ಬೆಂಗಳೂರು: ಬಿಜೆಪಿಯ ಅಜೆಂಡಾ ಆಪರೇಷನ್ ಕಮಲದ ಸರ್ಕಾರದ ಬಗ್ಗೆ ಜನ ನಿರ್ಣಯ ಮಾಡಿದ್ದಾರೆ,ಈ ಸರ್ಕಾರಕ್ಕೆ ಆದಷ್ಟು ಬೇಗ ಇತಿಶ್ರೀ ಹಾಡೇ ಹಾಡುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸೋಮವಾರ ಹೇಳಿಕೆ ನೀಡಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಈಗಲೂ ವಿಕಾಸ್ ಅಗಾಡಿಯ ಅಂಗವಾಗಿದೆ. ಅಲ್ಲಿ ಬಹಿರಂಗವಾಗಿಯೇ ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆ
ಈಗಾಗಲೇ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದಾರೆ. ಈಗ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಿದೆ
ಮಹಾರಾಷ್ಟ್ರದಲ್ಲಿ ಆಗುತ್ತಿರುವುದು ಇದೇ, ಶಿವಸೇನೆಯ ಶಾಸಕರನ್ನ ಒಡೆದು ಅಸ್ಸಾಂಗೆ ಕರೆದುಕೊಂಡು ಹೋಗಿದ್ದಾರೆ. ಪ್ರಜಾಸತ್ತಾತ್ಮಕ ಸರ್ಕಾರವನ್ನ ಅಸ್ತಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಬೇಕಾದರೆ ನೇರವಾಗಿ ಜನರಿಂದ ಆಯ್ಕೆಯಾಗಿ ಬರಲಿ.ಅದು ಬಿಟ್ಟು ಹೀಗೆ ಮಾಡುವುದು ಯಾಕೆ ಎಂದು ಪ್ರಶ್ನಿಸಿದರು.
ದಲಿತ ಸಿಎಂ ಘೋಷಿಸುವಂತೆ ಕಾಂಗ್ರೆಸ್ ಗೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾಕೆ ದಲಿತರನ್ನ ಸಿಎಂ ಮಾಡಲಿಲ್ಲ.ಯಡಿಯೂರಪ್ಪರನ್ನ ಕೆಳಗಿಳಿಸಿದ ಬಳಿಕ ದಲಿತರಿಗೆ ಅವಕಾಶ ನೀಡಬಹುದಾಗಿತ್ತು. ಅದರ ಬದಲಿಗೆ ಯಾಕೆ ಮತ್ತೆ ಲಿಂಗಾಯತರ ಸಮುದಾಯಕ್ಕೆ ಸಿಎಂ ಪಟ್ಟ ಕಟ್ಟಿದರು ಎಂದು ಪ್ರಶ್ನಿಸಿದರು.
ಯಾರನ್ನು ಸಿಎಂ ಮಾಡಬೇಕು ಅನ್ನುವುದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಚುನಾವಣೆ ನಂತರ ಸಿಎಂ ಹುದ್ದೆ ಯಾರಿಗೆ ಅನ್ನುವುದು ತೀರ್ಮಾನವಾಗಲಿದೆ ಎಂದರು.
Related Articles
ಸಿದ್ದರಾಮಯ್ಯ ನಮ್ಮ ಪಕ್ಷದ ಶಕ್ತಿ, ಯಾವುದೇ ನಿರ್ಣಯ ಮಾಡಿದರೂ ಸ್ಪಷ್ಟತೆ ಇರುತ್ತದೆ. ಅವರ ಹಿಂದೆ ದೊಡ್ಡ ಜನ ಬಳಗವೇ ಇದೆ. ಅವರ ಬೆಂಬಲಕ್ಕೆ ನಾವೆಲ್ಲರೂ ಇದ್ದೇವೆ, ಅವರೂ ಅಷ್ಟೇ ಸಮರ್ಥರಿದ್ದಾರೆ ಎಂದರು.
ಲಿಂಗಾಯತ ಮಠಗಳಿಗೆ ಮೋದಿ, ಅಮಿತ್ ಶಾ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ವಿಚಾರ. ಲಿಂಗಾಯತ ಮಠಗಳಿಗೆ ಹೋಗುವುದು ತಪ್ಪಲ್ಲ. ನಮ್ಮ ನಾಯಕ ರಾಹುಲ್ ಗಾಂಧಿಯವರು ಸಿದ್ದಗಂಗಾ ಮಠಕ್ಕೆ ಬಂದಿದ್ದರು. ಹಾಗೆಯೇ ಅವರೂ ಬರುತ್ತಿರಬಹುದು ಎಂದರು.
ಈಗಾಗಲೇ ಬಿಜೆಪಿ ವಿರುದ್ಧ ಲಿಂಗಾಯತರಷ್ಟೇ ಬೇಸರಗೊಂಡಿಲ್ಲ. ಎಲ್ಲಾ ಸಮುದಾಯದ ಜನರು ಆಕ್ರೋಶಗೊಂಡಿದ್ದಾರೆ. ಸ್ವತಃ ಬಿಜೆಪಿ ಕಾರ್ಯಕರ್ತರೇ ಈ ಸರ್ಕಾರ ಯಾಕಾದರೂ ಇದೆಯೋ ಅನ್ನುತ್ತಿದ್ದಾರೆ ಎಂದರು.
ಮುಂದೆ ನಾನೇ ರಾಜ್ಯದ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ನಾವೇ ಸಿಎಂ ಎಂದು ಘೋಷಣೆ ಮಾಡಿಕೊಳ್ಳಲು ಆಗುತ್ತದಾ ? ಅದನ್ನ ಜನರು ತೀರ್ಮಾನಿಸಬೇಕು ಮೊದಲು125 ಸ್ಥಾನ ಬರಬೇಕು ಅಲ್ಲವೇ ? ತಮಗೆ ತಾವೇ ಸಿಎಂ ಅಂತಾ ಘೋಷಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಜನ ನಮಗೆ ಆಶೀರ್ವಾದ ಮಾಡುತ್ತಾರೆ. ಅಧಿಕಾರದ ಗದ್ದುಗೆ ಏರುವುದು ನಿಶ್ವಿತ ಎಂದರು.