ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸುವ ಕರೆನ್ಸಿಗಳಲ್ಲಿ ಗಣಪತಿ ಮತ್ತು ಲಕ್ಷ್ಮೀ ದೇವಿಯ ಫೋಟೋವನ್ನು ಮುದ್ರಿಸಬೇಕು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆಗೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರತಿಕ್ರಿಯಿಸಿದ್ದು, ಹೊಸ ನೋಟುಗಳಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಚಿತ್ರವನ್ನು ಯಾಕೆ ಮುದ್ರಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಪಾಕ್ ಪಂದ್ಯದ ಬಳಿಕ ನಾನು ರಾಜೀನಾಮೆ ಹೇಳುತ್ತಿದ್ದೆ…: ಆಚ್ಚರಿಯ ವಿಚಾರ ಬಿಚ್ಚಿಟ್ಟ ಅಶ್ವಿನ್
ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಪೋಟೋ ನಂತರ ಅಂಬೇಡ್ಕರ್ ಫೋಟೊವನ್ನು ಮುದ್ರಿಸುವ ಮೂಲಕ ಆಧುನಿಕ ಭಾರತದ ಪ್ರತಿಭೆಯನ್ನು ಒಗ್ಗೂಡಿಸಿದಂತಾಗುತ್ತದೆ. ಏಕೆಂದರೆ ಈ ಇಬ್ಬರು ನಾಯಕರು ಅಹಿಂಸೆ, ಸಂವಿಧಾನ ಮತ್ತು ಸಮಾನತೆಗಾಗಿ ಶ್ರಮಿಸಿದ್ದಾರೆ ಎಂದು ತಿವಾರಿ ತಿರುಗೇಟು ನೀಡಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ಇದನ್ನು ತಡೆಯಲು ಕರೆನ್ಸಿಯಲ್ಲಿ ಗಾಂಧೀಜಿ ಫೋಟೊ ಜತೆ ಗಣಪತಿ ಮತ್ತು ಲಕ್ಷ್ಮೀ ದೇವಿಯ ಫೋಟೋವನ್ನು ಮುದ್ರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಕೇಜ್ರಿವಾಲ್ ಸಲಹೆಗೆ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೀಶ್ ರಾಣೆ, 200 ರೂಪಾಯಿ ಕರೆನ್ಸಿ ಮೇಲೆ ಛತ್ರಪತಿ ಶಿವಾಜಿಯ ಫೋಟೋವನ್ನು ಹಾಕಿ…ಇದು ಸೂಕ್ತವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.