಂದು ಮೊಬೈಲ್ ಫೋನ್ ಅನ್ನು ಮೊದಲ ಬಾರಿಗೆ ಮಾರಾಟ ಮಾಡುವ ಮುನ್ನ ದೂರಸಂಪರ್ಕ ಇಲಾಖೆ ನಿರ್ವಹಿಸುತ್ತಿರುವ ಭಾರತೀಯ ನಕಲಿ ಸಾಧನ ನಿರ್ಬಂಧ ಪೋರ್ಟಲ್‌ನಲ್ಲಿ ಐಎಂಇಐ (ಅಂತಾರಾಷ್ಟ್ರೀಯ ಮೊಬೈಲ್ ಉಪಕರಣಗಳ ಗುರುತಿನ ಸಂಖ್ಯೆ) ನಂಬರ್ ಅನ್ನು ನೋಂದಾಯಿಸಿಕೊಳ್ಳಬೇಕು.
ಮೊಬೈಲ್ ಸಾಧನ ಸಲಕರಣೆ ಗುರುತಿನ ಸಂಖ್ಯೆ ಟ್ಯಾಂಪರಿಂಗ್ ತಡೆ(ತಿದ್ದುಪಡಿ) ನಿಯಮ 2022ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.
ಪ್ರಸ್ತುತ ಪೋರ್ಟಲ್‌ನಲ್ಲಿ ಕದ್ದ ಅಥವಾ ಕಳೆದುಹೋದ ಮೊಬೈಲ್‌ಗಳನ್ನು ಬ್ಲಾಕ್ ಮಾಡುವ ಸೌಲಭ್ಯ ಮಾತ್ರ ಇದೆ. ಸಿಇಐಆರ್ ಯೋಜನೆಯು, ನಕಲಿ ಸಾಧನಗಳು ಮತ್ತು ಕಳೆದುಹೋದ ಮೊಬೈಲ್ ಫೋನ್‌ಗಳ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಅಲ್ಲದೇ ಹೊಸ ಅಧಿಸೂಚನೆಯ ಪ್ರಕಾರ, ಆಮದು ಮಾಡಿಕೊಳ್ಳಲಾದ ಮೊಬೈಲ್‌ಗಳ ಐಎಂಇಐ ಸಂಖ್ಯೆಯನ್ನು ಸಹ ಐಸಿಡಿಆರ್ ವ್ಯವಸ್ಥೆಯಲ್ಲಿ ನೋಂದಾಯಿಸಬೇಕಾಗುತ್ತದೆ.