ಈಕೆಯನ್ನ ನೋಡಿದವರಿಗೆ, ಇವಳೇನು ಹಾಲಿನಲ್ಲೇ ಸ್ನಾನ ಮಾಡ್ತಾಳ ಅಂತ ಡೌಟು ಬರೋದು ಸಹಜ. ಅಷ್ಟು ಬಿಳಿ, ಅಷ್ಟು ನುಣುಪು ಚರ್ಮ. ನೋಡೋಕೆ ಅಮೃತಶಿಲೆಯಿಂದ ಕಡೆದ ಗೊಂಬೆಯಂತಿದ್ದಾಳೆ. ಹೌದು, ಇಲ್ಲಿ ಹೇಳ್ತಿರೋದು ತಮನ್ನಾ ಭಾಟಿಯ ಬಗ್ಗೇನೆ! ಈಕೆ ಸೌಂದರ್ಯ ಕಾಪಾಡಿಕೊಳ್ಳೋಕೆ ಏನೇನು ಮಡೊದು ಅನ್ನೋ ಕುತೂಹಲ ಹಲವರಿಗೆ ಇದೆ.
ಈ “ಮಿಲ್ಕಿ ಬ್ಯೂಟಿ’ ನೋಡೋಕೆ ಎಷ್ಟು ಮಾಡರ್ನ್ ಇದ್ರೂ ಊಟ-ತಿಂಡಿ ವಿಚಾರದಲ್ಲಿ ತುಂಬಾ ಟ್ರೆಡಿಶನಲ್. ನಮ್ಮ ಹಿಂದಿನ ಕಾಲದವರ ಊಟ ಹೇಗಿತ್ತೋ ಹಾಗಿರುತ್ತೆ, ತಮನ್ನಾ ಊಟದ ಮೆನು. “ಡಯಟ್ ಹೆಸರಲ್ಲಿ ಊಟ- ತಿಂಡಿ ಬಿಡೋ ಜಾಯಮಾನ ನನ್ನದಲ್ಲ’ ಅಂತಾರೆ ತಮನ್ನಾ. ಇನ್‌ಸ್ಟಗ್ರಾಮ್‌ನಲ್ಲಿ ತಾವು ತಿನ್ನುವ ಫುಡ್ ಜೊತೆಗೆ ಸೆಲ್ಫಿ ಪೋಸ್ಟ್ ಮಾಡಿ, ನೋಡ್ರಪ್ಪಾ ನಾನ್ ಇದೆ°ಲ್ಲ ತಿಂತೀನಿ ಅಂದಿದಾರೆ.
ಬೇಯಿಸಿದ ಮೊಟ್ಟೆ ತಿನ್ನುವ ಫೋಟೊ ಹಾಕಿ, “ಮೊಟ್ಟೆಯ ಹಳದಿ ಭಾಗ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು’ ಅಂತ ಬರೆದುಕೊಂಡಿದ್ದಾರೆ. ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಅನ್ನೋ ವಾದ ಹಲವರದ್ದು. ಅದನ್ನು ತಿಂದರೆ ದಪ್ಪ ಆಗಿಬಿಡ್ತೇವೆ ಅಂತ ಅದರಿಂದ ದೂರ ಉಳಿಯುವವರೇ ಹೆಚ್ಚು. ಆದರೆ, ಮೊಟ್ಟೆಯ ಹಳದಿಯಲ್ಲಿ ಫೋಲಿಕ್ ಆ್ಯಸಿಡ್, ಕೋಲಿನ್, ಲುಟೀನ್, ಜೀಕ್ಸಾಂಥನ್ ಜೊತೆಗೆ ವಿಟಮಿನ್ ಎ, ಡಿ, ಇ, ಕೆ ಅಂಶಗಳು ಹೇರಳವಾಗಿವೆ. ಇವು ಚರ್ಮ ಮತ್ತು ಕೂದಲಿನ ಸೌಂದರ್ಯಕ್ಕೆ ಒಳ್ಳೆಯದು. ಈಗ ಗೊತ್ತಾಯ್ತಲ್ಲ, ತಮನ್ನಾ ಮೈ ಕಾಂತಿಯ ಗುಟ್ಟು ಏನೂಂತ.
ವಿದೇಶ ಪ್ರಯಾಣದಲ್ಲಿದ್ದಾಗಲೂ ತಮನ್ನಾ ರೈಸ್ ಐಟಂಗಳನ್ನೇ ಜಾಸ್ತಿ ತಿನ್ನುತ್ತಾರೆ. ರೈಸ್ ತಿಂದ್ರೆ ದಪ್ಪ ಆಗ್ತಾರೆ ಅನ್ನೋದನ್ನು ಇವರು ಪಾಲಿಸೋದಿಲ್ಲ. “ಫಿಟ್ ಗರ್ಲ್ಸ್ ಈಟ್ ಫ್ಯಾಟ್’ ಅಂತಾರೆ ತಮನ್ನಾ.
ಮೊಸರು, ಊಟವಾದ ಮೇಲೆ ಲಸ್ಸಿ, ರೈಸ್ ಐಟಂ, ಹಣ್ಣು, ತರಕಾರಿ, ಮೊಟ್ಟೆ ಹೀಗೆ ಯಾವುದೆಲ್ಲ ಆರೋಗ್ಯಕ್ಕೆ ಒಳ್ಳೆಯದೋ ಅದನ್ನೆಲ್ಲ ತಮನ್ನಾ ಚೆನ್ನಾಗಿಯೇ ತಿನ್ನುತ್ತಾರೆ. ಈಗಿನವರು ಡಯಟ್ ನೆಪದಲ್ಲಿ ಏನನ್ನೂ ತಿನ್ನದೆ ಅನೀಮಿಕ್ ಆಗಿ ಬಿಡ್ತಾರೆ, ಆದರೆ ನಮ್ಮ ಹಿಂದಿನವರ ಆಹಾರ ಪದ್ಧತಿ ಹಾಗಿರಲಿಲ್ಲ. ಯಾವುದನ್ನ, ಯಾವ ಕಾಲದಲ್ಲಿ, ಎಷ್ಟು ತಿನ್ನಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಜಾಸ್ತಿ ತಿಂದರೆ ದಪ್ಪ ಆಗ್ತಾರೆ ಅನ್ನೋದೆಲ್ಲಾ ಸುಳ್ಳು. “ಬ್ಯಾಕ್ ಟು ಬೇಸಿಕ್ಸ್’ ಅಂದ್ರೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಶೈಲಿಯೇ ದೇಹದ ಸೌಂದರ್ಯ ಮತ್ತು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು “ಮಿಲ್ಕಿ ಬ್ಯೂಟಿ’ಯ ಮಾತು.
ತಮನ್ನಾ ಮೆನು!
ಮೊಟ್ಟೆಯ ಹಳದಿ ಭಾಗ, ರೈಸ್ ಐಟಂ, ಹಣ್ಣು, ತರಕಾರಿ, ಲಸ್ಸಿ