Advertisement

29 ದಿನದಲ್ಲೇ ಜಿಲ್ಲಾಧಿಕಾರಿ ಶರತ್‌ ವರ್ಗಾಯಿಸಿದ್ದೇಕೆ?

01:55 PM Sep 30, 2020 | Suhan S |

ಮೈಸೂರು: ಕನ್ನಡದ ಜಿಲ್ಲಾಧಿಕಾರಿ ಬಿ. ಶರತ್‌ ಅವರನ್ನು ರಾಜ್ಯ  ‌ಸರ್ಕಾರ ಕೇವಲ 29 ದಿನಗಳಲ್ಲೇ ವರ್ಗಾಯಿಸಿದ್ದು, ಇದರ ‌ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ರೆಡ್ಡಿ ಕೈವಾಡ ಇದೆ ಎಂದು ಶಾಸಕ ಸಾ.ರಾ. ಮಹೇಶ್‌ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತ‌ನಾಡಿದ ‌ ಅವರು, ಬಿ.ಶರತ್‌ ಅವರು ಮೈಸೂರು ಡೀಸಿಯಾಗಿ ಬಂದು ಹೆಚ್ಚಿನ ದಿನಗಳಾಗಿರಲಿಲ್ಲ. , ದಸರಾ ಸಂದರ್ಭದಲ್ಲಿ ¨ದ‌ಸರಾ ವಿಶೇಷ ‌ ಅಧಿಕಾರಿಯಾಗಿದ್ದ ಅವರನ್ನು ಸ್ಥಳ ‌ ತೋರಿಸದೆ ವರ್ಗಾವಣೆಮಾಡಿರುವುದು ಸರಿಯಲ್ಲ. ಸ‌ರ್ಕಾದ ಈ ನಡೆಯ

ಹಿಂದೆ ಹ‌ಣ ಲಾಬಿ, ವರ್ಗಾವಣೆ ದಂಧೆ ಕೆಲಸ ‌ಮಾಡಿದೆ.ರಾಜ್ಯದಲ್ಲಿ ಆಂಧ್ರದವರ ದರ್ಬಾರ್‌ ನಡೆಯುತ್ತಿದೆ. ಇಲ್ಲಿ ಬಿ.ಎಸ್‌ .ಯಡಿಯೂರಪ್ಪ ಆಡಳಿತ ನಡೆಸುತ್ತಿಲ್ಲ. ಹೊರಗಿನವರುಅಧಿಕಾರನಡೆಸುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದರು. ಈ ರೀತಿ ಅನಗತ್ಯ ವರ್ಗಾವಣೆ ಮಾಡಿದ್ದೆ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಬಿ.ಶರ‌ತ್‌ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದರ ಹಿಂದಿನ ‌ ಉದ್ದೇಶವೇನು? ಕನ್ನಡಿಗರು ಡೀಸಿ ಆಗುವುದು ಅಪರೂಪ. ಹೀಗಿರುವಾಗ ಅಂತಹವರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಹೀಗೆ ಮಾಡುವುದಿದ್ದರೆ ಶರತ್‌ ಅವರನ್ನು ಮೈಸೂರಿಗೆ ನಿಯುಕ್ತಿಗೊಳಿಸಬಾರದಿತ್ತು. ಇದು ಅವರಿಗ ಅವಮಾನ ಎಂದು ಕಿಡಿಕಾರಿದರು.  ಇದು ಶರತ್‌ ಅವರಿಗೆ ಆದ ಅನ್ಯಾಯವಷ್ಟೇ ಅಲ್ಲ, ಕನ್ನಡ ಐಎಎಸ್‌ ಅಧಿಕಾರಿಗಳಿಗೆ ಆದ ‌ ಅಪಮಾನ. ಹೀಗಾಗಿ, ಯಾದೇ ಒತ್ತಡಕ್ಕೆ ಮಣಿಯದೇ ಸರ್ಕಾರದ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ನ್ಯಾಯಾಂಗದ ಮೊರೆ ಹೋಗಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ತಮ್ಮ ವರ್ಗಾವಣೆಯಿಂದ ‌ ಅನ್ಯಾಯವಾಗಿದೆಂದು ಕೋರ್ಟ್‌ಗೆ ಹೋಗಿದ್ದೀರಿ. ಇದೀಗ ‌ ಬಿ.ಶರತ್‌ ಅವರಿಗೂ ಅನ್ಯಾಯವಾಗಿದೆ. ಈಗ ನಿಮ್ಮ ಮನಸ್ಸಸಾಕ್ಷಿಗೆ ಏನುಆಗಲಿಲ್ಲವೇ? ಎಂದು ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದರು. ಕೋವಿಡ್ ದಿಂದ ಜನರು ಸಾಯುತ್ತಿದ್ದಾರೆ. ವೆಂಟಿಲೇಟರ್‌, ಆಕ್ಸಿಜನ್‌, ಹಾಸಿಗೆ ಸಿಗದೆ ರೋಗಿಗಳು ಗೋಳಾಡುತ್ತಿದ್ದು, ವರ್ಗಾವಣೆ ದಂಧೆಯನ್ನು ಬಿಟ್ಟು ರಾಜ್ಯ ಸರ್ಕಾರ ಇತ್ತ ಗಮನ ನೀಡಬೇಕು. ವರ್ಗಾವಣೆ ವಿಷಯದಲ್ಲಿ ಜೂಜಾಟ ಆಡಬಾರದು ಎಂದರು.

