Advertisement
ದಿಕ್ಕೇ ತೋಚದಾಗಿ, ಅಲ್ಲೇ ಚಹಾ ಕುಡಿಯುತ್ತಾ ಕುಳಿತಿದ್ದೆ. ಯಾರೋ ಪುಣ್ಯಾತ್ಮ ಆಟೋ ಚಾಲಕ ಬಳಿ ಬಂದು, ವಿಚಾರಿಸಿದ. ಮೊದ ಮೊದಲಿಗೆ ನಾನು ಅವನೊಂದಿಗೆ ಮಾತಾಡಲು ಹಿಂಜರಿದೆನಾದರೂ, ನಂತರ ಯಾಕೋ ಒಳ್ಳೆಯವನು ಅಂತನ್ನಿಸಿಬಿಟ್ಟ. “9 ಗಂಟೆಯವರಿಗೆ ಎಲ್ಲಿರಬೇಕೋ, ತಿಳಿಯುತ್ತಿಲ್ಲ’ ಅಂದೆ. ಅವನು ಅಲ್ಲೇ ಇದ್ದ, ಅವನ ಸ್ನೇಹಿತನ ಅಂಗಡಿಯಲ್ಲಿ 9 ಗಂಟೆಯವರೆಗೆ ಉಳಿಯಲು ಅವಕಾಶ ಕಲ್ಪಿಸಿಕೊಟ್ಟ. ಕೊನೆಗೆ ಸೇರಬೇಕಾದ ಸ್ಥಳಕ್ಕೂ ಆಟೋದಲ್ಲಿ ನನ್ನನ್ನು ಮುಟ್ಟಿಸಿದ. “ಬೆಂಗಳೂರು ಜನ, ಹುಷಾರು’ ಅಂತ ಯಾರ್ಯಾರೋ ಹೇಳಿದ್ದನ್ನು ಕೇಳಿದ್ದೆ. ಆದರೆ, ಇವನು ಆ ಅಪವಾದವನ್ನು ದೂರ ಮಾಡಿಬಿಟ್ಟ. ಥ್ಯಾಂಕ್ಯೂ ಸರ್…
Advertisement
ಇಲ್ಲಿ ಯಾರು ನನ್ನೋರು..?
05:44 PM Jun 03, 2019 | mahesh |