ಹೊಸದಿಲ್ಲಿ/ಮುಂಬಯಿ: ಸಗಟು ಮಾರುಕಟ್ಟೆ ಆಧಾರಿತ ಹಣದುಬ್ಬರ ಪ್ರಮಾಣ ನವೆಂಬರ್‌ನಲ್ಲಿ ಶೇ.5.85ಕ್ಕೆ ಇಳಿಕೆಯಾಗಿದೆ. ಇದು 21 ತಿಂಗಳ ಕನಿಷ್ಠ ಮಟ್ಟದ್ದಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ದತ್ತಾಂಶಗಳಲ್ಲಿ ಉಲ್ಲೇಖಿಸಲಾಗಿದೆ.
ಆಹಾರ, ತೈಲೋತ್ಪನ್ನ ಮತ್ತು ಉತ್ಪಾದನ ಕ್ಷೇತ್ರಗಳಲ್ಲಿ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಅಕ್ಟೋಬರ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ.8.39 ಆಗಿತ್ತು.
ಅದಕ್ಕೆ ಪೂರಕವಾಗಿ ಲೋಕಸಭೆಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆಯಾಗಲಿದೆ. ಜನರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಈ ಕ್ರಮ ಕೈಗೊಳ್ಳಲಿದೆ. ಸದ್ಯದ ಮಿತಿ ಆರ್‌ಬಿಐ ಸೂಚಿಸಿದ್ದಂತೆಯೇ ಇದೆ ಎಂದರು.
ಯು.ಕೆ.ಯಲ್ಲಿ ಕುಸಿತ
ಮತ್ತೂಂದೆಡೆ, ಯು.ಕೆ.ಯಲ್ಲಿ ಕೂಡ ಹಣದುಬ್ಬರ ಪ್ರಮಾಣ ಕೊಂಚ ಇಳಿಕೆಯಾಗಿದೆ. ನವೆಂಬರ್‌ನಲ್ಲಿ ಶೇ.11.1 ಇದ್ದದ್ದು ಹಾಲಿ ತಿಂಗಳಲ್ಲಿ ಶೇ.10.7ಕ್ಕೆ ಇಳಿಕೆಯಾಗಿದೆ. ಆದರೂ 40 ವರ್ಷದ ಗರಿಷ್ಠ ಮಿತಿಯಲ್ಲೇ ಇದೆ ಎನ್ನುವುದು ಗಮನಾರ್ಹ.