ಹೊಸದಿಲ್ಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಮಂಗಳಸೂತ್ರ’, ‘ಭೈನ್ಸ್’ (ಎಮ್ಮೆ) ಮತ್ತು ಧರ್ಮದ ಆಧಾರದ ಮೇಲೆ ಯಾಕೆ ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ತಮ್ಮ ಸರ್ಕಾರದ ಸಾಧನೆಯ ಬಗ್ಗೆ ವಿಶ್ವಾಸವಿದ್ದರೆ, ಅವರು ಕಳೆದ 10 ವರ್ಷಗಳಲ್ಲಿ ಮಾಡಿದ ಕೆಲಸದ ಆಧಾರದ ಮೇಲೆ ಮತ ಕೇಳಬೇಕಿತ್ತು” ಎಂದರು.
ಇತ್ತೀಚೆಗೆ ಗುಜರಾತ್ ನ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಮೋದಿ ಅವರು, ಒಂದು ವೇಳೆ ಕಾಂಗ್ರೆಸ್ ಗೆದ್ದರೆ, ಅದು ನಿಮ್ಮ ಎಮ್ಮೆಗಳನ್ನು ಕಸಿದುಕೊಳ್ಳಲಿದೆ ಎಂದಿದ್ದರು.
ಬಿಜೆಪಿ ಸರ್ಕಾರ ತಂದ ಅಗ್ನಿಪಥ್ ಯೋಜನೆಯ ಬಗ್ಗೆ ಟೀಕೆ ಮಾಡಿದ ಪ್ರಿಯಾಂಕಾ, ಇದು ಆಕಾಂಕ್ಷಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಹೇಳಿದರು.
ಹಣದುಬ್ಬರ ಮತ್ತು ಬೆಲೆ ಏರಿಕೆಯ ಬಗ್ಗೆ ಮಾತನಾಡಿದ, ಇಂದು ಒಬ್ಬ ಮಹಿಳೆ ಮಾರುಕಟ್ಟೆಗೆ ಐದು ಸಾಮಾಗ್ರಿಗಳನ್ನು ಕೊಳ್ಳಲೆಂದು ಹೋದರೆ, ಆಕೆ ಕೇವಲ ಎರಡನ್ನು ಖರೀದಿಸಿ ಮರಳುತ್ತಾಳೆ. ಇದು ಮಹಿಳೆಯರಲ್ಲಿ ಆತಂಕ ಮೂಡಿಸಿದೆ’ ಎಂದು ಅವರು ಹೇಳಿದರು.