Advertisement

ಜಗತ್ತಿನ ದುಡ್ಡಪ್ಪಂದಿರು!

07:04 PM Nov 24, 2019 | Sriram |

“ಮತ್ತೆ ಬಿಲ್‌ ಗೇಟ್ಸ್‌ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ’ ಎನ್ನುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಅಚ್ಚರಿ ಪಟ್ಟವರು ಅದೆಷ್ಟೋ ಮಂದಿ. ಪ್ರತೀ ವರ್ಷವೂ ಫೋಬ್ಸ…ì ಮ್ಯಾಗಜೀನ್‌, ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ವರ್ಷ ಮೈಕ್ರೋಸಾಫ್ಟ್ ಕಂಪನಿಯ ಷೇರು ಹಿಂದಿನ ವರ್ಷಕ್ಕೆ ಹೋಲಿಸಿದರೆ 48% ಹೆಚ್ಚಿದೆ. ಹೀಗಾಗಿ ಆ ಕಂಪನಿಯ ಸಂಸ್ಥಾಪಕ ಬಿಲ್‌ ಗೇಟ್ಸ್‌ ತನ್ನ ಬಳಿಯಿದ್ದ ಮೈಕ್ರೋಸಾಫ್ಟ್ ಸಂಸ್ಥೆಯ ಎಲ್ಲ ಷೇರುಗಳನ್ನು ಚಾರಿಟಿಗೆ ಕೊಟ್ಟು ಕೇವಲ 1% ಇಟ್ಟುಕೊಂಡಿದ್ದರೂ ಕೂಡ, ಅದು ಅವರನ್ನು ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯಾಗಿಸಿದೆ!

Advertisement

ಸಂಪತ್ತಿನಲ್ಲಿ ಇಳಿಕೆ
ಪ್ರಪಂಚದಾದ್ಯಂತ ಇರುವ ಶತಕೋಟ್ಯಾಧಿಪತಿಗಳ ಸಂಖ್ಯೆ 2,153. ಅಂದರೆ, ಜಗತ್ತಿನ ನೂರಾ ಮೂವತ್ತು ಕೋಟಿ ಜನರ ಸಂಪತ್ತಿನ ಮೂರು ಪಟ್ಟು ಸಂಪತ್ತು ಕೇವಲ ಎರಡು ಸಾವಿರ ಜನರ ಹತ್ತಿರ ಇದೆ ಅಂತಾಯಿತು. ಏಷ್ಯಾ ಹಾಗೂ ಯುರೋಪಿನಲ್ಲಿ ಶ್ರೀಮಂತರ ಸಂಖ್ಯೆ ಇಳಿದರೆ ಬ್ರೆಜಿಲ್‌ ಹಾಗೂ ಅಮೇರಿಕಾದಲ್ಲಿ ಹೆಚ್ಚಿದೆ. ಜಗತ್ತಿನ ಒಟ್ಟು ಶ್ರೀಮಂತರಲ್ಲಿ 30% ಅಮೇರಿಕಾ ದೇಶದವರು. ಮೊದಲ ಇಪ್ಪತ್ತು ಶ್ರೀಮಂತರಲ್ಲಿ ಹದಿನಾರು ಜನರು ಅಮೇರಿಕಾದವರೇ. 247 ಜನ ಶತಕೋಟ್ಯಧಿಪತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಅದೇ ಹೊತ್ತಿಗೆ, ಪಟ್ಟಿಯಲ್ಲಿ 195 ಹೊಸ ಶ್ರೀಮಂತರ ಪ್ರವೇಶವಾಗಿದೆ. ಅವರಲ್ಲಿ ಅತೀ ಚಿಕ್ಕ ವಯಸ್ಸಿನವಳು ಕೈಲಿ ಜೆನ್ನರ್‌, ಆಕೆಗೆ ಕೇವಲ ಇಪ್ಪತ್ತೂಂದು ವರ್ಷ ವಯಸ್ಸು!

