Advertisement
ವಾರಾಂತ್ಯದ ದೀರ್ಘ ರಜೆಯಿಂದಾಗಿ ಮತದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ಕಳವಳ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿ ಚುನಾವಣೆ ವಿಳಂಬ ಮಾಡಲು ಮನವಿ ಮಾಡಿಕೊಂಡಿರುವುದಾಗಿ ಕಾಂಗ್ರೆಸ್ ಟೀಕಿಸಿದೆ.
Related Articles
Advertisement
ರಾಜ್ಯ ಚುನಾವಣ ಘಟಕ ಬಿಜೆಪಿ ಮನವಿಯನ್ನು ದೆಹಲಿಯಲ್ಲಿರುವ ಕೇಂದ್ರ ಚುನಾವಣ ಆಯೋಗಕ್ಕೆ ರವಾನಿಸಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ. ಅಕ್ಟೋಬರ್ 1ರಂದು ಹರ್ಯಾಣ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು, ಅಕ್ಟೋಬರ್ 4ಕ್ಕೆ ಫಲಿತಾಂಶ ಘೋಷಣೆ ಎಂದು ಆಯೋಗ ಘೋಷಣೆ ಮಾಡಿತ್ತು.
Long Weekends:
ಸೆಪ್ಟೆಂಬರ್ 28-29 ವಾರಾಂತ್ಯದ ರಜೆ, ಆಕ್ಟೋಬರ್ 2, 3 ಕೂಡಾ ರಜೆ, ಸರ್ಕಾರಿ/ಅಥವಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಸೆಪ್ಟೆಂಬರ್ 30ರಂದು ರಜೆ ತೆಗೆದುಕೊಂಡರೆ ಅಕ್ಟೋಬರ್ 1ರ ಚುನಾವಣೆ ದಿನಾಂಕ ಸೇರಿದಂತೆ ಆರು ದಿನಗಳ ದೀರ್ಘ ರಜೆ ಸಿಗಲಿದೆ.
ಗುರುಗ್ರಾಮ್, ಫರಿದಾಬಾದ್, ರೋಹ್ಟಕ್, ಸೋನಿಪತ್ ಮತ್ತು ಭಿವಾನಿ ಸೇರಿದಂತೆ ನ್ಯಾಷನಲ್ ಕ್ಯಾಪಿಟಲ್ ಪ್ರದೇಶದ 14 ಜಿಲ್ಲೆಗಳು ನಗರ ಪ್ರದೇಶವನ್ನು ಹೊಂದಿದ್ದು, ವಾರಾಂತ್ಯದ ದೀರ್ಘ ರಜೆ ಮತದಾನದ ಮೇಲೆ ಪರಿಣಾಮ ಬೀರಲಿದೆ ಎಂಬುದು ಬಿಜೆಪಿ ವಾದವಾಗಿದೆ.
ಇದನ್ನೂ ಓದಿ:Kadaba: ಶಾಲಾ ಕೊಠಡಿಯ ಗೋಡೆ, ಮೇಲ್ಛಾವಣಿ ಕುಸಿತ; ತಪ್ಪಿದ ಭಾರಿ ಅನಾಹುತ
2024ರ ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.67.9ರಷ್ಟು ಮತದಾನವಾಗಿದ್ದು, ನಗರ ಪ್ರದೇಶದಲ್ಲಿ ಶೇ.57.9ರಷ್ಟು ಮತದಾನವಾಗಿತ್ತು.
ಅಕ್ಟೋಬರ್ 6ರೊಳಗೆ ಜಮ್ಮು-ಕಾಶ್ಮೀರ ಮತ್ತು ಹರ್ಯಾಣದ ಮತದಾನ ಪ್ರಕ್ರಿಯೆ, ಫಲಿತಾಂಶ ಸೇರಿದಂತೆ ಎಲ್ಲವನ್ನೂ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಕೇಂದ್ರ ಚುನಾವಣ ಆಯೋಗ ಮತದಾನ ದಿನಾಂಕ ಮುಂದೂಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.