Advertisement

ರೇಪ್ ಆರೋಪಿ ಸಚಿವ ಪ್ರಜಾಪತಿ ಇನ್ನೂ ಕ್ಯಾಬಿನೆಟ್ ನಲ್ಲಿ ಯಾಕಿದ್ದಾರೆ?

06:54 PM Mar 05, 2017 | Team Udayavani |

ಲಕ್ನೋ:ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಗಾಯತ್ರಿ ಪ್ರಜಾಪತಿಯನ್ನು ಇನ್ನೂ ಯಾಕೆ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಉತ್ತರಪ್ರದೇಶ ಗವರ್ನರ್ ರಾಮ್ ನಾಯ್ಕ್ ಅವರು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪ್ರಶ್ನಿಸಿ ಪತ್ರ ಬರೆದಿರುವುದಾಗಿ ರಾಜಭವನದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ.

Advertisement

ಸಚಿವ ಪ್ರಜಾಪತಿ ವಿರುದ್ಧ ರೇಪ್ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಜಾಪತಿ ಮೇಲೆ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.  ಸಂವಿಧಾನದ ನೈತಿಕತೆ ಹಾಗೂ ಗೌರವದ ಪ್ರಶ್ನೆಯ ನಿಟ್ಟಿನಲ್ಲಿ ಪ್ರಜಾಪತಿಯನ್ನು ಸಚಿವ ಸಂಪುಟದಲ್ಲಿ ಇನ್ನೂ ಮುಂದುವರಿಸಿರುವುದರ ಕಾರಣ ಏನು ಎಂದು ಗವರ್ನರ್ ಅವರು ಸಿಎಂಗೆ ಬರೆದ ಪತ್ರದಲ್ಲಿ ಕೇಳಿರುವುದಾಗಿ ವರದಿ ವಿವರಿಸಿದೆ.

ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಸಚಿವನಿಗೆ ಕೂಡಲೇ ಪೊಲೀಸರಲ್ಲಿ ಶರಣಾಗಲು ಸೂಚಿಸುವಂತೆ ರಾಜ್ಯಪಾಲರು ಅಖಿಲೇಶ್ ಗೆ ಸೂಚಿಸಿರುವುದಾಗಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next