ಬೆಂಗಳೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಐಕ್ಯತಾ ಸಮಾವೇಶದ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹಿರಿಯ ನಾಯಕ ಎಸ್.ವಿ.ಉಗ್ರಪ್ಪ ಅವರು ಸಿದ್ದರಾಮಯ್ಯ ಅವರನ್ನು ಆಹ್ವಾನ ಇರದಿದ್ದರೂ ಯಾಕೆ ಬಂದಿರಿ ಎಂದು ತಮಾಷೆಗೆ ಪ್ರಶ್ನಿಸಿದ್ದು ವಿಶೇಷವಾಗಿತ್ತು.
ಖಾಸಗಿ ಹೊಟೇಲ್ ನಲ್ಲಿ ನಡೆದ ಸಭೆಗೆ ಆಗಮಿಸಿದ ವೇಳೆ, ‘ಸಿದ್ದರಾಮಯ್ಯನವರೇ ನಿಮಗೆ ಈ ಕಾರ್ಯಕ್ರಮ ಕ್ಕೆ ಆಹ್ವಾನ ಇರಲಿಲ್ಲ, ಆದ್ರೂ ಯಾಕೆ ಬಂದ್ರಿ’ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ. ಉತ್ತರ ನೀಡಿದ ಮಾಜಿ ಸಿಎಂ ‘ಏ ಉಗ್ರಪ್ಪಾ, ನಾನು ಬರೋ ಹಂಗೆ ಇರಲಿಲ್ಲ, ಪರಮೇಶ್ವರ್ ಫೋನ್ ಮಾಡಿ ಕರೆದ್ರು, ಅದಕ್ಕೇ ಬಂದಿದ್ದೀನಿ.ನಿಂಗೆ ಈ ತರಾ ಮಾತಾಡಿಲ್ಲ ಅಂದ್ರೆ ತಿಂದಿದ್ದು ಅರಗಲ್ವಾ’ ಎಂದು ಹಾಸ್ಯ ಚಟಾಕಿ ಹಾರಿಸಿದರು.ಈ ವೇಳೆ ಉಗ್ರಪ್ಪ ಅವರು ನಗುತ್ತಾ ಸುಮ್ಮನೆ ಆದರು.
ಇದನ್ನೂ ಓದಿ : 51 ಕ್ಷೇತ್ರಗಳು ಬಿಟ್ಟು ಎಲ್ಲೇ ನಿಂತರೂ ಸಿದ್ದರಾಮಯ್ಯ ಗೆಲ್ತಾರೆ: ಹೆಚ್.ಸಿ.ಮಹದೇವಪ್ಪ
ಕಾಂಗ್ರೆಸ್ ನಿಂದ ಎಸ್ ಸಿ ಎಸ್ ಟಿ ಐಕ್ಯತಾ ಸಮಾವೇಶ ಭರದ ಸಿದ್ದತೆ ನಡೆಸಲಾಗುತ್ತಿದ್ದು,ಸಮಾವೇಶ ಆಯೋಜನೆ ಜವಾಬ್ದಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೆಗಲಿಗೆ ನೀಡಲಾಗಿದೆ.
ಐಕ್ಯತಾ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಎಲ್. ಹನುಮಂತಯ್ಯ ಪ್ರಿಯಾಂಕ ಖರ್ಗೆ, ಮೋಟಮ್ಮ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದರು.