Advertisement
ಆಹಾ, ಆವತ್ತು ಯಾರ ಮುಖ ನೋಡ್ಕೊಂಡು ಬಸ್ ಹತ್ತಿದ್ದೊ, ಯಾವತ್ತೂ ಸಿಗದೇ ಇದ್ದ ಅದೃಷ್ಟ ಅವತ್ತು ಒಲಿದಿತ್ತು. ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆಗೆ ಬರುವುದೇ ಒಂದು ದೊಡ್ಡ ಸಂತಸ. ಪ್ರಯಾಣದ ಮಧ್ಯೆ ಸಿಗುವ ಕೃಷ್ಣಾ , ಭೀಮಾ, ತುಂಗಭದ್ರಾ ನದಿಗಳನ್ನೆಲ್ಲ ಕಣ್ತುಂಬಿಕೊಳ್ಳೋ ಖುಷಿ ಒಂದೆಡೆಯಾದರೆ, ಜೀನ್ಸ್‌ಪ್ಯಾಂಟು ಟಿ-ಶರ್ಟ್, ಲಿಪ್‌ಸ್ಟಿಕ್ ಹಚ್ಚಿದ ಹುಡುಗಿಯರನ್ನು ನೋಡಿ ನೋಡಿ ಬೇಜಾರಾಗಿದ್ದ ಮನಸ್ಸಿಗೆ ಹಳ್ಳಿ ಹುಡುಗಿಯರನ್ನು ನೋಡುವ ಸಂಭ್ರಮ ಇನ್ನೊಂದೆಡೆ.
Related Articles
Advertisement
ನನ್ನ ಪಾಡಿಗೆ ನಾನು ಕಿಟಕಿಯಾಚೆಗಿನ ಸೌಂದರ್ಯ ಸವಿಯುತ್ತಾ, ಇಯರ್‌ಫೋನ್‌ನಲ್ಲಿ ಹಾಡು ಕೇಳುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಆಕೆಯ ಊರು ಬಂತು. ಛೇ, ಇಳಿದು ಹೋಗ್ತಾಳಲ್ಲ ಅಂತ ಬೇಜಾರಾಯ್ತು. ಬಸ್‌ನಿಂದ ಇಳಿಯಲು ಹಿಂದಿನ ಬಾಗಿಲಿನತ್ತ ಬಂದ ಆ ಹುಡುಗಿ, ನನ್ನೆಡೆಗೆ ಕಿರುನಗೆಯೊಂದನ್ನು ಎಸೆದು, ಇಳಿದು ಹೋದಳು! ನನಗೋ ಸ್ವರ್ಗ ರಪ್ಪಂತ ಕಣ್ಮುಂದೆ ಪಾಸಾದ ಹಾಗಾಯ್ತು! ಆದರೂ, ಡೌಟಾಗಿ ಅಕ್ಕಪಕ್ಕ ನೋಡಿದೆ. ಯಾರೂ ಇರಲಿಲ್ಲ. ಅಂದ್ರೆ, ಅವಳು ನನಗೇ ಸ್ಮೈಲ್ ಕೊಟ್ಟಿದ್ದು! ಚೆಲುವೇ, ಇಳಿಯುವ ಮೊದಲು ನಗುವಿನ ಜೊತೆಗೆ ನಂಬರ್ ಅನ್ನೂ ಕೊಡಬಾರದಿತ್ತೇನೇ? ಮತ್ತೆ ಯಾವಾಗ ಸಿಗ್ತಿàಯಾ ಹೇಳು?
ವೀರೇಶ ಕೆಂಭಾವಿ, ಕಲಬುರಗಿ