ಬಿಜೆಪಿ ಗೆದ್ದರೆ ಆ ಪಕ್ಷದ ಧ್ವಜ ಮತ್ತು ಪಕ್ಷದ ಚಿಹ್ನೆ ಕಮಲ ರಾರಾಜಿಸುತ್ತದೆ. ಆದರೆ, ಉತ್ತರ ಪ್ರದೇಶ ಫಲಿತಾಂಶ ಪ್ರಕಟಗೊಂಡಾಗ ಬಿಜೆಪಿ ಕಾರ್ಯಕರ್ತರೆಲ್ಲರೂ ಬುಲ್ಡೋಜರ್ ಆಟಿಕೆ ಅಥವಾ ನಿಜವಾದ ಬುಲ್ಡೋಜರ್‌ಗಳನ್ನೇ ರಸ್ತೆಗಿಳಿಸಿ ಸಂಭ್ರಮಾಚರಿಸಿದ್ದಾರೆ. ಈ ಅಂಶ ಜಿಜ್ಞಾಸೆಗೆ ಕಾರಣವಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ “ಬುಲ್ಡೋಜರ್ ಬಾಬಾ’ ಆಗಿದ್ದು ಹೇಗೆ ಮತ್ತು ಬುಲ್ಡೋಜರ್‌ಗೂ ಬಿಜೆಪಿಗೂ ಏನು ಸಂಬಂಧ ಬಗ್ಗೆ ಚರ್ಚೆಗಳು ನಡೆದಿವೆ.
ಸಮಾಜವಾದಿ ಪಕ್ಷದ ಆಡಳಿತದ ಸಮಯದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿದ್ದವು. ಅದರದ್ದೇ ಒಂದು ಮಾಫಿಯಾ ನಡೆದಿದೆ ಎನ್ನುವುದು ಬಿಜೆಪಿಯ ಆರೋಪ. ಆ ಅಕ್ರಮಗಳನ್ನೆಲ್ಲ ಬುಲ್ಡೋಜರ್ ಬಳಸಿ ಕೆಡವಿ ಹಾಕುತ್ತೇವೆ ಎನ್ನುವುದು ಪಕ್ಷದ ಆಶ್ವಾಸನೆ. ಈ ಬುಲ್ಡೋಜರ್ ಎನ್ನುವ ಪದವನ್ನು ಬಿಜೆಪಿ ಮಾತ್ರವಲ್ಲದೆ ಸಮಾಜವಾದಿ ಪಕ್ಷವೂ ಪ್ರಚಾರದ ವೇಳೆ ಬಳಸಿಕೊಂಡಿತ್ತು.
ಇದನ್ನೂ ಓದಿ:ಗೋವಾ: ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ ಸಾವಂತ್
ಮಾಜಿ ಸಿಎಂ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ ಅವರನ್ನು ಬುಲ್ಡೋಜರ್ ಬಾಬಾ ಎಂದು ಪ್ರಚಾರದ ಸಮಯದಲ್ಲಿ ಕರೆದಿದ್ದರು. “ಇದು ನಾನು ಹೇಳುತ್ತಿರುವುದಲ್ಲ. ಪ್ರತಿಕೆಯೊಂದು ಈ ಬಗ್ಗೆ ಬರೆದಿದೆ. ಯೋಗಿ ಎಲ್ಲವನ್ನು ಬುಲ್ಡೋಜರ್ ಮೂಲಕ ಹಾಳುಗೆಡವುತ್ತಾರೆ’ ಎಂದು ಆರೋಪಿಸಿದ್ದರು.
ಕೆಲಸ ಮಾಡಿ ತೋರಿಸುತ್ತದೆ:
ಬುಲ್ಡೋಜರ್ ಪದವನ್ನು ಧನಾತ್ಮಕವಾಗಿಯೇ ಬಳಸಿಕೊಂಡ ಬಿಜೆಪಿ ಪ್ರಚಾರದಲ್ಲೂ ಬಳಕೆ ಮಾಡಿಕೊಂಡಿತ್ತು. “ಬುಲ್ಡೋಜರ್ ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತದೆ. ಈಗ ಎಲ್ಲ ಬುಲ್ಡೋಜರ್‌ಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವೂ ಒಟ್ಟಾಗಿ ಕೆಲಸ ಮಾಡಿ, ಮಾಫಿಯಾವನ್ನು ಹೊಡೆದುರುಳಿಸುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದ್ದರು.