Advertisement

ಅಬ್ಬರಿಸುತ್ತಿದ್ದ ಆಪ್‌ ಗಪ್‌ ಚುಪ್‌ ಯಾಕೆ

02:48 PM Mar 31, 2019 | Team Udayavani |

ಮಣಿಪಾಲ: ಅಣ್ಣಾ ಹಜಾರೆ ಅವರ ಸತ್ಯಾಗ್ರಹದಿಂದ ಜನ ಬೆಂಬಲ ಗಳಿಸಿ ಮುಖ್ಯಮಂತ್ರಿಯಾದವರು ದಿಲ್ಲಿಯ ಅರವಿಂದ್‌ ಕೇಜ್ರಿವಾಲ್‌. ಆಮ್‌ಆದ್ಮಿ ಪಕ್ಷ ಸಂಘಟಿಸುವ ಮೂಲಕ ರಾಜಧಾನಿಯಲ್ಲಿ ಹೊಸ ರಾಜಕೀಯ ಪರ್ವಕ್ಕೆ ಕಾರಣವಾಗಿದ್ದರು. ನರೇಂದ್ರ ಮೋದಿ ಸರಕಾರವನ್ನು ಕಟುವಾಗಿ ಟೀಕಿಸುತ್ತಿದ್ದವರ ಪಟಟಿಯಲ್ಲಿ ಮುಂಚೂಣಿಯ ನಾಯಕ. ರಾಷ್ಟ್ರೀಯ ಪಕ್ಷಗಳಲ್ಲಿ ಭ್ರಷ್ಟಚಾರದ ಕೂಗು ಹೆಚ್ಚಾಗ ತೊಡಗುತ್ತಿದ್ದಂತೆ ಆಮ್‌ಆದ್ಮಿ ಪರ ಒಲವು ಹರಿದ ಕಾರಣ ದಿಲ್ಲಿಯ ಮುಖ್ಯಮಂತ್ರಿ ಗದ್ದುಗೆ ಲಭಿಸಿತ್ತು. ಆಪ್‌ ಅಂದು ಗಳಿಸಿದ್ದು ಬರೊಬ್ಬರಿ 54.3 ಶೇಕಡಾ ಮತ. ಬಿಜೆಪಿ ಶೇ. 32.2 ಮತ ಹಂಚಿಕೆ ಪ್ರಮಾಣ ಹೊಂದಿದ್ದರೆ, ಕಾಂಗ್ರೆಸ್‌ ಶೇ. 9.7 ಮತಗಳಿಸುವ ಮೂಲಕ ಕಳಪೆ ಸಾಧನೆ ತೋರಿತ್ತು.

Advertisement

ತನ್ನ ರಾಜಕೀಯ ಜೀವನದ ಪ್ರಾರಂಭದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಗುಡುಗುತ್ತಿದ್ದ ಕೇಜ್ರಿವಾಲ್‌ ಬಳಿಕ ಕಾಂಗ್ರೆಸ್‌ ವಿರುದ್ಧ ಮೆದುವಾಗುತ್ತಾ ಬಂದವರು. ಕೇಂದ್ರ ಸರಕಾರ ಮತ್ತು ದಿಲ್ಲಿ ಆಡಳಿತದ ವಿರುದ್ಧ ಆಡಳಿತ ಸಮರಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಸಾಕ್ಷಿಯಾಗಿದ್ದರು. ಆದರೆ ಈ ಮುಸುಕಿನ ಗುದ್ದಾಟಗಳು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಒಂದಾಗಲು ಕಾರಣವಾಯಿತು. ಪರಿಣಾಮ ದಿಲ್ಲಿಯಲ್ಲಿ ಕೇಜ್ರಿವಾಲ್‌ ಬೆಂಬಲಕ್ಕೆ ಇತರ ಪಕ್ಷಗಳು ನಿಂತವು.

ಆಪ್‌ ಮೌನಕ್ಕೆ ಏನು ಕಾರಣ
ಆದರೆ ಇತ್ತೀಚಿಗಿನ ದಿನಗಳಲ್ಲಿ ಆಪ್‌ ತುಸು ಮೌನವಾದಂತೆ ಕಾಣುತ್ತಿದೆ. ಆರಂಭದಲ್ಲಿದ್ದ ಅತ್ಯುಸ್ಸಾಹ ಸುದೀರ್ಘ‌ ಅವಧಿಗೆ ಮುಂದುವರೆಯಲಿಲ್ಲ ಎಂಬುದು ಇದಕ್ಕೆ ಕಾರಣ.

