Advertisement
ನಿರ್ಮಲಾ ಸೀತಾರಾಮನ್ಕೇಂದ್ರ ಸಂಪುಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸು ತ್ತಿರುವ ಮೊದಲ ಮಹಿಳೆ. ವಾ ಣಿಜ್ಯ ಖಾತೆ ಸಹಾಯಕ ಸಚಿವೆಯಾಗಿಯೂ, ಪಕ್ಷದ ವಕ್ತಾರೆಯಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿಷ್ಠಾವಂತೆ.
ಗ್ರಾಮೀಣ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಸಾಕಾರಗೊಳಿಸಿದ ಹೆಗ್ಗಳಿಕೆ ಇವರಿಗೆ ಸಲ್ಲಬೇಕು. ಜತೆಗೆ, ಎಲ್‌ಪಿಜಿ ಸಬ್ಸಿಡಿಯನ್ನು ತೊರೆಯಿರಿ ಎಂಬ
ಪ್ರಧಾನಿ ಕರೆಗೂ ಜನರು ಸಕಾರಾತ್ಮಕವಾಗಿ ಸ್ಪಂದಿಸಲು ಇವರೇ ಕಾರಣ.
Related Articles
Advertisement
ಆಲೊ#àನ್ಸ್ ಕನ್ನಂಥಾನಮ್ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ಆಡಳಿತಾತ್ಮಕ ಸಾಮರ್ಥ್ಯದಿಂದಲೇ ಹೆಸರಾದವರು. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಆಗ 15 ಸಾವಿರ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದವರು. ಕೊಟ್ಟಾಯಂ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತಂದವರು. ಆಯ್ಕೆ ಏಕೆ?- ಕೇರಳದಲ್ಲಿ ಪದಾರ್ಪಣೆ ಮಾಡಲು ಕಸರತ್ತು ನಡೆಸುತ್ತಿರುವ ಬಿಜೆಪಿ, ಕನ್ನಂಥಾನಮ್‌ಗೆ ಸಚಿವ ಸ್ಥಾನ ನೀಡುವ ಮೂಲಕ ರಾಜಕೀಯ ಕಾರ್ಯತಂತ್ರವನ್ನು ಹೆಣೆದಿದೆ. ಕೇರಳದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆಯೂ ನಿರ್ಣಾಯಕವಾಗಿರುವ ಕಾರಣ, ಅವ ರನ್ನು ಸೆಳೆಯುವುದೂ ಇದರ ಹಿಂದಿನ ಉದ್ದೇಶ. ಪಿಯೂಷ್ ಗೋಯಲ್
ವಿದ್ಯುತ್, ಕಲ್ಲಿದ್ದಲು, ಹೊಸ ಮತ್ತು ನವೀಕರಿಸ ಬಹುದಾದ ಇಂಧನ ಸಹಾಯಕ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಕಲ್ಪಿಸುವಂಥ ಕೇಂದ್ರ ಸರಕಾರದ ಗುರಿಯನ್ನು ತಕ್ಕಮಟ್ಟಿಗೆ ತಲುಪು ವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಲಿದ್ದಲು ಕ್ಷೇತ್ರ ದಲ್ಲೂ ಇವರ ಸಾಧನೆ ಶ್ಲಾಘನೀಯ. ಆಯ್ಕೆ ಏಕೆ?:ಇಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ ಕೆಲಸ ಮಾಡಿದ್ದು ಗೋಯಲ್ ಅವರ ಸಾಧನೆ. ವಿದ್ಯುತ್ ಸಚಿವರಾಗಿ ಅವರು ಮಾಡಿದ ಕೆಲಸ ಮೋದಿ ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿ ಅವರಿಗೆ ರೈಲ್ವೆ ಹೊಣೆ ಹೊರಿಸಿ, ಆ ಇಲಾಖೆ ಯನ್ನು ಹಳಿಗೆ ತರಲು ಯತ್ನಿಸಿದ್ದಾರೆ ಮೋದಿ. ವಿರೇಂದ್ರ ಕುಮಾರ್
