Advertisement

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

01:42 AM Jan 24, 2022 | Team Udayavani |

ಹೊಸದಿಲ್ಲಿ: ನೇತಾಜಿಯವರ ಸಾವಿನ ರಹಸ್ಯವನ್ನು ಕೇಂದ್ರ ಸರಕಾರ ಸದ್ಯದಲ್ಲೇ ಬಯಲು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Advertisement

ದಿಲ್ಲಿಯ ಇಂಡಿಯಾ ಗೇಟ್‌ ಬಳಿ, ನೂತನವಾಗಿ ನಿರ್ಮಿಸಲಾಗಿರುವ ಸ್ವತಂತ್ರ ಸೇನಾನಿ ಸುಭಾಷ್‌ ಚಂದ್ರ ಬೋಸ್‌ ಅವರ ಹಾಲೋಗ್ರಾಮ್‌ ಪ್ರತಿಮೆ­ಯನ್ನು ಅನಾವರಣಗೊಳಿಸಿದ ಅನಂತರ ಅವರು ಮಾತನಾಡಿದರು. ನೇತಾಜಿಯವರ ಸಾವಿನ ಹಿಂದಿನ ರಹಸ್ಯವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯೋನ್ಮುಖವಾಗಿದೆ. ಸದ್ಯದಲ್ಲೇ ಅದರ ವರದಿಯನ್ನು ಅಧಿಕೃತವಾಗಿ ಪ್ರಕಟಿಸ ಲಾಗುತ್ತದೆ ಎಂದು ಮೋದಿ ತಿಳಿಸಿದರು.

ಬೋಸ್‌ ಪ್ರಬಂಧನ್‌ ಪುರಸ್ಕಾರ ಪ್ರದಾನ: ಇದೇ ವೇಳೆ, “ಸುಭಾಷ್‌ ಚಂದ್ರ ಬೋಸ್‌ ಆಪಾª ಪ್ರಬಂಧನ್‌ ಪುರಸ್ಕಾರ್‌’ ಪ್ರಶಸ್ತಿಗಳನ್ನು ಪ್ರಧಾನಿ ಮೋದಿ ಪ್ರದಾನ ಮಾಡಿದರು. ವಿಪತ್ತು ನಿರ್ವಹಣ ಕ್ಷೇತ್ರದಲ್ಲಿ ವೀರೋಚಿತ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಮೀಸಲಿರಿಸ ಲಾಗಿದೆ. ಈ ಪ್ರಶಸ್ತಿಯು ತಲಾ 51 ಲಕ್ಷ ರೂ.ಗಳನ್ನು ಒಳಗೊಂಡಿದೆ.

ಅಂಬೇಡ್ಕರ್‌ ಹೆಸರಿನಲ್ಲಿ 5 ಪುಣ್ಯ ಕ್ಷೇತ್ರ: “ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಸ್ಮಾರಕಗೊಳ­ಗೊಂಡ 5 ಪುಣ್ಯಕ್ಷೇತ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ ಪಟೇಲರ ಪುತ್ಥಳಿಯು ಏಕತಾ ಪ್ರತಿಮೆಯಾಗಿ ಸರ್ವರನ್ನೂ ಆಕರ್ಷಿಸಿದೆ. ನಾವು ದ್ವೀಪವೊಂದಕ್ಕೆ ಬೋಸ್‌ ಹೆಸರನ್ನಿಟ್ಟಿದ್ದೇವೆ. ಅಲ್ಲಿ ಅವರದ್ದೊಂದು ಸ್ಮಾರಕವನ್ನೂ ಲೋಕಾರ್ಪಣೆ ಮಾಡಲಾಗಿದೆ. ಇದು, ಬೋಸ್‌ ಅವರೊಬ್ಬರಿಗೆ ಮಾತ್ರ ಸಂದ ಗೌರವವಲ್ಲ, ಅವರು ಕಟ್ಟಿದ ಇಂಡಿಯನ್‌ ನ್ಯಾಶನಲ್‌ ಆರ್ಮಿಯ ಎಲ್ಲ ಸೇನಾನಿಗಳಿಗೆ ಸಂದ ಗೌರವವಾಗಿದೆ’ ಎಂದು ಮೋದಿ ತಿಳಿಸಿದರು.

ಚಿತಾಭಸ್ಮ ಡಿಎನ್‌ಎ ಟೆಸ್ಟ್‌ಗೆ ಸಿಕ್ಕಿತ್ತೇ ಅನುಮತಿ?
ಕೋಲ್ಕತಾ: ಟೋಕಿಯೊದ ಬೌದ್ಧ ಧರ್ಮೀಯರ ಪ್ರಾರ್ಥನಾ ಕೇಂದ್ರ ರೆಂಕೋಜಿ ಯಲ್ಲಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರದ್ದು ಎನ್ನಲಾಗಿರುವ ಚಿತಾಭಸ್ಮದ ಡಿಎನ್‌ಎ ಪರೀಕ್ಷೆಗೆ ಅನುಮತಿ ಲಭ್ಯವಾಗಿತ್ತು. ಆದರೆ ಮುಖರ್ಜಿ ಆಯೋ ಗವು ಅದನ್ನು ನಿರ್ಲ ಕ್ಷಿ ಸಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

Advertisement

ಈ ಬಗ್ಗೆ ಆ ಪ್ರಾರ್ಥನಾ ಕೇಂದ್ರದಲ್ಲಿ 2005ರಲ್ಲಿ ಮುಖ್ಯ ಗುರುಗಳಾಗಿದ್ದ ನಿಚಿಕೋ ಮುಚಿಝುಕಿ ಅವರು 2005ರಲ್ಲಿ ನ್ಯಾ| ಎಂ.ಕೆ.ಮುಖರ್ಜಿ ನೇತೃತ್ವದ ಆಯೋಗಕ್ಕೆ ಲಿಖಿತ ಅನುಮತಿ ನೀಡಿದ್ದರು ಎಂದು ಗೊತ್ತಾಗಿದೆ. ಜಪಾನಿ ಭಾಷೆಯ­ಲ್ಲಿದ್ದ ಈ ಪತ್ರವನ್ನು ಇತ್ತೀಚೆಗೆ ಆಂಗ್ಲ ಭಾಷೆಗೆ ತರ್ಜುಮೆ­ಗೊಳಿಸಿದಾಗ ಈ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಸ್‌ ಅವರ ಮರಿ ಮೊಮ್ಮಗಳು ಮಾಧುರಿ ಬೋಸ್‌, ಪತ್ರದ ಮರು ತರ್ಜುಮೆ ವೇಳೆ ಹಲವು ಅಂಶಗಳು ವರದಿಯಲ್ಲಿ ಪ್ರಸ್ತಾವಗೊಳ್ಳದೇ ಇದ್ದದ್ದೂ ಅರಿವಿಗೆ ಬಂದಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next