ದಿಲ್ಲಿಯಲ್ಲಿ ಶೀಲಾ ದೀಕ್ಷಿತ್‌ ಸರಕಾರವನ್ನು ಸೋಲಿಸಿ ಅಧಿಕಾರ ಹಿಡಿದ ಆಪ್‌ ಆರಂಭದಲ್ಲಿ ಕಾಂಗ್ರೆಸ್‌ ಅನ್ನು ಎದುರು ಹಾಕಿಕೊಂಡಿತ್ತು. ಆದರೆ ಬಳಿಕ ಮಹಾಘಟ್‌ಬಂಧನ್‌ ರಚನೆ ಯಾದಾಗ ಅದರೊಂದಿಗೆ ಗುರುತಿಸಿಕೊಳ್ಳಲು ಯಶಸ್ವೀಯಾಗಿತ್ತು. ಕಾಂಗ್ರೆಸ್‌ ವಿರುದ್ಧ ಇದ್ದ ಅಸಮಧಾನ ಶಾಂತವಾಗಲು ಮಹಾಘಟ್‌ಬಂಧನ್‌ ಒಂದು ಕಾರಣ.

ಮಹಾಘಟ್‌ಬಂಧನ್‌ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕೆಲವು ರಾಜ್ಯದಲ್ಲಿ ಮೈತ್ರಿ ಏರ್ಪಟ್ಟವು. ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಮೈತ್ರಿಯ ಮೂಲಕ ಒಂದಾದರೆ, ಬಿಹಾರದಲ್ಲಿ ಮಹಾಘಟ್‌ಬಂಧನ್‌ ಎರಡು ಪಕ್ಷಗಳು ಒಂದಾದವು. ಆದರೆ ದಿಲ್ಲಿಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಆಪ್‌ ಮುಂದಾಗಿದೆ.

Advertisement

ಶೀಲಾ ದೀಕ್ಷಿತ್‌ “ಹಸ್ತ’ ಕ್ಷೇಪ
ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಚುನಾವಣೆ ಪೂರ್ವ ಮೈತ್ರಿಗೆ ಬೆಂಬಲ ಸೂಚಿಸಲಿಲ್ಲ. ಬಳಿಕ ಆಪ್‌ ಜತೆ ಮೈತ್ರಿ ಮಾಡಿಕೊಂಡರೆ ಭವಿಷ್ಯ ದಲ್ಲಿ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದಂತಾಗಲಿದೆ. ನಾವು ಹೋರಾಟ ಮಾಡಿಕೊಂಡು ಬಂದ ಪಕ್ಷದ ಜತೆ ಸೀಟು ಹಂಚಿಕೆ ಮಾಡಿದರೆ ಮುದೊಂದು ದಿನ ನಮಗೆ ಕಾರ್ಯಕರ್ತರ ಬರ ಎದುರಾಗಲಿದೆ ಎಂದು ಹೇಳಿದ್ದರು.

ಇದು ಕಾಂಗ್ರೆಸ್‌ ವರಿಷ್ಟರಿಗೆ ಹೌದು ಅನ್ನಿಸಿದ್ದು ಗುಟ್ಟಾಗಿ
ಉಳಿದಿಲ್ಲ. ಆ್ಯಮ್‌ ಆದ್ಮಿಗೆ 2019ರ ಲೋಕಸಭಾ ಚುನಾವಣೆ
ಡೆಬ್ಯು. ಕಾಂಗ್ರೆಸ್‌ ಜತೆ ಸೇರಿಕೊಂಡು ಬಿಜೆಪಿಯನ್ನು ಕಟ್ಟು ಹಾಕುತ್ತಾ ಕಾದು ನೋಡಬೇಕಿದೆ. ವಿಧಾನಸಭೆಯಲ್ಲಿ ಗಳಿಸಿದ
ಶೇ. 54.3 ಮತಗಳಿಕೆಯನ್ನು ಎಎಪಿ ಈ ಚುನಾವಣೆಯಲ್ಲೂ ಕಾಯ್ದು ಕೊಳ್ಳಲು ಯಾವ ತಂತ್ರದ ಮೊರೆ ಹೋಗಲಿದೆ ಎಂಬುದೇ ಕೌತುಕ.

Advertisement

Udayavani is now on Telegram. Click here to join our channel and stay updated with the latest news.

Next