ಬಾಲ್ಯದಿಂದಲೇ ಆರೆಸ್ಸೆಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದವರು. ಗೋರಕ್ಷಣೆಯಲ್ಲಿ ಇವರ ಬದ್ಧತೆ ಮೆಚ್ಚುವಂಥದ್ದು. ಬಹಳ ಸರಳ ವ್ಯಕ್ತಿತ್ವ. ಎಷ್ಟೋ ಬಾರಿ ಯಾರು ಸಿಕ್ಕಿದರೋ ಅವರ ಬೈಕ್‌ಗೆ ಕೈ ತೋರಿಸಿ ಲಿಫ್ಟ್ ಪಡೆದವರು. ದೆಹಲಿಗೆ ಬಂದರೂ, ಆಟೋದಲ್ಲೇ ಪ್ರಯಾಣ ಆಯ್ಕೆ ಏಕೆ?- ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಕಲ್ಪಿಸಲಾಗಿದೆ. ಜತೆಗೆ, ವೀರೇಂದ್ರ ಅವರು ಬುಂದೇಲ್‌ಖಂಡ್ ಪ್ರದೇಶದಲ್ಲಿನ ಬಿಜೆಪಿಯ ಪ್ರಮುಖ ದಲಿತ ನಾಯಕ. ಈ ಪ್ರದೇಶದಲ್ಲಿ ಬಿಎಸ್ಪಿ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಿ ರುವಾಗಲೇ ದಲಿತರಿಗೆ ರಾಜಕೀಯ ಸಂದೇಶ ವೊಂದನ್ನು ರವಾನಿಸುವುದೂ ಉದ್ದೇಶ. ಗಜೇಂದ್ರ ಸಿಂಗ್ ಶೇಖಾವತ್
-ರಾಜಸ್ಥಾನದ ಜೋಧ್‌ಪುರದವರು. ಆರೆಸ್ಸೆಸ್‌ನ ಜನಕಲ್ಯಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ. ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳನ್ನು ಒಳಗೊಂಡಂತೆ
ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಾಗರಿಕರನ್ನೇ ಪರ್ಯಾಯವಾಗಿ ರಕ್ಷಣಾ ವ್ಯವಸ್ಥೆಯನ್ನಾಗಿ ಬಳಸುವಂಥ ಗುರಿಯನ್ನು ಹಾಕಿಕೊಂಡವರು. ಆಯ್ಕೆ ಏಕೆ?– ಕೇಂದ್ರ ಸಂಪುಟದಲ್ಲಿ ರಾಜಸ್ಥಾನದವರಿಗೆ ಮಾನ್ಯತೆ ಸಿಗುತ್ತಿಲ್ಲ ಎಂಬ ಆರೋಪವನ್ನು ದೂರ ಮಾಡುವ ನಿಟ್ಟಿನಲ್ಲಿ ರಾಜಸ್ಥಾನದವರೇ ಆದ ಶೇಖಾವತ್‌ಗೆ ಸಚಿವ ಸ್ಥಾನ ನೀಡಲಾಗಿದೆ. ಮುಖಾ¤ರ್ ಅಬ್ಟಾಸ್ ನಕ್ವಿ
