Advertisement

ಪದೇಪದೆ ಗೂಗಲ್‌ ಎಡವುದಕ್ಕೆ ಏನು ಮತ್ತು ಯಾರು ಕಾರಣ? ಯಾಕೆ ತಪ್ಪುಗಳಾಗುತ್ತಿವೆ? ಇಲ್ಲಿ ಓದಿ

12:00 PM Oct 16, 2020 | Karthik A |

ಮಣಿಪಾಲ: ಗೂಗಲ್‌ನ ಕೆಲವೊಂದು ಹುಡುಕಾಟ ನಿಜಕ್ಕೂ ಭೀಕರವಾಗಿದೆ ಎಂದು ನಿಮಗೆ ಅನ್ನಿಸಿರಬಹುದು. ಅದರಲ್ಲೂ ವಿಶೇಷವಾಗಿ ಇತ್ತೀಚಿನ ಕೆಲವೊಂದು ಲೋಪಗಳು ಜಗತ್ತಿನಾದ್ಯಂತ ಟ್ರೋಲ್‌ ಆಗಿವೆ. ನೀವು ಏನಾದರೂ ಕೇಳಿದರೆ ಅದು ಬೇರೆಯೇ ಉತ್ತರವನ್ನು ನೀಡುತ್ತಿದೆ ಎಂದು ಹಲವು ಬಾರಿ ಅನ್ನಿಸಿರಬಹುದು.

Advertisement

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅಂದರೆ ಕೆಕೆಆರ್ ಪರ ಆಡುತ್ತಿದ್ದ ಶುಭಮನ್ ಗಿಲ್ ಕಳೆದ ತಿಂಗಳು ತಮ್ಮ 21ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈಗ ಗೂಗಲ್ ಕೂಡ ಅವರನ್ನು ಮದುವೆಯಾಗಿದೆ ಎಂದು ಹೇಳುತ್ತಿದೆ. ಅದೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ಅವರನ್ನು ಗಿಲ್‌ ಮದುವೆಯಾಗಿದ್ದಾರೆ ಎಂದು ಹೇಳಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಹಾಗಾದರೆ ಇದೇನು ಮೊದಲಲ್ಲ. ಕಳೆದ ವಾರ ಗೂಗಲ್ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅವರನ್ನು ಅಫ್ಘಾನಿಸ್ಥಾನ ಕ್ರಿಕೆಟಿಗ ರಶೀದ್ ಖಾನ್ ಅವರ ಪತ್ನಿ ಎಂದು ಹೆಸರಿಸಿತ್ತು. ಇದು ಸಾಕಷ್ಟು ವೈರಲ್‌ ಆಗಿತ್ತು. ಹಾಗಾದರೆ ಏನಿದಕ್ಕೆ ಕಾರಣ? ತಪ್ಪು ಉತ್ತರ ಯಾಕೆ ಬರುತ್ತಿದೆ? Googleನ ಉತ್ತರವನ್ನು ನಂಬಬೇಕೇ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಗೂಗಲ್ ಏಕೆ ತಪ್ಪುಗಳನ್ನು ಮಾಡುತ್ತಿದೆ?
ಮೊದಲನೆಯದಾಗಿ ಗೂಗಲ್ ಉತ್ತರಿಸಲು ತನ್ನದೇ ಆದ ವ್ಯವಸ್ಥೆಯನ್ನು ಹೊಂದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಪುಸ್ತಕವನ್ನು ಓದಿ ಪರೀಕ್ಷೆಗೆ ಉತ್ತರ ಬರೆಯುವಂತೆ ಗೂಗಲ್‌ ಎಲ್ಲವನ್ನೂ ತಿಳಿದು ನಮಗೆ ಉತ್ತರಿಸುವುದಿಲ್ಲ. ಹಾಗೆಂದು ಗೂಗಲ್ ಸ್ವತಃ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಅದು ತನ್ನ ನೆರವಿಗೆ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸುತ್ತದೆ. ಉತ್ತಮವಾಗಿ ಉತ್ತರಿಸುವ (ಅತೀ ಹೆಚ್ಚು ಜನ ವೀಕ್ಷಣೆ ಪಡೆದ) ವೆಬ್‌ಪುಟವನ್ನು ತನ್ನ ಮುಖಪುಟದಲ್ಲಿ ತೋರಿಸುತ್ತದೆ. ನೀವು Google ಅನ್ನು ಜ್ಞಾನಕ್ಕಾಗಿ ನೋಡುವುದಾದರೆ ಅದು ತಪ್ಪು. ಕೇವಲ ಮಾಹಿತಿಯನ್ನು ಮಾತ್ರ ನೀಡುತ್ತದೆ. ಉದಾಹರಣೆಗೆ ನಿಮಗೆ ಬಾಯಾರಿಕೆ ಆಗುವುದಾದರೆ ಗೂಗಲ್‌ ಬಾವಿಯನ್ನು ಮಾತ್ರ ತೋರಿಸಬಲ್ಲುದು. ಆದರೆ ಆ ಬಾವಿಯ ನೀರು ಕುಡಿಯಲು ಸಾಧ್ಯವೋ ಇಲ್ಲವೋ ಎಂಬುದು ಗೊತ್ತಿಲ್ಲ. ಅದು ಬಳಕೆದಾರನಿಗೆ ಬಿಟ್ಟ ವಿಚಾರ. ಅದೇ ಕ್ರಮವನ್ನು ಗೂಗಲ್‌ ಮಾಡುತ್ತಾ ಬಂದಿದೆ. ಅದು ಗೂಗಲ್‌ನ ತಪ್ಪು ಅಲ್ಲ. ಅದರ ಕರ್ತವ್ಯವೂ ಅಷ್ಟೇ.

