Advertisement

ಯಾಕೆ ಮೇಲ್ದರ್ಜೆಗೇರಿಲ್ಲ ಫ‌ುಟ್ಬಾಲ್‌ ಮೈದಾನ?

06:45 AM Jul 25, 2017 | Team Udayavani |

ಬೆಂಗಳೂರು: ಎಲ್ಲವೂ ಯೋಜನೆಯಂತೆ ನಡೆದಿದ್ದರೆ ಬೆಂಗಳೂರಿನ ಅಶೋಕ ನಗರದಲ್ಲಿರುವ ರಾಜ್ಯ ಫ‌ುಟ್ಬಾಲ್‌ ಕ್ರೀಡಾಂಗಣ ಈಗಾಗಲೇ ಹೈಟೆಕ್‌ ಕ್ರೀಡಾಂಗಣ ಆಗಬೇಕಾಗಿತ್ತು. 17 ವರ್ಷದೊಳಗಿನ ಫ‌ುಟ್ಬಾಲ್‌ ವಿಶ್ವಕಪ್‌ಗೆ ಆತಿಥ್ಯ ಪಡೆದ ಹೆಮ್ಮೆಯ ಗರಿ ಸಿಕ್ಕಿಸಿಕೊಳ್ಳಬೇಕಿತ್ತು. ಆದರೆ ಆಗಿದ್ದೇ ಬೇರೆ, ನವೀಕರಣಕ್ಕೆ ಹಲವು ಅಡ್ಡಿ ಆತಂಕ, ಎಂದೂ ಮುಗಿಯದ ಗೊಂದಲದ ಗೂಡಾಗಿ ಕ್ರೀಡಾಂಗಣದ ನವೀಕರಣದ ಕಾಮಗಾರಿ ಕಳೆದ 2 ವರ್ಷದಿಂದ ನನೆಗುದಿಗೆ ಬಿದ್ದಿದೆ.

Advertisement

ಓಜೋನ್‌ ಬಿಡ್ಡಿಂಗ್‌ ಪಡೆದಿತ್ತು: ಕರ್ನಾಟಕ ರಾಜ್ಯ ಫ‌ುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್ಎ) 8 ಜೂನ್‌ 2015ರಂದು ಬಿಡ್ಡಿಂಗ್‌ ಕರೆದಿತ್ತು. ಪ್ರಮುಖವಾಗಿ ಟಸ್ಕನ್‌ ಕನ್ಸಲ್ಟೆಂಟ್ಸ್‌ ಆ್ಯಂಡ್‌ ಡೆವಲಪರ್ ಪ್ರೈವೇಟ್‌ ಲಿಮಿಟೆಡ್‌, ಜೆಎಸ್‌ಡಬ್ಲೂé ಬೆಂಗಳೂರು ಫ‌ುಟ್ಬಾಲ್‌ ಕ್ಲಬ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಓಜೋನ್‌ ಗ್ರೂಪ್‌ ಫ‌ುಟ್ಬಾಲ್‌ ಅಕಾಡೆಮಿ ಪ್ರೈವೇಟ್‌
ಲಿಮಿಟೆಡ್‌ ಬಿಡ್ಡಿಂಗ್‌ ಸಲ್ಲಿಸಲು ಆಸಕ್ತಿ ತೋರಿಸಿದ್ದವು. ಟಸ್ಕನ್‌ 525 ಕೋಟಿ ರೂ.ಗೆ ಮತ್ತು ಓಜೋನ್‌ 675 ಕೋಟಿ ರೂ.ಗೆ ಬಿಡ್ಡಿಂಗ್‌ ಸಲ್ಲಿಸಿದ್ದವು. ಹೀಗಾಗಿ ಸಹಜವಾಗಿ ಹೆಚ್ಚಿನ ಮೊತ್ತಕ್ಕೆ ಬಿಡ್ಡಿಂಗ್‌ ಪಡೆಯಲು ಮುಂದಾದ ಓಜೋನ್‌ಗೆ ಅವಕಾಶ ಸಿಕ್ಕಿತ್ತು.