ಉತ್ತರಪ್ರದೇಶದ ಶಿಯಾ ಪಂಗಡಕ್ಕೆ ಸೇರಿದವರು.ತಮ್ಮ ಕೈಯ್ಯಲ್ಲಿದ್ದ ಎರಡು ಹುದ್ದೆಗಳನ್ನೂ ಚೆನ್ನಾಗಿಯೇ ನಿರ್ವಹಿಸುವ ಮೂಲಕ ನಂಬಿಕೆ ಉಳಿಸಿಕೊಂಡಿದ್ದಾರೆ. ಆಯ್ಕೆ ಏಕೆ?: ಇವರು ಬಿಜೆಪಿಯಲ್ಲಿನ ಪ್ರಮುಖ ಮುಸ್ಲಿಂ ನಾಯಕ. ಇವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮುಸ್ಲಿಮರನ್ನು ಓಲೈಸುವ ಲೆಕ್ಕಾಚಾರವೂ ಇದೆ. ಜತೆಗೆ, ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಇವರ ಪ್ಲಸ್ ಪಾಯಿಂಟ್. ಹರ್‌ದೀಪ್ ಪುರಿ
4 ದಶಕಗಳ ರಾಜತಾಂತ್ರಿಕ ಅನುಭವ ಹೊಂದಿ ರುವ ನಿವೃತ್ತ ಅಧಿಕಾರಿ. ನ್ಯೂಯಾರ್ಕ್, ಜಿನೇವಾದಲ್ಲಿ ವಿಶ್ವಸಂಸ್ಥೆಯ ಭಾರತದ ರಾಯ ಭಾರಿಯಾಗಿ ಕಾರ್ಯನಿರ್ವಹಿಸಿದವರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕೆಲವೇ ಕೆಲವು ಭಾರತೀಯರಲ್ಲಿ ಒಬ್ಬರು. ವಿಶ್ವಸಂಸ್ಥೆಯ ಉಗ್ರ ನಿಗ್ರಹ ಸಮಿತಿಯಲ್ಲಿದ್ದ ಏಕೈಕ ಭಾರತೀಯ. ಆಯ್ಕೆ ಏಕೆ?- ಇವರ ಆಡಳಿತಾತ್ಮಕ ಕೌಶಲ್ಯಗಳನ್ನು ಮೆಚ್ಚಿ ಆಯ್ಕೆ ಮಾಡಲಾಗಿದೆ. ಮುಂದಿನ ಲೋಕಸಭೆ ಚುನಾವಣೆ ವೇಳೆ ಆಡಳಿತದಲ್ಲಿ ಸುಧಾರಣೆಗೆ ಆದ್ಯತೆ ನೀಡಬೇಕು ಎಂಬುದು ಪ್ರಧಾನಿ ಮೋದಿ ಅವರ ಉದ್ದೇಶ ಎಂಬುದಕ್ಕೆ ಇವರ ಆಯ್ಕೆಯೇ ಸಾಕ್ಷಿ. ಆರ್.ಕೆ.ಸಿಂಗ್
ಮಾಜಿ ಗೃಹ ಕಾರ್ಯದರ್ಶಿ. ವಿಶೇಷವೆಂದರೆ, 1990ರಲ್ಲಿ ರಥಯಾತ್ರೆಯಲ್ಲಿ ತೊಡಗಿದ್ದ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ಬಂಧಿಸುವಂಥ ಜವಾಬ್ದಾರಿಯನ್ನು ಇವರಿಗೇ ವಹಿಸಲಾಗಿತ್ತು. ಮಾಲೇಗಾಂವ್, ಸಂಜೋತಾ ಸ್ಫೋಟದಲ್ಲಿ ಹಿಂದೂ ಪ್ರತ್ಯೇಕತಾವಾದಿಗಳ ಹೆಸರು ಬಿಡುಗಡೆ ಮಾಡಿದವರೂ ಇವರೇ. ಆಯ್ಕೆ ಏಕೆ?- ರಜಪೂತ ಸಮುದಾಯದ ರಾಜೀವ್ ಪ್ರತಾಪ್ ರೂಡಿ ಅವರ ರಾಜೀನಾಮೆ ಪಡೆದ ಹಿನ್ನೆಲೆಯಲ್ಲಿ ಆ ಸಮುದಾಯವನ್ನು ಪ್ರತಿನಿಧಿಸಲೆಂದು ಇವರನ್ನು ನೇಮಕ ಮಾಡಲಾಗಿದೆ. ಜಾತಿ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡಿದೆ. ಅಶ್ವಿನಿ ಕುಮಾರ್ ಚೌಬೆ
2014ರ ಲೋಕಸಭೆ ಚುನಾವಣೆ ವೇಳೆ ಬಿಹಾರದ ಬಕ್ಸಾರ್ ಕ್ಷೇತ್ರವನ್ನು ಆರ್‌ಜೆಡಿಯಿಂದ ತಮ್ಮ ವಶಕ್ಕೆ ಪಡೆದುಕೊಂಡವರು. ಇವರೊಬ್ಬ ಆಕ್ರಮಣಕಾರಿ ನಾಯಕ. ಹಾಲಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಹಾಗೂ ಅಶ್ವಿನಿ ಕುಮಾರ್ ಚೌಬೆ ಹಾವು- ಮುಂಗುಸಿಯಿದ್ದಂತೆ ಎನ್ನುವುದು ಮತ್ತೂಂದು ವಿಶೇಷ. ಆಯ್ಕೆ ಏಕೆ?