Advertisement

Inflation: ಸಗಟು ಹಣದುಬ್ಬರ 6ನೇ ತಿಂಗಳೂ ಇಳಿಕೆ

09:28 PM Oct 16, 2023 | Team Udayavani |

ನವದೆಹಲಿ: ದೇಶದಲ್ಲಿ ಸಗಟು ಹಣದುಬ್ಬರ ಸತತ 6ನೇ ತಿಂಗಳೂ ಇಳಿಕೆಗೊಂಡಿದ್ದು, ಆಹಾರ ವಸ್ತುಗಳ ಬೆಲೆ ಕಡಿಮೆಯಾದ ಪರಿಣಾಮ ಸೆಪ್ಟೆಂಬರ್‌ನಲ್ಲಿ ಶೇ.(-)0.26ಕ್ಕೆ ಇಳಿಕೆಯಾಗಿದೆ. ಸಗಟು ದರ ಸೂಚ್ಯಂಕ ಆಧರಿತ ಹಣದುಬ್ಬರವು ಏಪ್ರಿಲ್‌ನಿಂದಲೂ ಶೂನ್ಯಕ್ಕಿಂತ ಕಡಿಮೆಯೇ ದಾಖಲಾಗುತ್ತಿದೆ.

Advertisement

ಆಗಸ್ಟ್‌ನಲ್ಲಿ ಈ ಪ್ರಮಾಣ (-)0.52ರಷ್ಟಿತ್ತು. ಇದೀಗ (-)0.26ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇ.10.55ರೊಂದಿಗೆ ಗರಿಷ್ಠ ಮಟ್ಟದಲ್ಲಿತ್ತು. ಇನ್ನು ಆಹಾರ ಹಣದುಬ್ಬರವೂ ಸೆಪ್ಟೆಂಬರ್‌ನಲ್ಲಿ ಶೇ.3.35ಕ್ಕೆ ಇಳಿಕೆಯಾಗಿದೆ. ತರಕಾರಿಗಳ ಹಣದುಬ್ಬರವು ಶೇ(-)15ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next