ಅಸಹಾಯಕಉಸ್ತುವಾರಿ ಸಚಿವರು :  ಎಸ್‌.ಟಿ.ಸೋಮಶೇಖರ್‌ ಅಸಹಾಯಕ (ಹೆಲ್ಪ್ಲೆಸ್‌) ಜಿಲ್ಲಾ ಉಸ್ತುವಾರಿ ಸಚಿವರು. ಹಿಂದಿನ ದಿನ ಡೀಸಿ ಅವರೊಂದಿಗೆ ಸಭೆ ನಡೆಸಿರುವ ನಿಮಗೆ ಈ ವರ್ಗಾವಣೆ ವಿಷಯವೇ ಗೊತ್ತಿರಲಿಲ್ಲವೇ? ನಿಮ್ಮನ್ನು ಕೇಳದೇ ಇದು ನಡೆದಿದೆಯೇ? ರೋಹಿಣಿ ಹಠಕ್ಕೆ ಬಿದ್ದಿದ್ದಾರೆ. ನಾನು ಡೀಸಿ ಆಗಿಯೇ ಇರಬೇಕು ಎಂದುಕೊಂಡಿದ್ದಾರೆ. ಹೀಗಾಗಿಯೇ ಮೈಸೂರಿಗೆ ಬಂದಿದ್ದಾರೆ. ಈ ರೀತಿಯ ಅಧಿಕಾರ ದಾಹ ಇರುವ ಇವರಿಂದ ಹೇಗೆಕೆಲಸ ಮಾಡಿಸುತ್ತೀರಿ ಎಂದರು.

Advertisement

ರೋಹಿಣಿ ಅಧಿಕಾರದಾಹ ಉಳ್ಳವರು :  ರೋಹಿಣಿ ಸಿಂಧೂರಿ ಅಧಿಕಾರ ದಾಹ ಉಳ್ಳವರು. ಹಾಸನ  ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಮೂರು ಸಲ ವರ್ಗಾಯಿಸಲಾಗಿತ್ತು. ಆಗ ಮೂರು ಸಲವೂ ಸರ್ಕಾರದ ಆದೇಶ ವಿರುದ್ಧ ಕೋರ್ಟ್‌ನ ಮೂಲಕ ತಡೆಯಾಜ್ಞೆ ತಂದು ಅಲ್ಲೇ ಉಳಿದುಕೊಂಡಿದ್ದರು.ಇವರಚರಿತ್ರೆಯೂಸರಿಯಲ್ಲ.ಇವರ ಅಧಿಕಾರಾವಧಿಯಲ್ಲಿ ನಡೆದಿದ್ದ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವದ175ಕೋಟಿ ರೂ.ಅನುದಾನದ ಬಳಕೆ ಕುರಿತು ತನಿಖೆ ಆಗಬೇಕು. ಆಗ ಅಕ್ರಮ ಬಯಲಿಗೆ ಬರಲಿದೆ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next