Advertisement

ತನಗೆ ಮಾತ್ರ ಆಜೀವ ನಿಷೇಧವೇಕೆ?: ಸುಪ್ರೀಂಗೆ ಶ್ರೀಶಾಂತ್‌ ಪ್ರಶ್ನೆ

01:05 AM Mar 01, 2019 | Team Udayavani |

ನವದೆಹಲಿ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌, ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಆಜೀವ ನಿಷೇಧಕ್ಕೊಳಗಾಗಿರುವ ಎಸ್‌.ಶ್ರೀಶಾಂತ್‌, ತನಗೆ ಮಾತ್ರ ಆಜೀವ ನಿಷೇಧವೇಕೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನೊಮ್ಮೆ ಪ್ರಶ್ನಿಸಿದ್ದಾರೆ. 

Advertisement

ಫಿಕ್ಸಿಂಗ್‌ ಪ್ರಕರಣದಲ್ಲಿ ಅಜಯ್‌ ಜಡೇಜ, ಮನೋಜ್‌ ಪ್ರಭಾಕರ್‌ ಅವರಿಗೆ 5 ವರ್ಷ ಮಾತ್ರ ನಿಷೇಧ ಹೇರಲಾಗಿತ್ತು. ಆಜೀವ ನಿಷೇಧಕ್ಕೊಳಗಾಗಿದ್ದ ಮೊಹಮ್ಮದ್‌ ಅಜರುದ್ದೀನ್‌ ನಿಷೇಧವನ್ನು ಹಿಂಪಡೆಯಲಾಗಿದೆ. ಅವರು ಮತ್ತೆ ಕ್ರಿಕೆಟ್‌ ಚಟುವಟಿಕೆ ನಡೆಸುತ್ತಿದ್ದಾರೆ. ಬರೀ ಆರೋಪಿಯಾಗಿರುವ ತನಗೆ ಮಾತ್ರ ಯಾಕೆ ಈ ನಿಷೇಧ ಎಂದು ಬುಧವಾರದ ವಿಚಾರಣೆಯಲ್ಲಿ ನ್ಯಾಯಪೀಠವನ್ನು ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next