ಸರ್ಕಾರ ಯಾಕೆ ಒಪ್ಪಿಗೆ ನೀಡಿಲ್ಲ?: ಕಾಮಗಾರಿ ಇನ್ನೂ ಯಾಕೆ ಶುರುವಾಗಿಲ್ಲ ಎಂದು ಸಂಬಂಧಪಟ್ಟ ಯಾರಲ್ಲೇ ಕೇಳಿದರೂ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂಬ ಸಿದಟಛಿ ಉತ್ತರ ನೀಡುತ್ತಾರೆ. ಆದರೆ ರಾಜ್ಯ ಫ‌ುಟ್‌ಬಾಲ್‌ ಸಂಸ್ಥೆ ಮುಖ್ಯಸ್ಥ ಎನ್‌.ಎ.ಹ್ಯಾರಿಸ್‌ ಬೇರೆಯದ್ದೇ ಉತ್ತರ ನೀಡಿದ್ದಾರೆ. ಸರ್ಕಾರಕ್ಕೆ ರಾಜ್ಯ ಫ‌ುಟ್‌ಬಾಲ್‌ ಸಂಸ್ಥೆ ಸೂಕ್ತ ದಾಖಲೆಗಳನ್ನೇ ನೀಡಿಲ್ಲ.

ಆದ್ದರಿಂದ ಕಾಮಗಾರಿ ತಡವಾಗುತ್ತಿದೆ ಎನ್ನುವುದು ಅವರ ಹೇಳಿಕೆ. ಬಿಡ್ಡಿಂಗ್‌ನಲ್ಲಿ ನಡೆದ ಮಾತುಕತೆಯಂತೆ 13 ಮಾರ್ಚ್‌ 2017ಕ್ಕೆ ನವೀಕರಣ ಕಾಮಗಾರಿ ಪೂರ್ಣವಾಗಬೇಕಿತ್ತು. ಗಡುವು ಮುಗಿದರೂ ಇನ್ನು ಒಂದು ಕಡ್ಡಿಯಷ್ಟು ಕೆಲಸವಾಗಿಲ್ಲ. ಇದು ಫ‌ುಟ್ಬಾಲ್‌ ಸಂಸ್ಥೆಯ ನಿರ್ಲಕ್ಷ್ಯ ಎಂದು ಅಭಿಮಾನಿಗಳು ದೂರಿದ್ದಾರೆ.

ಮತ್ತೆ ಬಿಡ್ಡಿಂಗ್‌ ನಡೆಸಲ್ಲ: ಓಜೋನ್‌ ಗ್ರೂಪ್‌ ಕಾಮಗಾರಿ ಆರಂಭಿಸುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಆದಷ್ಟು ಶೀಘ್ರದಲ್ಲಿಯೇ ಮತ್ತೆ ಬಿಡ್ಡಿಂಗ್‌ ಕರೆಯುವಂತೆ ಕೆಲವು ಕಂಪನಿಗಳು ಫ‌ುಟ್ಬಾಲ್‌ ಸಂಸ್ಥೆಯ ಮೇಲೆ ಒತ್ತಡ
ತಂದಿದ್ದವು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದ ಫ‌ುಟ್ಬಾಲ್‌ ಸಮಿತಿ ಮತ್ತೆ ಬಿಡ್ಡಿಂಗ್‌ ಕರೆಯಲು ನಿರಾಕರಿಸಿದೆ. ಹೀಗಾಗಿ ಓಜೋನ್‌ ಗ್ರೂಪ್‌ ಕಾಮಗಾರಿ ಆರಂಭಿಸುವುದನ್ನೇ ಎದುರು ನೋಡುತ್ತಿದೆ ಎನ್ನಲಾಗಿದೆ.