ಬಿಲ್‌ ನಂ.1 ಆಗುವುದರಲ್ಲಿ ಜೆಫ್ನ ಪಾಲು
ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್‌ ಗೇಟ್ಸ್‌  ಮೊದಲನೆಯ ಬಾರಿ ಜಗತ್ತಿನ ಅತ್ಯಂತ ಶ್ರೀಮಂತ ಎಂದು ಗುರುತಿಸ್ಪಟ್ಟಿದ್ದು 1995ರಲ್ಲಿ. ಅದೇ ವರ್ಷ ಮೈಕ್ರೋಸಾಫ್ಟ್ ಕಂಪನಿಯ ಅತೀ ಯಶಸ್ವಿ ಪ್ರಾಡಕr… ವಿಂಡೋಸ್‌ 95 ಬಿಡುಗಡೆ ಆಗಿತ್ತು. ನಂತರದಲ್ಲಿ 24 ವರ್ಷಗಳ ಕಾಲ ಆ ಪಟ್ಟದಲ್ಲಿ ರಾರಾಜಿಸುತ್ತಿದ್ದವರು ಬಿಲ್‌ ಗೇಟ್ಸ್‌. ತಮ್ಮ ಸಂಪತ್ತಿನ ಬಹುಪಾಲನ್ನು ಚಾರಿಟಿಗೆ ಕೊಡುತ್ತಾರೆ ಆದರೂ ಅವರ ಹೂಡಿಕೆ, ಮೈಕ್ರೋಸಾಫ್ಟ್  ಕಂಪನಿಯಲ್ಲಿರುವ 1% ಪಾಲುಗಾರಿಕೆ ಅವರನ್ನು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದೆ. ಯಾವುದೇ ಉದ್ದಿಮೆಗಳನೆು° ನಡೆಸದ, ತಾವೇ ಕಟ್ಟಿ ಬೆಳೆಸಿದ ಮೈಕ್ರೋಸಾಫ್ಟ್ ಸಂಸ್ಥೆಯಿಂದಲೂ ದೂರವಾಗಿರುವ ಬಿಲ್‌ ಗೇಟ್ಸ್‌ ಮತ್ತೂಮ್ಮೆ ಶ್ರೀಮಂತರಾಗಲು ಕಾರಣಗಳೇನು? ಅದಕ್ಕೆ ಕಾರಣಗಳನ್ನು ತಿಳಿಯುವ ಮುನ್ನ ಜೆಫ್ ಬೆಝೋಸ್‌ ಬಗ್ಗೆ ತಿಳಿದುಕೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಜಗತ್ತಿನ ನಂ.1 ಶ್ರೀಮಂತನಾಗಿದ್ದಾತ ಜೆಫ್ ಬೆಝೋಸ್‌. ಆತ ಜಗದ್ವಿಖ್ಯಾತ ಆನ್‌ಲೈನ್‌ ಶಾಪಿಂಗ್‌ ತಾಣ ಅಮೇಜಾನ್‌ ಕಂಪನಿಯ ಮಾಲೀಕ. ಬಿಲ್‌ ಗೇಟ್ಸ್‌ ಶ್ರೀಮಂತ ಸ್ಥಾನಕ್ಕೆ ಏರುವುದರಲ್ಲಿ ಜೆಫ್ನ ಪಾಲೂ ಇದೆ. ಜೆಫ್ನ ಸಂಪತ್ತಿನಲ್ಲಿ ಕುಸಿತ ಕಂಡುಬಂದಿದ್ದೇ ಬಿಲ್‌ ನಂ.1 ಆಗಲು ಕಾರಣವಾಗಿದೆ.

