Advertisement

IshanKishan; ರಣಜಿ ಆಡಬೇಕೆಂಬ ಬಿಸಿಸಿಐ ಸೂಚನೆ ನಿರ್ಲಕ್ಷ್ಯ ಮಾಡಿದ್ದೇಕೆ? ಉತ್ತರಿಸಿದ ಇಶಾನ್

12:25 PM Jul 08, 2024 | Team Udayavani |

ಮುಂಬೈ: ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ ಇಶಾನ್ ಕಿಶನ್ ಅವರು ಕಳೆದ ಕೆಲವು ತಿಂಗಳಿನಿಂದ ಟೀಂ ಇಂಡಿಯಾದ ಹೊರಗಿದ್ದಾರೆ. ಕಳೆದ ವರ್ಷ ನವೆಂಬರ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅವರಿದ್ದರೂ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ನಂತರ, ಕಿಶನ್ ರಣಜಿ ಟ್ರೋಫಿ ಪಂದ್ಯಗಳಲ್ಲಿಯೂ ಆಡದಿರಲು ನಿರ್ಧರಿಸಿದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

Advertisement

ಆಗ ಟೀಂ ಇಂಡಿಯಾ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಇಶಾನ್ ಮತ್ತೆ ತಂಡಕ್ಕೆ ಬರಬೇಕಾದರೆ ದೇಶಿಯ ಕ್ರಿಕೆಟ್ ಆಡಬೇಕು ಎಂದು ಸೂಚಿಸಿದ್ದರು. ಆದರೆ ಇಶಾನ್ ಅದನ್ನು ನಿರ್ಲ್ಯಕ್ಷ್ಯ ಮಾಡಿದ್ದರು. ಇಶಾನ್ ಕಿಶನ್ ಇದಕ್ಕೆ ಸಾಕಷ್ಟು ಟೀಕೆ ಎದುರಿಸಿದ್ದರು.

ಇದರೆಲ್ಲದರ ಬಗ್ಗೆ ಇದೀಗ ಇಶಾನ್ ಕಿಶನ್ ಮಾತನಾಡಿದ್ದಾರೆ. “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ನೀವು ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ನೀವು ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ. ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಹೀಗಾಗಿ ನನಗೆ ದೇಶೀಯ ಕ್ರಿಕೆಟ್ ನಲ್ಲಿ ಅಡುವುದು ಸಾಧ್ಯವಿರಲಿಲ್ಲ. ನೀವು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬ್ರೇಕ್ ಪಡೆದು ದೇಶೀಯ ಕ್ರಿಕೆಟ್ ನಲ್ಲಿ ಆಡಬೇಕು ಎಂದರೆ ಇದಕ್ಕೆ ಅರ್ಥವೇನು? ಹಾಗೆಯೇ ಇದ್ದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೆ” ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಕಿಶನ್ ಹೇಳಿದರು.

ಉತ್ತಮ ಪ್ರದರ್ಶನ ನೀಡಿದರೂ ಭಾರತ ತಂಡದಲ್ಲಿ ಸಾಕಷ್ಟು ಅವಕಾಶ ಸಿಗದೆ ನಿರಾಶೆಗೊಂಡಿದ್ದೇನೆ ಎಂದು ಕಿಶನ್ ಒಪ್ಪಿಕೊಂಡರು.

“ಇದು ನಿರುತ್ಸಾಹಗೊಳಿಸಿತು. ನಾನು ಎಲ್ಲವನ್ನೂ ಚೆನ್ನಾಗಿದೆ ಎಂದು ಹೇಳಲು ಬಯಸುವುದಿಲ್ಲ. ಇದು ನನಗೆ ಸುಲಭವಾಗಿರಲಿಲ್ಲ. ನಾನು ಪ್ರದರ್ಶನ ನೀಡುತ್ತಿದ್ದರೂ ನನಗೆ ಯಾಕೆ, ಏನಾಗುತ್ತಿದೆ ಎಂಬಂತಹ ಪ್ರಶ್ನೆಗಳು ನನಗೆ ಕಾಡುತ್ತಿದ್ದವು” ಎಂದು ಕಿಶನ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next