Advertisement
ಲೆಬನಾನ್ ಹೆಜ್ಬುಲ್ಲಾ ಬಂಡುಕೋರರು ಖರೀದಿಸಿದ್ದ ಪೇಜರ್‌ಗಳನ್ನು ಬಲ್ಗೇರಿಯಾ ಮೂಲದ ಕಂಪೆನಿಯೊಂದು ತಯಾರಿಸಿದೆ. ಈ ಕಂಪೆನಿಯು ಕೇರಳ ಮೂಲದ ರಿನ್ಸನ್ ಜೋಸ್ ಅವರಿಗೆ ಸೇರಿದೆ. ಆದರೆ ಬಲ್ಗೇರಿಯಾದ ಭದ್ರತಾ ಸಂಸ್ಥೆಯು ಈ ಆರೋಪವನ್ನು ತಳ್ಳಿ ಹಾಕಿದ್ದು, ಕಂಪೆನಿಗೆ ಕ್ಲೀನ್‌ಚಿಟ್ ನೀಡಿದೆ.
ಲೆಬನಾನ್‌ನಲ್ಲಿ ಸ್ಫೋಟಗೊಂಡ ಪೇಜರ್‌ಗಳನ್ನು ತೈವಾನ್ ಕಂಪೆನಿ ಗೋಲ್ಡ್ ಅಪೋಲೋ ಪೂರೈಸಿತ್ತು ಎಂದು ಹೇಳಲಾಗಿತ್ತು. ಆದರೆ ಕಂಪೆನಿಯು ಈ ಸ್ಪಷ್ಟನೆ ನೀಡಿ, ಈ ಪೇಜರ್‌ಗಳನ್ನು ತಾನು ತಯಾರಿಸಿದ್ದಲ್ಲ. ಪೇಜರ್‌ಗಳಿಗೆ ನಮ್ಮ ಬ್ರ್ಯಾಂಡ್ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ.
Related Articles
ಸ್ಫೋಟಗೊಂಡ ಪೇಜರ್‌ಗಳನ್ನು ಹಂಗೇರಿ ಮೂಲದ ಬಿಎಸಿ ಕನ್ಸಲ್ಟಿಂಗ್ ಕಂಪೆನಿ ತಯಾ ರಿಸಿದೆ. ಇದಕ್ಕಾಗಿ ಅದು ತಮ್ಮ ಜತೆ 3 ವರ್ಷ ಗಳ ಒಪ್ಪಂದ ಮಾಡಿಕೊಂಡಿತ್ತು ಎಂದು ತೈವಾನ್ ಕಂಪೆನಿ ಹೇಳಿಕೊಂಡಿದೆ.
Advertisement
ವಾಸ್ತವದಲ್ಲಿ ಬಿಎಸಿ ಕನ್ಸಲ್ಟಿಂಗ್ ಕಂಪೆನಿಯು ಇಸ್ರೇಲ್ ಸೃಷ್ಟಿಸಿದ ನಕಲಿ ಕಂಪೆನಿಯಾಗಿದೆ ಎನ್ನಲಾಗಿದೆ. ಘಟನೆಯ ಬಳಿಕ ತನಿಖೆಯ ಹಾದಿ ತಪ್ಪಿಸಲು ಇಸ್ರೇಲ್ ನಕಲಿ ಕಂಪೆನಿಗಳ ಹೆಸರಲ್ಲಿ ವ್ಯವಹಾರ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇರಳ ವ್ಯಕ್ತಿ ಕಂಪೆನಿಗೆ ತಳಕು: ವಾಸ್ತವದಲ್ಲಿ ಪೇಜರ್‌ಗಳಿಗಾಗಿ ಬಿಎಸಿ ಕನ್ಸಲ್ಟಿಂಗ್ ಕಂಪೆನಿಯು ತೈವಾನ್‌ನ ಗೋಲ್ಡ್ ಅಪೋಲೋ ಹಾಗೂ ನೋರ್ಟ ಗ್ಲೋಬಲ್(ಕೇರಳ ವ್ಯಕ್ತಿಯ ಕಂಪೆನಿ)ಜತೆ ಒಪ್ಪಂದ ಮಾಡಿಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖೀಸಿ ಬಲ್ಗೇರಿಯಾದ ಮಾಧ್ಯಮವೊಂದು ವರದಿ ಮಾಡಿದೆ. ಪೇಜರ್‌ಗಳ ಖರೀದಿಗಾಗಿ ಈ ನೋರ್ಟ ಗ್ಲೋಬಲ್ ಹಣ ವರ್ಗಾವಣೆ ಮಾಡಿತ್ತು ಎಂದು ಹೇಳಲಾಗಿದೆ.