Advertisement

ಫ‌ುಟ್‌ಬಾಲ್‌ ಮೈದಾನದ ಕೊರತೆ: ಕಂಠೀರವದ ಮೇಲೆ ಒತ್ತಡ
ರಾಜ್ಯದಲ್ಲಿ ಫ‌ುಟ್‌ಬಾಲ್‌ ಕ್ರೀಡೆಯನ್ನು ಅಭಿವೃದಿಟಛಿಪಡಿಸಬೇಕು ಅಂದರೆ ಸೂಕ್ತ ಕ್ರೀಡಾಂಗಣದ ಅಗತ್ಯ ಇರುತ್ತದೆ. ಕ್ರೀಡಾಂಗಣ ಇಲ್ಲದೇ ಯಾವುದೇ ಮಹತ್ವದ ಕೂಟಗಳ ಆತಿಥ್ಯ ದೊರಕುವುದಿಲ್ಲ. ರಾಜ್ಯದಲ್ಲಿ ಆಗುತ್ತಿರುವುದು ಅದೇ ಸಮಸ್ಯೆ. ಫ‌ುಟ್ಬಾಲ್‌ ಕ್ರೀಡಾಂಗಣದ ನವೀ ಕರಣ ಕಾಮಗಾರಿ ಬಿಡ್ಡಿಂಗ್‌ ನಡೆದ 2 ವರ್ಷವಾದರೂ ಇನ್ನೂ ಯಾವುದೇ ಕಾಮಗಾರಿ ಆಗಿಲ್ಲ. ಜೆಎಸ್‌ಡಬ್ಲೂé ಮಾಲಿಕತ್ವದ ಬಿಎಫ್ಸಿ ತಂಡಕ್ಕೆ ಕ್ರೀಡಾಂಗಣ ಸಿಗದೇ ಕಂಠೀರವ ಕ್ರೀಡಾಂಗಣವನ್ನು ಆಶ್ರಯಿಸಿದೆ. ಇದರಿಂದ ಅಥ್ಲೀಟ್‌ಗಳು ಅಭ್ಯಾಸ ಮಾಡಲು ಸಾಧ್ಯವಾಗದೆ ಅತಂತ್ರ ಅನುಭವಿಸುತ್ತಿದ್ದಾರೆ.

ಭುವನೇಶ್ವರದಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಕೂಟವನ್ನೇ ರಾಜ್ಯ ಬಿಟ್ಟುಕೊಡುವಂತಾಗಿದೆ. ಈ ಬಗ್ಗೆ ಉದಯವಾಣಿ ಗ ಸರಣಿ ವರದಿಗಳನ್ನು ಪ್ರಕಟಿಸಿದೆ. 

ಓಜೋನ್‌ ಹೇಳುವುದೇನು?
ನಾವು ಬಿಡ್ಡಿಂಗ್‌ ಪಡೆದಿದ್ದೇವೆ. ಹೀಗಾಗಿ ಅದರಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣವೇ ಕಾಮಗಾರಿ ಆರಂಭಿಸುತ್ತೇವೆ. ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕ್ರೀಡಾಂಗಣ ನಿರ್ಮಿಸುವುದು ನಮ್ಮ ಗುರಿ ಎಂದು ಓಜೋನ್‌ ಮೂಲಗಳು ತಿಳಿಸಿವೆ.

ಈಗಾಗಲೇ ಓಜೋನ್‌ಗೆ ಬಿಡ್ಡಿಂಗ್‌ ಕೊಟ್ಟು ಆಗಿದೆ. ಅವರೇ ನವೀಕರಣ ಕಾಮಗಾರಿ ಆರಂಭಿಸಲಿದ್ದಾರೆ. ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿ ಆರಂಭವಾಗುತ್ತದೆ. ನಮ್ಮಿಂದಲೂ ಕೆಲವು ದಾಖಲೆಗಳು ಸಲ್ಲಿಕೆ ಆಗಲು ತಡವಾಗಿದೆ. ಅದೆಲ್ಲ ಕಾರ್ಯವೂ ಶೀಘ್ರವೇ ಮುಗಿಯಲಿದ್ದು, ಸರ್ಕಾರದ ಅನುಮತಿಗೆ
ಪ್ರಯತ್ನಿಸುತ್ತಿದೇವೆ.

– ಹ್ಯಾರಿಸ್‌, ರಾಜ್ಯ ಫ‌ುಟ್ಬಾಲ್‌ ಸಂಸ್ಥೆ ಅಧ್ಯಕ್ಷ

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next