Advertisement

ಮಾಹಿತಿಗಾಗಿ ನೀವು Google ಅನ್ನು ನಂಬಬಹುದೇ?
ಇಲ್ಲಿ ನಂಬಿಕೆಯ ವಿಚಾರ ಬರುವುದೇ ಇಲ್ಲ. ಯಾಕೆಂದರೆ ಗೂಗಲ್‌ ಯಾವುದೇ ಉತ್ತರ ನೀಡುವುದಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರಿಸಲು ಅವರು ಹೆಚ್ಚು ಸೂಕ್ತವಾದ ಪುಟಗಳನ್ನು ಆಯ್ಕೆಯ ಮೂಲಕ ನಿಮ್ಮ ಮುಂದಿಡುತ್ತದೆ. ಈಗ ನೀವು ಯಾವ ವೆಬ್‌ಪುಟಗಳನ್ನು ನೋಡಿದ್ದೀರಿ? ಅದನ್ನು ನಂಬಬಹುದೇ ಎಂಬುದು ನಿಮಗೆ ಬಿಟ್ಟವಿಚಾರ. ಉದಾಹರಣೆಗೆ ವಿಕಿಪೀಡಿಯಾ. ಇಲ್ಲಿ ನೀವು ವಿಷಯವನ್ನು ಸಂಪಾದಿಸಬಹುದು. ಆದರೆ ಅದು ಖಚಿತ ಎಂಬುದು ಖಾತ್ರಿ ಇಲ್ಲ. ಯಾಕೆಂದರೆ ವಿಕಿಪೀಡಿಯಾದಲ್ಲಿ ಯಾರೂ ಬರೆಯಬಹುದು. ಅ ವೆಬ್ಸೈಟ್‌ನ ವಿಶ್ವಾಸಾರ್ಹತೆ ಬಳಕೆದಾರನಿಗೆ ಬಿಟ್ಟಿದೆ.

ಮತ್ತೊಂದು ರೂಪದಲ್ಲಿ ಹೇಳುವುದಾದರೆ ಉದಾಹರಣೆಗೆ ಜೆಎನ್‌ಯುನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ಎಂಬುದನ್ನು ನೀವು ಗೂಗಲ್‌ ಮೂಲಕ ಹುಡುಕಲು ಬಯಸಿದರೆ ಅದು ಒಂದಷ್ಟು ಅಂಕಿ ಅಂಶವನ್ನು ನಿಮ್ಮ ಮುಂದಿಡುತ್ತದೆ. ಅದರ ಜತೆಗೆ ಜೆಎನ್‌ಯು ನ ಅಧಿಕೃತ ಜಾಲತಾಣವನ್ನೂ ನಿಮ್ಮ ಮುಂದೆ ಆಯ್ಕೆಯ ರೂಪದಲ್ಲಿ ಇಡುತ್ತದೆ. ಇಲ್ಲಿ ಮಾಹಿತಿ ಕೇಳುವ ನೀವು ಮೇಲ್ನೋಟದ್ದೇ ಅಂಕಿ ಅಂಶವನ್ನು ಪಡೆದುಕೊಂಡು ಅದು ತಪ್ಪಾಗಿದ್ದರೆ; ಗೂಗಲ್‌ ಅನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತಿಲ್ಲ. ಯಾಕೆಂದರೆ ನಿಮಗೆ ಅಲ್ಲಿ ಜೆಎನ್‌ಯು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಆಯ್ಕೆ ಇತ್ತು. ನೀವು ಖಚಿತ ಮಾಹಿತಿಯನ್ನು ಅಲ್ಲಿ ಕೇಳಿ ಪಡೆಯಬಹುದಾಗಿತ್ತು. ಅದು ಗೂಗಲ್‌ನ ತಪ್ಪಾಗುವುದಿಲ್ಲ. ಬಹುಶಃ ಎಲ್ಲರೂ ಇಲ್ಲೇ ಎಡವುತ್ತಿದ್ದಾರೆ.

