Advertisement

ಡಿಕೆಶಿಗೆ ಈಗೇಕೆ ಚನ್ನಪಟ್ಟಣ ಮೇಲೆ ಮಮತೆ? ಕುಮಾರಸ್ವಾಮಿ ವ್ಯಂಗ್ಯ

12:19 AM Jun 24, 2024 | Team Udayavani |

ಚನ್ನಪಟ್ಟಣ: ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗದೇ ಇರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಈಗೇಕೆ ಚನ್ನಪಟ್ಟಣದ ಮೇಲೆ ವಿಶೇಷ ಮಮತೆ ಬಂದಿದೆ? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಚನ್ನಪಟ್ಟಣವನ್ನು ಅಭಿವೃದ್ಧಿ ಮಾಡಬೇಡಿ ಎಂದು ಇಲ್ಲಿಯವರೆಗೆ ಡಿಕೆಶಿಯನ್ನು ತಡೆದವರು ಯಾರು? ಸಂಸದನಾಗಿ ಅವರ ಸಹೋದರ ಡಿ.ಕೆ. ಸುರೇಶ್‌ ನೀಡಿರುವ ಕೊಡುಗೆಯಾದರೂ ಏನು? ಈಗ ಚನ್ನಪಟ್ಟಣದ ಬಗ್ಗೆ ಡಿಕೆಶಿಗೆ ಭಾರೀ ಮಮತೆ ಬಂದಿದೆ. ನಾನು ಕೆಡಿಪಿ ಸಭೆ ಮಾಡಿಲ್ಲ ಎಂದು ಅವರು ಮೊನ್ನೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಧಿಕಾರಿಗಳ ಮೊಬೈಲ್‌ ಕಸಿದುಕೊಂಡು, ಮಾಧ್ಯಮದವರನ್ನು ನಿರ್ಬಂಧಿಸಿ ರಹಸ್ಯವಾಗಿ ಸಭೆ ನಡೆಸುವ ಔಚಿತ್ಯವೇನು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ರಾಮನಗರ ಅಭಿವೃದ್ಧಿ ಮಾಡಿದ್ದು ನಾನು, ದೇವೇಗೌಡರು ಎಂದು ಡಿಕೆ ಬ್ರದರ್ಸ್‌ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ, ಅಂತಾರಾಷ್ಟ್ರೀಯ ಮಟ್ಟದ ರೇಷ್ಮೆ ಮಾರುಕಟ್ಟೆ ಮಾಡಿಸಿದೆ. ರಾಜೀವ್‌ ಗಾಂಧಿ ಆಸ್ಪತ್ರೆ ತರಲು ಪ್ರಯತ್ನಿಸಿದೆ. ಟೊಯೋಟಾ ಫ್ಯಾಕ್ಟರಿ ಮಾಡಿದ್ದು ನಾನು, ದೇವೇಗೌಡರು. ಇವರು ಅಲ್ಲಿ ಕಲ್ಲು ಹೊಡೆದುಕೊಂಡು ಕೂತಿರುವ ಗಿರಾಕಿಗಳು. ಇಂತಹ 10 ಜನ ಹುಟ್ಟಿ ಬಂದರೂ ಏನೂ ಮಾಡೋಕೆ ಆಗಲ್ಲ ಎಂದು ವಾಗ್ಧಾಳಿ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next