- ಬಿಹಾರದಲ್ಲಿ ಹಿಂದುಳಿದ ವರ್ಗದ ನಾಯಕ ನಿತೀಶ್ ಜತೆ ಎನ್‌ಡಿಎ ಕೈಜೋಡಿಸಿರುವುದ ರಿಂದ ಇಲ್ಲಿನ ಬ್ರಾಹ್ಮಣ ಸಮುದಾಯ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿದೆ. ಕಾಂಗ್ರೆಸ್ ಕೂಡ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಮುಂದಿಟ್ಟುಕೊಳ್ಳಲು ಚಿಂತನೆ ನಡೆಸುತ್ತಿದೆ. ಇದನ್ನು ಮನಗಂಡೇ ಚೌಬೆ ಅವರಿಗೆ ಮೋದಿ-ಶಾ ಜೋಡಿ ಸಚಿವ ಸ್ಥಾನ ಕಲ್ಪಿಸಿದೆ. ಸತ್ಯಪಾಲ್ ಸಿಂಗ್
ರಾಜಕೀಯ ಸೇರಲೆಂದೇ ಮುಂಬಯಿ ಪೊಲೀಸ್ ಆಯುಕ್ತ ಹುದ್ದೆಯನ್ನು ತೊರೆದವರು. 90ರ ದಶಕದಲ್ಲಿ ಮುಂಬಯಿ ನಲ್ಲಿದ್ದ ಸಂಘಟಿತ ಅಪರಾಧ ಜಾಲದ ಬೆನ್ನುಮೂಳೆಯನ್ನೇ ಮುರಿದುಹಾಕಿದ ಅಧಿಕಾರಿ. ಮಿಷನ್ ಮೃತ್ಯುಂಜಯ ಎಂಬ ಕಾರ್ಯಕ್ರಮ ಆಯೋಜಿಸಿರುವ ಹೆಗ್ಗಳಿಕೆ ಇವರದ್ದು. ಸಂಸತ್‌ನಲ್ಲೂ ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಸದನದ ಗಮನಕ್ಕೆ ತರುತ್ತಿದ್ದರು. ಆಯ್ಕೆ ಏಕೆ?- ಉತ್ತರಪ್ರದೇಶದ ಪೂರ್ವ ಭಾಗದವ ರಾದ ಸಂಜೀವ್ ಬಲ್ಯಾನ್‌ರ ಜಾಗಕ್ಕೆ ಜಾಟ್ ಬಾಹುಳ್ಯವಿ ರುವ ಅದೇ ಪ್ರದೇಶದವರನ್ನೇ ತರಬೇಕಾಗಿತ್ತು. ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಆರೋಪ ಹೊರಿಸುವಂತೆ ಯುಪಿಎ ಸರಕಾರ ನನ್ನ ಮೇಲೆ ಒತ್ತಡ ತಂದಿತ್ತು ಎಂದು 2016ರಲ್ಲಿ ಸತ್ಯಪಾಲ್ ಆರೋಪಿಸಿದ್ದರು. ಶಿವಪ್ರತಾಪ್ ಶುಕ್ಲಾ
ಉತ್ತರಪ್ರದೇಶದ ಪೂರ್ವ ಭಾಗದವರಾದ ಶುಕ್ಲಾ ಅವರು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಬಲ ವಿರೋಧಿ ಎಂದರೆ ಅಚ್ಚರಿಯಾಗದೇ ಇರದು. ಆದರೂ, ಪಕ್ಷದಲ್ಲಿ ಅವರ ಪ್ರಭಾವ ಕಮ್ಮಿಯೇನೂ ಇಲ್ಲ. ರಾಜ್ಯದ ಸಂಪುಟ ಸಚಿವರಾಗಿದ್ದ ವೇಳೆ, “ಎಲ್ಲರಿಗೂ ಶಿಕ್ಷಣ’, ಕೈದಿಗಳ ಪರಿಸ್ಥಿತಿ ಸುಧಾರಣೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಆಯ್ಕೆ ಏಕೆ?- ಉತ್ತರಪ್ರದೇಶದ ಬ್ರಾಹ್ಮಣ ಸಮುದಾಯ ವನ್ನು ಪ್ರತಿನಿಧಿಸುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕಿತ್ತು. ಈ ಮೂಲಕ ಸಾಂಪ್ರದಾಯಿಕ ಬ್ರಾಹ್ಮಣ ಠಾಕೂರರ ಮತಗಳನ್ನು ಉಳಿಸಿಕೊಳ್ಳುವುದು ಮೋದಿ ಲೆಕ್ಕಾಚಾರ. ಜತೆಗೆ, ಸಂಘಟನಾ ಚತುರತೆ ಮತ್ತು ಅನುಭವ ಶುಕ್ಲಾರ ಪ್ಲಸ್ ಪಾಯಿಂಟ್. ನಿತೀಶ್, ಉದ್ಧವ್‌ಗೆ ಅಸಮಾಧಾನ