ರಿನ್ಸನ್ ತಂದೆ ಟೈಲರ್! ರಿನ್ಸನ್ ಜೋಸ್ ತಂದೆ ವಯನಾಡಿನ ಮಾನಂತವಾಡಿಯಲ್ಲಿ ಟೈಲರ್ ಆಗಿದ್ದಾರೆ. ಸ್ಥಳೀಯವಾಗಿ ಅವರು ಟೈಲರ್ ಜೋಸ್ ಎಂದೇ ಖ್ಯಾತರು. ನವೆಂಬರ್‌ನಲ್ಲಿ ರಿನ್ಸನ್ ನಮ್ಮ ಭೇಟಿಗೆ ಬಂದು 2 ತಿಂಗಳು ಇಲ್ಲಿಯೇ ಇದ್ದು ವಾಪಸ್ ಹೋಗಿದ್ದ. ಆತ ಯಾವ ಕಂಪೆನಿ ಹೊಂದಿದ್ದಾನೆ ಎಂದು ತಿಳಿಸಿರಲಿಲ್ಲ ಎಂದು ಅವರ ಮಾವ ತಂಕಚನ್ ತಿಳಿಸಿದ್ದಾರೆ.
ಕೇರಳ ವ್ಯಕ್ತಿ ಕಂಪೆನಿಗೆಬಲ್ಗೇರಿಯಾ ಕ್ಲೀನ್‌ಚಿಟ್
ಪೇಜರ್‌ಗಳ ಸ್ಫೋಟಕ್ಕೆ ಸಂಬಂಧಿಸಿ ದಂತೆ ಬಲ್ಗೇರಿಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಬಿಎಎನ್‌ಎಸ್), 2022ರಲ್ಲಿ ಆರಂಭವಾದ ಕೇರಳದ ರಿನ್ಸನ್ ಜೋಸ್ ಅವರ ಕಂಪೆನಿ ನೋರ್ಟ ಗ್ಲೋಬಲ್‌ಗೆ ಕ್ಲೀನ್ ಚಿಟ್ ನೀಡಿದೆ. ಅಲ್ಲದೆ ಬಲ್ಗೇ ರಿಯಾದ ಮೂಲಕ ಯುರೋಪ್‌ಗೆ ಈ ಪೇಜರ್‌ಗಳು ರವಾನೆಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಂಸ್ಥೆ ತಿಳಿಸಿದೆ. ಬಿಎಸಿ ಕನ್ಸಲ್ಟಿಂಗ್ ಕೂಡ ನಕಲಿ ಕಂಪೆನಿಯಾಗಿದ್ದು, ಯಾವುದೇ ಚಟು ವಟಿಕೆಯನ್ನು ಹೊಂದಿಲ್ಲ ಎಂದು ತಿಳಿಸಿದೆ. ಏನಿದು ಆರೋಪ?
– ಪೇಜರ್ ಸ್ಫೋಟದಲ್ಲಿ ವಯನಾಡು ಮೂಲದ ರಿನ್ಸನ್ ಜೋಸ್‌ರ ಕಂಪೆನಿ ತಳಕು.
– ಪೇಜರ್ ಖರೀದಿ ಸಂಬಂಧ ರಿನ್ಸನ್‌ರ ನೋರ್ಟ ಗ್ಲೋಬಲ್‌ನಿಂದ ಹಣ ವರ್ಗಾವಣೆ.
– ರಿನ್ಸನ್ ಜೋಸ್ ಕಂಪೆನಿ ಯಾವುದೇ ಪಾತ್ರವಲ್ಲ ಎಂದ ಬಲ್ಗೇರಿಯಾ ತನಿಖಾ ಸಂಸ್ಥೆ.
– ಸ್ಫೋಟಗೊಂಡ ಪೇಜರ್‌ಗಳ ಬಲ್ಗೇರಿಯಾ ಮೂಲಕ ಯುರೋಪ್‌ಗೆ ಹೋಗಿಲ್ಲ: ಸಂಸ್ಥೆ.
– ತನಿಖೆ ಹಾದಿ ತಪ್ಪಿಸಲು ಇಸ್ರೇಲ್‌ನಿಂದ ನಕಲಿ ಕಂಪೆನಿಗಳ ಸೃಷ್ಟಿ: ವರದಿಗಳು.