Advertisement

ನಾನೇ ಕಾಂಗ್ರೆಸ್‌ ಎನ್ನುವರು ಪಕ್ಷಕ್ಕೆ ಏಕೆ ಬೇಕು?

03:57 PM Dec 24, 2017 | Team Udayavani |

ಕೋಲಾರ: ನಾವೇ ಕಾಂಗ್ರೆಸ್‌, ನಾವು ಇಲ್ಲ ಎಂದರೆ ಪಕ್ಷವನ್ನು ನಿರ್ನಾಮ ಮಾಡಿಬಿಡುತ್ತೇವೆ ಎನ್ನುವವರು ಪಕ್ಷಕ್ಕೆಯಾಕೆ ಬೇಕು ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಶಾಸಕ ವರ್ತೂರು ಪ್ರಕಾಶ್‌ ರ ನಮ್ಮ ಕಾಂಗ್ರೆಸ್‌ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ನಗರದ ಜಿಪಂ ಅಧ್ಯಕ್ಷರ ಕಚೇರಿಯಲ್ಲಿ ಶನಿವಾರ ಸುದ್ದಿಗಾರ‌ರೊಂದಿಗೆ ಮಾತನಾಡಿ, “ಅವನು (ವರ್ತೂರ್‌ಪ್ರಕಾಶ್‌) ಕಾಂಗ್ರೆಸ್‌ ಪಕ್ಷದಲ್ಲಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ.ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಸಹಾಯ ಮಾಡಿದ್ದಾನೆ. ಆದರೆ, ಕಾಂಗ್ರೆಸ್ಸಿನವರೇ ಮೋಸ ಮಾಡಿದರು, ನಾನು ಅವರ ಹೆಸರು ಹೇಳುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

Advertisement

ಈ ಹಿಂದೆ ಕಾಂಗ್ರೆಸ್‌ ಗೆಲ್ಲಬೇಕಾದರೆ ವರ್ತೂರ್‌ಪ್ರಕಾಶ್‌ ಸೂಕ್ತ ಎನ್ನುವ ಕಾರಣಕ್ಕಾಗಿ ನಾನು ಸುಮ್ಮನಿದ್ದೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಅಡೆತಡೆಗಳಾದ ಹಿನ್ನೆಲೆಯಲ್ಲಿ ಅವನು ತಾಳ್ಮೆ ಕಳೆದುಕೊಂಡು ಹೊಸ ಪಕ್ಷ ಕಟ್ಟಿದ್ದಾನೆ. ಯದ್ವಾತದ್ವಾ ಮಾತನಾಡುತ್ತಿದ್ದಾನೆ ಎಂದರು.ಕಾಂಗ್ರೆಸ್‌ನಲ್ಲಿ ಹುಟ್ಟಿ ಬೆಳೆದ ಪ್ರಕಾಶ್‌ ಎಲ್ಲವನ್ನು ಮರೆತಿ ದ್ದಾನೆ. ಮಾನವೀಯತೆ ಇರಬೇಕು.

ಅವನು ಏನೇ ಆಗಲಿ, ಕಾಂಗ್ರೆಸ್ಸನ್ನು ಬೈದ ಮೇಲೆ ಸುಮ್ಮನಿರಲು ಸಾಧ್ಯವಿಲ್ಲ. ಇನ್ನು ಯುದ್ಧ ಆರಂಭವಾದಂತೆಯೇ, ಮುಂದಿನ ಚುನಾವಣೆಯನ್ನು ಅಗ್ನಿಪ ‌ರೀಕ್ಷೆಯಂತೆ ಸ್ವೀಕರಿಸುವುದಾಗಿ ಮುನಿಯಪ್ಪ ಹೇಳಿದರು.