ಪ್ರಧಾನಿ ಮೋದಿ ಅವರ ಸಂಪುಟ ಪುನಾರಚನೆಯು ಹೊಸದಾಗಿ ಎನ್‌ಡಿಎ ತೆಕ್ಕೆಗೆ ಬಿದ್ದಿರುವ ಜೆಡಿಯು ಹಾಗೂ ಈಗಾಗಲೇ ಎನ್‌ಡಿಎ ಜತೆಗಿರುವ ಶಿವ ಸೇನೆಯ ಅಸಮಾಧಾನಕ್ಕೆ ಕಾರಣವಾಗಿದೆ. ಬಿಹಾರದಲ್ಲಿ ಮಹಾಮೈತ್ರಿಯನ್ನು ಕೊನೆ ಗಾಣಿಸಿ ಎನ್‌ಡಿಎಯತ್ತ ಮುಖಮಾಡಿದ್ದ ಜೆಡಿಯುಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಶನಿವಾರ ರಾತ್ರಿಯಾಗುತ್ತಲೇ ಜೆಡಿಯು ಆಸೆಗೆ ತಣ್ಣೀರು ಬಿತ್ತು. ಜೆಡಿಯುನ ಯಾರ ಹೆಸರೂ ಪಟ್ಟಿಯಲ್ಲಿಲ್ಲ ಎಂಬ ಮಾಹಿತಿ ಹೊರಬಿತ್ತು. ಇದರಿಂದ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ಜೆಡಿಯುಗೆ 2 ಸಚಿವ ಸ್ಥಾನವನ್ನು ನೀಡಲು ಪ್ರಧಾನಿ ಮುಂದಾಗಿದ್ದರು. ಆದರೆ, ಆ ಖಾತೆಗಳು ನಿತೀಶ್ ಅವರಿಗೆ ರುಚಿಸಿರಲಿಲ್ಲ. ಪಕ್ಷಕ್ಕೆ ರೈಲ್ವೆಯಂಥ ಪ್ರಮುಖ ಖಾತೆ ನೀಡಬೇಕು ಎಂಬುದು ನಿತೀಶ್‌ರ ಬೇಡಿಕೆ ಯಾಗಿತ್ತು. ಜತೆಗೆ, ನಮ್ಮ ಪಕ್ಷವನ್ನು ರಾಮ್‌ವಿಲಾಸ್ ಪಾಸ್ವಾನ್‌ರ ಎಲ್‌ಜೆಪಿಯೊಂದಿಗೆ ಹೋಲಿಕೆ ಮಾಡಬೇಡಿ ಎಂದೂ ನಿತೀಶ್ ಸೂಚ್ಯವಾಗಿ ನುಡಿದಿದ್ದರು ಎನ್ನಲಾಗಿದೆ. ಎನ್‌ಡಿಎ ಸತ್ತುಹೋಯಿತು: ಇನ್ನೊಂ ದೆಡೆ, ಎನ್‌ಡಿಎ ಮತ್ತೂಂದು ಅಂಗಪಕ್ಷವಾದ ಶಿವಸೇನೆ ಕೂಡ ಸಂಪುಟ ಪುನಾರಚನೆ ವಿಚಾರದಲ್ಲಿ ಕೆಂಡವಾಗಿದೆ. “ಎನ್‌ಡಿಎ ಈಗ ಬಹುತೇಕ ಸತ್ತು ಹೋಯಿತು. ಬೆಂಬಲ ಬೇಕಾದಾಗ ಮಾತ್ರ ಬಿಜೆಪಿಗೆ ಅಂಗಪಕ್ಷಗಳು ನೆನಪಾಗುತ್ತವೆ’ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಕಿಡಿಕಾರಿದ್ದಾರೆ. ಜತೆಗೆ, ನಾವು ಕೇವಲ ಸಭೆಗಳಿಗಷ್ಟೇ ಸೀಮಿತವಾಗಿದ್ದೇವೆ ಎಂದೂ ಹೇಳಿದ್ದಾರೆ. ಇದೇ ಕಾರಣಕ್ಕಾಗಿ, ಕೇಂದ್ರದಲ್ಲಿ ಶಿವಸೇನೆಯನ್ನು ಪ್ರತಿನಿಧಿಸುತ್ತಿರುವ ಸಚಿವ ಅನಂತ್ ಗೀತೆ ಅವರೂ ಪ್ರಮಾಣ ಸ್ವೀಕಾರ ಸಮಾರಂಭದಿಂದ ದೂರ ಉಳಿದಿದ್ದರು. 2014ರಲ್ಲೂ ಸಂಪುಟ ದರ್ಜೆ ಕುರಿತ ಕೊನೇ ಕ್ಷಣದ ಬದಲಾವಣೆಯಿಂದ ಕೋಪಗೊಂಡಿದ್ದ ಶಿವಸೇನೆ ಸಂಸದ ಅನಿಲ್ ದೇಸಾಯಿ ದೆಹಲಿ ವಿಮಾನನಿಲ್ದಾಣದಿಂದಲೇ ವಾಪಸಾಗಿದ್ದರು.