ಬೆಂಗಳೂರು: 2013ರಿಂದಲೂ ಆರ್‌ಸಿಬಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಕಳೆದ ಐಪಿಎಲ್ ವೇಳೆ ಈ ಹುದ್ದೆಯಿಂದ ಕೆಳಗಿಳಿದಿದ್ದರು. 2022ರಲ್ಲಿ ಆರ್ ಸಿಬಿಯನ್ನು ಮುನ್ನಡೆಸುವವರು ಯಾರು ಎಂಬುದು ಅಭಿಮಾನಿಗಳ ಕುತೂಹಲ.
ಕಳೆದ ಬಾರಿ ಚೆನ್ನೈ ತಂಡದಲ್ಲಿದ್ದ ಫಾ ಡು ಪ್ಲೆಸಿಸ್ ಈ ಬಾರಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಆದ್ದರಿಂದ ಅವರಿಗೇ ಈ ಅವಕಾಶ ಸಿಗುವ ಸಾಧ್ಯತೆ ಜಾಸ್ತಿ. ಫಾ ಡು ಪ್ಲೆಸಿಸ್‌ಗೆ ಈ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎಂಬ ಸುದ್ದಿ ಹರಿದಾಡುತ್ತಿದೆ. ಡು ಪ್ಲೆಸಿಸ್ ಅವರನ್ನು ಚೆನ್ನೈ ಉಳಿಸಿಕೊಳ್ಳದಿದ್ದುದು ಅಚ್ಚರಿಯಾಗಿ ಕಂಡಿತ್ತು. 2021ರ ಚೆನ್ನೈ ವಿಜಯದಲ್ಲಿ ಈ ದ.ಆಫ್ರಿಕಾ ಕ್ರಿಕೆಟಿಗನ ಕೊಡುಗೆ ದೊಡ್ಡಮಟ್ಟದ್ದಾಗಿತ್ತು. 16 ಪಂದ್ಯಗಳಿಂದ 633 ರನ್ ಪೇರಿಸಿದ್ದರು.
ಇದನ್ನೂ ಓದಿ:ಸಾವನ್ನೂ ಗೆದ್ದು ಪದಕ ಗೆದ್ದ ವೀರ!; ಈತನ ಕಥೆಯೇ ರೋಚಕ
ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಡು ಪ್ಲೆಸಿಸ್‌ಗೆ ವಿಶೇಷ ಸ್ಥಾನ. ಭರ್ತಿ 100 ಪಂದ್ಯಗಳಿಂದ 2,935 ರನ್ ಪೇರಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿರುವುದರಿಂದ ಡು ಪ್ಲೆಸಿಸ್ ಆರ್‌ಸಿಬಿ ನಾಯಕನಾದರೆ ಅಚ್ಚರಿ ಇಲ್ಲ.
ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ನಾಯಕನ ರೇಸ್ ನಲ್ಲಿದ್ದಾರೆ. ಅಲ್ಲದೆ ಸದ್ಯ ಯಾವುದೇ ಒತ್ತಡವಿಲ್ಲದ ಕಾರಣ ವಿರಾಟ್ ಕೊಹ್ಲಯೂ ಮತ್ತೆ ನಾಯಕನ ಜವಾಬ್ದಾರಿ ಹೊರಬಹುದು.