Advertisement
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಈಗಲೂ ವಿಕಾಸ್ ಅಗಾಡಿಯ ಅಂಗವಾಗಿದೆ. ಅಲ್ಲಿ ಬಹಿರಂಗವಾಗಿಯೇ ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆಈಗಾಗಲೇ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದಾರೆ. ಈಗ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಿದೆ
ಮಹಾರಾಷ್ಟ್ರದಲ್ಲಿ ಆಗುತ್ತಿರುವುದು ಇದೇ, ಶಿವಸೇನೆಯ ಶಾಸಕರನ್ನ ಒಡೆದು ಅಸ್ಸಾಂಗೆ ಕರೆದುಕೊಂಡು ಹೋಗಿದ್ದಾರೆ. ಪ್ರಜಾಸತ್ತಾತ್ಮಕ ಸರ್ಕಾರವನ್ನ ಅಸ್ತಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಬೇಕಾದರೆ ನೇರವಾಗಿ ಜನರಿಂದ ಆಯ್ಕೆಯಾಗಿ ಬರಲಿ.ಅದು ಬಿಟ್ಟು ಹೀಗೆ ಮಾಡುವುದು ಯಾಕೆ ಎಂದು ಪ್ರಶ್ನಿಸಿದರು.
Related Articles
Advertisement
ಲಿಂಗಾಯತ ಮಠಗಳಿಗೆ ಮೋದಿ, ಅಮಿತ್ ಶಾ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ವಿಚಾರ. ಲಿಂಗಾಯತ ಮಠಗಳಿಗೆ ಹೋಗುವುದು ತಪ್ಪಲ್ಲ. ನಮ್ಮ ನಾಯಕ ರಾಹುಲ್ ಗಾಂಧಿಯವರು ಸಿದ್ದಗಂಗಾ ಮಠಕ್ಕೆ ಬಂದಿದ್ದರು. ಹಾಗೆಯೇ ಅವರೂ ಬರುತ್ತಿರಬಹುದು ಎಂದರು.
ಈಗಾಗಲೇ ಬಿಜೆಪಿ ವಿರುದ್ಧ ಲಿಂಗಾಯತರಷ್ಟೇ ಬೇಸರಗೊಂಡಿಲ್ಲ. ಎಲ್ಲಾ ಸಮುದಾಯದ ಜನರು ಆಕ್ರೋಶಗೊಂಡಿದ್ದಾರೆ. ಸ್ವತಃ ಬಿಜೆಪಿ ಕಾರ್ಯಕರ್ತರೇ ಈ ಸರ್ಕಾರ ಯಾಕಾದರೂ ಇದೆಯೋ ಅನ್ನುತ್ತಿದ್ದಾರೆ ಎಂದರು.
ಮುಂದೆ ನಾನೇ ರಾಜ್ಯದ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ನಾವೇ ಸಿಎಂ ಎಂದು ಘೋಷಣೆ ಮಾಡಿಕೊಳ್ಳಲು ಆಗುತ್ತದಾ ? ಅದನ್ನ ಜನರು ತೀರ್ಮಾನಿಸಬೇಕು ಮೊದಲು125 ಸ್ಥಾನ ಬರಬೇಕು ಅಲ್ಲವೇ ? ತಮಗೆ ತಾವೇ ಸಿಎಂ ಅಂತಾ ಘೋಷಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಜನ ನಮಗೆ ಆಶೀರ್ವಾದ ಮಾಡುತ್ತಾರೆ. ಅಧಿಕಾರದ ಗದ್ದುಗೆ ಏರುವುದು ನಿಶ್ವಿತ ಎಂದರು.