ಹಾಗಾದರೆ ಶೇ. 100 ಫಲಿತಾಂಶ ನೀಡಲು ಏಕೆ ಸಾಧ್ಯವಿಲ್ಲ?
ಒಂದೇ ವಿಷಯವನ್ನು ಅನೇಕ ವಿಧಗಳಲ್ಲಿ ಹೇಳಬಹುದು. ಈ ಕಾರಣದಿಂದಾಗಿ ಗೂಗಲ್ ಅಥವಾ ಯಾವುದೇ ಸರ್ಚ್ ಎಂಜಿನ್ ಹೇಳಿದಂತೆ ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕಿಲ್ಲ. ಅಂತೆಯೇ ಸಮಾನಾರ್ಥಕ ಪದಗಳು ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಹೊಂದಿರುವ ಪದಗಳಾಗಿರುವ ಕಾರಣ spam ಸಹ ಹುಡುಕಾಟದ ಮೇಲೆ ಪರಿಣಾಮ ಬೀರುತ್ತದೆ. ಇದು ಈ ಹಿಂದೆ ಹುಡುಕಾಡಿದ ಟಾಪ್‌ ಉತ್ತರವನ್ನು ಅಥವ ಸರ್ಚ್‌ ಫಲಿತಾಂಶವನ್ನು ನೀಡುತ್ತದೆ.

ಉತ್ತರಿಸುವ ಮೊದಲು ಅದು ವಿಶ್ವಾಸಾರ್ಹವೆಂದು ಯಾಕೆ ಖಚಿತಪಡಿಸುವುದಿಲ್ಲ?
ಇಂತಹ ಪ್ರಶ್ನೆ ನಿಮಲ್ಲಿ ಎದುರಾದರೆ ತಪ್ಪು. ವೆಬ್‌ಸೈಟ್ ತಪ್ಪುದಾರಿಗೆಳೆಯುವ ಮಾಹಿತಿಯನ್ನು ನೀಡುತ್ತಿದೆ ಎಂದು ಕಂಡುಕೊಂಡಾಗ ಅದನ್ನು ನೋಡದೇ ಇರಬಹುದು. ಇದಕ್ಕಿಂತ ಹೆಚ್ಚೇನೂ ಮಾಡಲಾಗುವುದಿಲ್ಲ. ಕೃತಕ ಬುದ್ಧಿಮತ್ತೆಯಂತಹ ಸಾಧನಗಳಿಂದ ಸರ್ಚ್ ಎಂಜಿನ್ ಹೆಚ್ಚಿನ ಸಹಾಯವನ್ನು ಪಡೆಯುತ್ತದೆ. ಆದಾಗ್ಯೂ ಅವರು ಅದರ ಜನಪ್ರಿಯತೆಯ ಆಧಾರದ ಮೇಲೆ ವಿಷಯವನ್ನು ಶ್ರೇಣೀಕರಿಸುತ್ತಾರೆ. ಇದರರ್ಥ ಬಹಳ ಜನಪ್ರಿಯವಾಗುವ ನಕಲಿ ಸುದ್ದಿಯು ಗೂಗಲ್‌ನ ಹುಡುಕಾಟ ಫಲಿತಾಂಶಗಳಲ್ಲಿ ಅಗ್ರಸ್ಥಾನವನ್ನು ಪಡೆಯುತ್ತದೆ.

ಸಾರಾ ಮತ್ತು ಅನುಷ್ಕಾ ಅವರ ಹೆಸರುಗಳಿಗೆ ಏನಾಯಿತು?
ಇತ್ತೀಚೆಗೆ ಶುಬ‌ಮನ್ನ್‌ ಗಿಲ್ ಕಾರು ಖರೀದಿಸಿದಾಗ ಅವರು ಅದರ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸಾರಾ ತೆಂಡೂಲ್ಕರ್ ಅವರು ಕಮೆಂಟ್‌ ಮಾಡಿದ್ದರು. ಇದರ ನಂತರ ಶುಬ್ಮನ್ ಮತ್ತು ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಗೂಗಲ್ ಹುಡುಕಾಟದಲ್ಲಿ ಈ ಸುದ್ದಿ ಮೇಲ್ಭಾಗದಲ್ಲಿ ಗೋಚರಿಸುತ್ತಿದೆ. ಮಾತ್ರವಲ್ಲದೇ ಸಾರಾ ಅವರನ್ನು ಶುಬ್ಮನ್ ಅವರ ಪತ್ನಿ ಎಂದು ತೋರಿಸಲಾಗುತ್ತಿದೆ. ಅದೇ ರೀತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶೀದ್ ಖಾನ್ ಅವರು ಅನುಷ್ಕಾ ಶರ್ಮಾ, ಪ್ರೀತಿ ಜಿಂಟಾ ಅವರನ್ನು ತಮ್ಮ ನೆಚ್ಚಿನ ನಟಿ ಎಂದು ಬಣ್ಣಿಸಿದ್ದರು. ಈ ಸಂದರ್ಶನದಲ್ಲಿ ಅವರ ವಿವಾಹದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಇಲ್ಲಿ ಅನುಷ್ಕಾ ಶರ್ಮಾ ಅವರ ಹೆಸರು ಸಂದರ್ಶನದಲ್ಲಿ ಬಂದ ಕಾರಣ ಎರಡೂ ಸರ್ಚ್ ಎಂಜಿನ್ ಕಾರ್ಯನಿರ್ವಹಿಸುವ ವಿಧಾನದಿಂದಾಗಿ ತಪ್ಪು ಸಂಭವಿಸಿದೆ.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next