Advertisement

ನನಗೂ ಕ್ಯಾನ್ಸರ್‌ ಬಂದುಬಿಟ್ಟರೆ..?

04:00 PM May 30, 2019 | sudhir |

ಇತ್ತೀಚೆಗೆ ನಿರೂಪಾಗೆ, ಕೆಲಸದಿಂದ ಬಂದ ಮೇಲೆ ಮಗುವನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಅವಳ ತಾಯಿ ಮತ್ತು ಅತ್ತೆ, ಮಗುವನ್ನು ಸುಧಾರಿಸಿಕೊಟ್ಟರೂ ಮನೆಕೆಲಸ ಕೈ ಹತ್ತುತ್ತಿಲ್ಲ. ಮಗುವನ್ನು ನೋಡಿಕೊಳ್ಳುವುದಿಲ್ಲ ಎಂದು ಗಂಡನ ಮೇಲೆ ಸಿಡಿಮಿಡಿಗೊಂಡಿ¨ªಾಳೆ. “ನಿನಗೆ ತಲೆ ಕೆಟ್ಟಿದೆ’ ಎಂದು ಗಂಡ ಬೈದಿದ್ದು ಅವಳಿಗೆ ಇನ್ನೂ ನೋವಾಗಿದೆ.

Advertisement

ಆಫೀಸಿನಲ್ಲಿ ತನ್ನ ಕಷ್ಟ ತೋಡಿಕೊಂಡಾಗ ಒಬ್ಬಳು ಗೆಳತಿ, ತಾಯಿ ಮತ್ತು ಅತ್ತೆಯ ಸಹಾಯವಿರುವ ನಿರೂಪಾ, ಸುಖವಾಗಿದ್ದರೂ ಸುಮ್ಮಸುಮ್ಮನೆ ಗೋಳು ಹೊಯೊRಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬೈದು ಬುದ್ಧಿ ಹೇಳಿದರೆ, ಇನ್ನೊಬ್ಬಳು, ನಿರೂಪಾಳ ಗಂಡ ಲಿಂಗ ತಾರತಮ್ಯ ತೋರುತ್ತಿರುವುದಾಗಿಯೂ, ಮಗುವನ್ನು ಸಾಕುವಲ್ಲಿ ಮತ್ತು ಮನೆಗೆಲಸದಲ್ಲಿ ಅವನದ್ದೂ ಸಮಪಾಲು ಇರಬೇಕೆಂದೂ, ಇದಕ್ಕಾಗಿ ನಿರೂಪಾ ಹೋರಾಡಬೇಕೆಂದೂ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿ¨ªಾಳೆ. ಗೆಳತಿಯ ಮಾತು ಕೇಳಿಕೊಂಡು, ನಿರೂಪಾ ತನ್ನ ಗಂಡನನ್ನು ಬಗ್ಗಿಸಲು ಪ್ರಯತ್ನಪಟ್ಟಾಗ ಜಗಳ ಜಾಸ್ತಿಯಾಯಿತು. ಮಗುವು ಬಡವಾಗಿ ಶಿಶು ತಜ್ಞರಿಗೆ ತೋರಿಸಬೇಕಾಯಿತು. ಶಿಶು ತಜ್ಞರು ಕೌಟುಂಬಿಕ ಸಮಾಲೋಚನೆಗಾಗಿ ಅವರನ್ನು ನನ್ನ ಬಳಿ ಕಳಿಸಿದರು.

ಅಳಿಯನ ತಪ್ಪಿಗಿಂತ ಮಗಳ ತಪ್ಪು ಜಾಸ್ತಿಯೆಂದು ನಿರೂಪಾ ತಾಯಿ ಮತ್ತು ಅತ್ತೆಯವರು ಬೇರೆ ಬೇರೆ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದರು. ನಿರೂಪಾಳ ದೊಡ್ಡಪ್ಪ ಕ್ಯಾನ್ಸರ್‌ನಿಂದ ತೀರಿಹೋದಾಗಿನಿಂದ ಆಕೆಗೆ ಈ ರೀತಿ ಸಿಡುಕು ಸ್ವಭಾವ ಬಂದಿರುವುದಾಗಿ ಅವರಿಬ್ಬರು ನೆನಪಿಸಿಕೊಂಡರು.