ಈ ವರ್ಷ ಜೆಫ್ ಬೆಝೋಸ್‌ ದಂಪತಿಯ ವಿಚ್ಚೇದನವಾಗಿತ್ತು. ಅಲ್ಲಿನ ಕಾನೂನು ಪ್ರಕಾರ ವಿಚ್ಛೇದನದ ಸಮಯದಲ್ಲಿ ಪತಿಯ ಆಸ್ತಿಯಲ್ಲಿ ಇಂತಿಷ್ಟು ಭಾಗ ವಿಚ್ಛೇದಿತ ಪತ್ನಿಗೆ ಸೇರುತ್ತದೆ. ಹಾಗೆ ಅವರ ಸಂಪತ್ತಿನ ಕಾಲು ಭಾಗ ಅವರ ಮಾಜಿ ಮಡದಿಯ ಪಾಲಾಯಿತು. ಇದು ಒಂದು ಕಾರಣವಾದರೆ, ಇನ್ನೊಂದು, ಪೆಂಟಗನ್‌ ಕೌಡ್‌ ಕಂಪ್ಯೂಟಿಂಗ್‌ ಪ್ರಾಜೆಕr…. ಹತ್ತು ಬಿಲಿಯನ್‌ ಡಾಲರ್‌ ಮೊತ್ತದ ಆ ಪ್ರಾಜೆಕr… ಅಮೇಜಾನ್‌ ಬದಲು ಮೈಕ್ರೋಸಾಫ್ಟ್ ಕಂಪನಿಗೆ ಸಿಕ್ಕಿತು. ಅದರಿಂದಾಗಿ ಮೈಕ್ರೋಸಾಫ್ಟ್ ಕಂಪನಿಯ ಷೇರಿನ ಬೆಲೆ 4% ಏರಿದರೆ ಅಮೇಜಾನ್‌ ಷೇರಿನ ಬೆಲೆ 2% ಇಳಿಯಿತು. ಹೀಗಾಗಿ ಇಂದು ಜೆಫ್ ಬೆಝೋಸ್‌ 108 ಬಿಲಿಯನ್‌ ಡಾಲರ್‌ (7,66,800 ಕೋಟಿ ರೂ.) ಹಣವನ್ನು ಹೊಂದಿದರೆ ಬಿಲ್‌ ಗೇಟ್ಸ್‌ 110 ಬಿಲಿಯನ್‌ ಡಾಲರ್‌ (7,81,000 ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ.

ಭಾರತದ ಶ್ರೀಮಂತರ ಪಟ್ಟಿ
ಭಾರತದಲ್ಲಿ ಕಳೆದ ಹನ್ನೆರಡು ವರ್ಷಗಳಿಂದಲೂ ರಿಲಯನ್ಸ್ ಗ್ರೂಪ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಅತೀ ಶ್ರೀಮಂತ ವ್ಯಕ್ತಿ. ಜಗತ್ತಿನಲ್ಲಿ ಅವರದ್ದು ಹದಿಮೂರನೇ ಸ್ಥಾನ. ಅವರ ಒಟ್ಟು ಆಸ್ತಿ 53 ಬಿಲಿಯನ್‌ ಡಾಲರ್‌. ಎರಡನೆಯ ಸ್ಥಾನದಲ್ಲಿ ಗೌತಮ್‌ ಅದಾನಿ ಇದ್ದಾರೆ. ಇವರಿಬ್ಬರ ನಡುವಿನ ಅಂತರ ಬಹಳ. ಭಾರತದಲ್ಲಿ ಮುಖೇಶ್‌ ಅಂಬಾನಿಯವರನ್ನು ಸದ್ಯಕ್ಕಂತೂ ಹಿಂದಕ್ಕೆ ಹಾಕುವುದು ಸುಲಭವಲ್ಲ. ಆರ್ಥಿಕ ಪರಿಸ್ಥಿತಿ ಆತಂಕಕಾರಿಯಾಗಿದ್ದರೂ ಮುಖೇಶ್‌ ಅಂಬಾನಿಯವರ ಆಸ್ತಿಯಲ್ಲಿ ವೃದ್ಧಿಯಾಗಿದೆ. ಅದಕ್ಕೆ ಕಾರಣ ಅವರ ಕನಸಿನ ಕೂಸು ಜಿಯೋ ಟೆಲಿಕಾಂ.

Advertisement

– ವಿಕ್ರಮ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next