Advertisement

ವಿಶ್ವಕಪ್ ಗೆದ್ದ ಧೋನಿಗಿಲ್ಲ ಬಿಸಿಸಿಐ ಗುತ್ತಿಗೆ: ಇಲ್ಲಿದೆ ಅಸಲಿ ಕಾರಣ

09:56 AM Jan 17, 2020 | keerthan |

ಮುಂಬೈ: ಭಾರತಕ್ಕೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿಯ ಬಗೆಗಿನ ಚರ್ಚೆಗಳು ಮತ್ತೆ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ಕೊಟ್ಟಿದ್ದು ಬಿಸಿಸಿಐ ಇಂದು ಪ್ರಕಟಿಸಿದ ಗುತ್ತಿಗೆ ಪಟ್ಟಿ.

Advertisement

ಬಿಸಿಸಿಐ ಇಂದು ತನ್ನ 2019-2020ರ ಪಾಲಿನ ವಾರ್ಷಿಕ ಕಾಂಟ್ರಾಕ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ಮಹೇಂದ್ರ ಸಿಂಗ್ ಧೋನಿಯ ಹೆಸರು ಕಾಣಿಸಿದೇ ಇದ್ದಿದ್ದು. ಇದುವರೆಗೆ ವಾರ್ಷಿಕ ಐದು ಕೋಟಿ ವೇತನದ ‘ಎ’ ಪಟ್ಟಿಯಲ್ಲಿದ್ದ ಧೋನಿಯನ್ನು ಈ ವರ್ಷ ಕೈಬಿಡಲಾಗಿದೆ. ‘

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಧೋನಿ ದೂರವಾಗುತ್ತಾರೆ. ಅದಕ್ಕಾಗಿ ಮಾಹಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಆದರೆ ಅಸಲಿ ವಿಷಯ ಈಗ ಬಯಲಾಗಿದೆ.

ಇಂದು ಬಿಸಿಸಿಐ ಬಿಡುಗಡೆ ಮಾಡಿರುವುದು 2019ರ ಅಕ್ಟೋಬರ್ ನಿಂದ 2020ರ ಸಪ್ಟೆಂಬರ್ ವರೆಗಿನ ಪಟ್ಟಿ. ಬಿಸಿಸಿಐನ ನಿಯಮದ ಪ್ರಕಾರ ವಾರ್ಷಿಕ ವೇತನ ಗುತ್ತಿಗೆ ಪಡೆಯಲು ಆಟಗಾರನೊಬ್ಬ ಆ ಋತುವಿನಲ್ಲಿ ಕನಿಷ್ಠ ಮೂರು ಟಿ ಟ್ವೆಂಟಿ ಪಂದ್ಯ ಆಡಿರಬೇಕು. ಆದರೆ 2019ರ ಜುಲೈ ನಂತರ ಧೋನಿ ಯಾವುದೇ ಪಂದ್ಯವನ್ನೂ ಆಡಿಲ್ಲ. ಹಾಗಾಗಿ ಧೋನಿಯನ್ನು ಗುತ್ತಿಗೆಯಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next