ಸಣ್ಣಪುಟ್ಟ ಮಾತಿಗೆಲ್ಲ ನಿರೂಪಾ ಬಹುಬೇಗ ಅಳುತ್ತಿದ್ದಳು. ಮಗುವಿಗೆ ಊಟ ಮಾಡಿಸಲು ಆಸಕ್ತಿಯಿಲ್ಲ. ರಾತ್ರಿಯ ಹೊತ್ತು ಮಗು ತಾಯಿಯ ಪಕ್ಕದÇÉೇ ಮಲಗುತ್ತೇನೆಂದು ಅತ್ತರೂ ಅವಳಿಗದು ಬೇಕಿಲ್ಲ. ಕೈಕಾಲು ನೋವು- ಸುಸ್ತು- ಅಸಹಾಯಕತೆ ಅವಳನ್ನು ಕಾಡುತ್ತಿದೆಯಂತೆ.

ನಿರೂಪಾಗೆ ದೊಡ್ಡಪ್ಪ ಸತ್ತ ನಂತರ ಪ್ಯಾನಿಕ್‌ ಅಟ್ಯಾಕ್‌ ಆಗಿದೆ. ಸ್ವಲ್ಪ ಪುಕ್ಕಲು ಸ್ವಭಾವವಿರುವ ವ್ಯಕ್ತಿಗಳು, ಪ್ರೀತಿಪಾತ್ರರ ಸಾವಿಗೆ ತೀವ್ರವಾಗಿ ಸ್ಪಂದಿಸುತ್ತಾರೆ. ಸಾವಿನ ಸುತ್ತಮುತ್ತಲಿನ ನೋವನ್ನೆÇÉಾ ತಮ್ಮದಾಗಿಸಿಕೊಳ್ಳುತ್ತಾರೆ. ದೊಡ್ಡಪ್ಪನಿಗೆ ಬಂದಂತೆ ತನಗೂ ಕ್ಯಾನ್ಸರ್‌ ಬಂದರೆ, ಮಗುವಿನ ಗತಿಯೇನು ಎಂಬ ಚಿಂತೆ, ಜೊತೆಗೆ ಸಾವಿನ ನಂತರ ದೊಡ್ಡಮ್ಮ ಪಟ್ಟ ಪಾಡು- ಫ‌ಜೀತಿ ಅವಳನ್ನು ಸಂಕಟಕ್ಕೀಡು ಮಾಡಿತ್ತು.

Advertisement

ಮಗುವಿನ ಮೇಲೆ ಪ್ರೀತಿಯನ್ನು ಕಡಿಮೆ ಮಾಡಿಕೊಂಡರೆ ತಾನು ಸತ್ತರೂ ಮಗು ತನ್ನನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಮಗುವನ್ನು ದೂರವಿಡುತ್ತಿದ್ದಳು. ದೂರವಿಟ್ಟು ಅಳುತ್ತಿದ್ದಳು. ಗಂಡ, ಮಗುವಿನ ಜೊತೆಗೆ ಇನ್ನೂ ಹೆಚ್ಚಿನ ಬಾಂಧವ್ಯ ಬೆಳೆಸಿಕೊಳ್ಳಲಿ ಎಂದು ಹಾತೊರೆಯುತ್ತಿದ್ದಳು.

ಪ್ಯಾನಿಕ್‌ ಅಟ್ಯಾಕ್‌ ಯಾರಿಗಾದರೂ ಬರಬಹುದು. ಅದಕ್ಕೆ ಒಳಗಾದವರನ್ನು ಕೆಟ್ಟ ಆಲೋಚನೆಗಳೇ ಹೆಚ್ಚಾಗಿ ಕಾಡುತ್ತವೆ. ಆಫೀಸಿನಲ್ಲಿ ನಿಮ್ಮ ಸಮಸ್ಯೆಯನ್ನು ನಿಮ್ಮ ಸಹೋದ್ಯೋಗಿಗಳು ಪೂರ್ತಿಯಾಗಿ ಅರ್ಥಮಾಡಿಕೊಳ್ಳದೆ ನಿಮ್ಮನ್ನು ಬಯ್ಯಬಹುದು ಅಥವಾ ನೀವು ಪೂರ್ವಾಗ್ರಹಪೀಡಿತರಾಗುವಂತೆ ಮಾಡಬಹುದು. ಪ್ಯಾನಿಕ್‌ ಕಡಿಮೆಯಾಗಲು ನಿರೂಪಾಗೆ ಮನೋವೈದ್ಯರು ನೀಡುವ ಮಾತ್ರೆಗಳ ಅಗತ್ಯವಿತ್ತು. ಹಾಗೆಯೇ ನಿಯಮಿತವಾಗಿ ಉಸಿರಾಟ ಅಭ್ಯಾಸ ಮತ್ತು ವ್ಯಾಯಾಮ ಮಾಡಿದ ಮೇಲೆ ನಿರೂಪಾ ಈಗ ಖುಶಿಯಾಗಿ¨ªಾಳೆ.

– ಡಾ. ಶುಭಾ ಮಧುಸೂದನ್‌, ಮನೋಚಿಕಿತ್ಸಾ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next