Advertisement

ಇಮ್ರಾನ್‌ ಖಾನ್‌ ಕಾಶ್ಮೀರ, ಮೋದಿ ಹೆಸರು ಪದೇ ಪದೇ ಜಪಿಸುತ್ತಿರುವುದೇಕೆ?

09:58 AM Sep 20, 2019 | sudhir |

95 ಬಾರಿ ಟ್ವೀಟ್‌ನಲ್ಲಿ ಭಾರತದ ವಿಷಯವೇ ಪ್ರಸ್ತಾವ

Advertisement

ಹೊಸದಿಲ್ಲಿ : ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಮಾಡಿದ ಬಳಿಕ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಇನ್ನಿಲ್ಲದಂತೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುತ್ತ ಇದನ್ನೇ ಜಪ ಮಾಡುತ್ತಿದ್ದಾರೆ. ಇಮ್ರಾನ್‌ ವರ್ತನೆ ಹಿಂದೆ ಕೆಲವು ವಿಷಯಗಳಿದ್ದು, ಅದೇನು ಎಂಬುದಕ್ಕೆ ಉತ್ತರ ಇಲ್ಲಿದೆ.

ಪಾಕ್‌ ಸೋಲು ಮರೆಮಾಚುವ ಯತ್ನ
ಪಾಕ್‌ನಲ್ಲಿ ಚುನಾವಣೆ ಸಂದರ್ಭ ಖಾನ್‌ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ ಈ ಭರವಸೆ ಈಡೇರಿಸುವಲ್ಲಿ ಖಾನ್‌ ಎಡವಿದ್ದಾರೆ. ತಮ್ಮ ಸರಕಾರದ ದೌರ್ಬಲ್ಯಗಳು ನೂರಾರು ಇರುವುದರಿಂದ ಅವುಗಳನ್ನು ಮರೆಮಾಚಲು ಕಾಶ್ಮೀರ ವಿಷಯಕ್ಕೇ ಇಮ್ರಾನ್‌ ಅಂಟಿಕೊಂಡು ಕೂತಿದ್ದಾರೆ. ಕಾಶ್ಮೀರಕ್ಕೆ ಖಾನ್‌ ರಾಯಭಾರಿ ಆಗುವುದಾದರೆ, ಪಾಕ್‌ನ ಪ್ರಮುಖ ಪ್ರದೇಶವನ್ನು ಕೇಳುವವರ್ಯಾರು ಎಂದು ಈಗ ಅಲ್ಲಿನ ನಾಗರಿಕರೇ ಪ್ರಶ್ನಿಸುತ್ತಿದ್ದಾರೆ.

ಕಾಶ್ಮೀರ ಒಂದು ಅಸ್ತ್ರ ಮಾತ್ರ
ಸದ್ಯ ಪಾಕಿಸ್ಥಾನದಲ್ಲಿ ನಿರುದ್ಯೋಗ ಹಾಗೂ ಹಣದುಬ್ಬರದ ಸಮಸ್ಯೆ ವ್ಯಾಪಕವಾಗಿದೆ. ಜನ ಪ್ರಶ್ನಿಸಲು ತೊಡಗಿದ್ದಾರೆ. ಅಂತಹ ಪರಿಸ್ಥಿತಿ ಎದುರಾದಾಗ ಅಲ್ಲಿನ ಸರಕಾರಕ್ಕೆ ಅದನ್ನು ನಿವಾರಿಸುವ ಸುಲಭ ವಿಷಯ ಕಾಶ್ಮೀರವನ್ನು ಮುನ್ನೆಲೆಗೆ ತರುವುದು. ಸದ್ಯ 370 ರದ್ದು ಮಾಡಿದ್ದರಿಂದ ಇಮ್ರಾನ್‌ಗೆ ಇದು ಮತ್ತಷ್ಟು ಸಲೀಸಾಗಿದೆ. ಆ ದೇಶದಲ್ಲಿ ಏನೇ ಘಟನೆ ನಡೆದರೂ, ಅಲ್ಲಿನ ಜನ ಬೆಳವಣಿಗೆ ಕುರಿತು ಮಾತನಾಡಿದರೂ ಎಲ್ಲಾ ವಿಷಯಗಳಿಗೂ ಕಾಶ್ಮೀರ ಮತ್ತು ಮೋದಿಯನ್ನು ಮುಂದಿಟ್ಟುಕೊಂಡು ಜನರಿಗೆ ಮಣ್ಣೆರೆಚಲಾಗುತ್ತಿದೆ.

ಭಾರತ ವಿಷಯದಲ್ಲಿ 95 ಬಾರಿ ಇಮ್ರಾನ್‌ ಟ್ವೀಟ್‌
ಕಳೆದ ಆಗಸ್ಟ್‌ 5 ರಿಂದ ಇಲ್ಲಿಯವರೆಗೆ ಇಮ್ರಾನ್‌ ಖಾನ್‌ 95 ಬಾರಿ ಟ್ವೀಟ್‌ ಮಾಡಿದ್ದು, ಅದರಲ್ಲಿ 71 ಟ್ವೀಟ್‌ಗಳು ಭಾರತಕ್ಕೆ ಸಂಬಂಧಿಸಿದ್ದು, 56 ಸಲ ಕಾಶ್ಮೀರ ಎಂಬ ಪದ ಬಳಕೆ ಮಾಡಿದ್ದು, ಒಂದೂವರೆ ತಿಂಗಳಿನಲ್ಲಿ 19 ಬಾರಿ ಮೋದಿ ಹೆಸರನ್ನು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ದೇಶದ ಜನರ ಗಮನವನ್ನು ಕಾಶ್ಮೀರದತ್ತ, ದೇಶದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯತಲು ಯತ್ನಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next