ಪರೋಕ್ಷ ಟಾಂಗ್‌: ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ಗುಣ, ನಡತೆ ಮಾನದಂಡ ಎನ್ನುವವರಿಗೆ ಈಗಲಾದರೂ ಬುದ್ಧಿ ಬರಲಿ. ಗೆಲುವು ಒಂದೇ ಮಾನದಂಡ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಂಸದ ಕೆ.ಎಚ್‌.ಮುನಿ ಯಪ್ಪ ಉಸ್ತುವಾರಿ ಸಚಿವ ರಮೇಶ್‌ ಕುಮಾರ್‌ಗೆ ಪರೋಕ್ಷ ವಾಗಿ ಟಾಂಗ್‌ ನೀಡಿದರು. ಕಮಲ ಆಪ ರೇಷನ್‌ನವರು ರಾಜ್ಯಭಾರ ಮಾಡಿದ್ದಾರೆ. ಅವರೆಲ್ಲರೂ ನೀತಿ ವಂತರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಆಯ್ಕೆ ತಲೆನೋವು: ಚುನಾವಣೆ ಸಮೀಪಿಸುತ್ತಿರು ವುದರಿಂದಾಗಿ ನಮಗೆ ಕೋಲಾರ, ಕೆಜಿಎಫ್ ಹಾಗೂ ಮಾಲೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಗೆ ತಲೆನೋವಾಗಿ ಪರಿಣಮಿಸಿದೆ. ಈ ಮೂರು ಕ್ಷೇತ್ರಗಳ ಕುರಿತು ಸ್ಪಷ್ಟನೆ ಸಿಕ್ಕಿದಲ್ಲಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗುವುದು. ಕೆಜಿಎಫ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದರು, ಕಾಂಗ್ರೆಸ್‌ ಪಕ್ಷದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ ಎಂದು ಹೈಕಮಾಂಡ್‌ಗೆ ಗೊತ್ತಿದೆ ಎಂದು ಆಹಾರ ನಿಗಮದ ಉಪಾಧ್ಯಕ್ಷ ಶ್ರೀನಿವಾಸ್‌ ವಿರುದ್ಧ ಕಿಡಿಕಾರಿದರು.

Advertisement

ಅಲ್ಪಸಂಖ್ಯಾತರಿಗೆ ಟಿಕೆಟ್‌: ಕೋಲಾರದಲ್ಲಿ ನನ್ನನ್ನು ಏಳು ಬಾರಿ ಗೆಲ್ಲಿಸಿದ್ದಾರೆ. ಆದರೆ, ಕೋಲಾರ ಕ್ಷೇತ್ರದಲ್ಲಿಯೇ ಕಾಂಗ್ರೆಸ್‌ ಗೆಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರಿದ್ದು, ಈ ಬಾರಿ ಒಂದು ಕ್ಷೇತ್ರದಲ್ಲಿ ಅವರಿ ಗೂ ಅವಕಾಶ ಕಲ್ಪಿಸೋಣ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲು ಚಿಂತಿಸಿದ್ದು, ಅಲ್ಪಸಂಖ್ಯಾತರು, ಅಹಿಂದ, ಒಕ್ಕಲಿಗರು ಹೀಗೆ ಎಲ್ಲರೂ ಸೇರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಟಿಕೆಟ್‌ ನೀಡ
ಲಾಗುವುದು. ವರ್ತೂರ್‌ಪ್ರಕಾಶ್‌ಗೆ ತಕ್ಕಪಾಠ ಕಲಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು. 

ಮತ ಯಂತ್ರ ನಿಭಾಯಿಸಿ ಗೆಲುವು ಸಾಧಿಸಿದ ಬಿಜೆಪಿ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಮತ ಯಂತ್ರಗಳನ್ನು ಚಾಕಚಕ್ಯತೆಯಿಂದ ಬಿಜೆಪಿಯವರು ನಿಭಾಯಿಸಿ, ಅವರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿರುವ ಅಂಶಗಳು ಬೆಳಕಿಗೆ ಬಂದಿವೆ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಆರೋಪಿಸಿದರು.

ಮತಯಂತ್ರ ಬಳಕೆ ಮಾಡದ ಕಡೆ ಬೇರೆ ಪಕ್ಷದವರು ಗೆದ್ದಿದ್ದಾರೆ. ಮತಯಂತ್ರ ಇರುವೆಡೆ ಬಿಜೆಪಿ ಗೆದ್ದಿದ್ದು, ಅನುಮಾನಗಳು ವ್ಯಕ್ತವಾಗಿವೆ. 17 ಮಿತ್ರ ಪಕ್ಷಗಳನ್ನು ಒಳಗೊಂಡಂತೆ ಸಂಸತ್‌ನಲ್ಲಿ ಸದರಿ ವಿಚಾರ ಚರ್ಚಿಸಲು ನಿರ್ಧಾರ ಮಾಡಿರುವುದಾಗಿ ಹೇಳಿದರು. ರಾಜಕಾರಣ ಉದ್ದೇಶದಿಂದ ಒಬ್ಬ ಪ್ರಧಾನ ಮಂತ್ರಿಯವರು ಗ್ರಾಪಂ ಮಟ್ಟಕ್ಕೆ ಇಳಿದು ಮಾತ ನಾಡುವುದು
ಸರಿಯಲ್ಲ. ಡಾ.ಮನಮೋಹನ್‌ಸಿಂಗ್‌ ಬಗ್ಗೆ ಹಗುರ ವಾಗಿ ಮಾತನಾಡಿರುವುದು ಖಂಡನೀಯ. ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next