Advertisement

ಉಪರಾಷ್ಟ್ರಪತಿ ಅಭ್ಯರ್ಥಿಗೆ ಬಿಜೆಪಿಯ 3 ಮಾನದಂಡ

04:00 AM Jul 14, 2017 | Karthik A |

ಹೊಸದಿಲ್ಲಿ: ವಿಪಕ್ಷಗಳೆಲ್ಲ ಸೇರಿ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಗೋಪಾಲಕೃಷ್ಣ ಗಾಂಧಿ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲೂ ಅಭ್ಯರ್ಥಿಯ ಹುಡುಕಾಟ ಶುರುವಾಗಿದೆ. ವಿಶೇಷವೆಂದರೆ, ಬಿಜೆಪಿ ಹಾಗೂ ಅದರ ಸಲಹೆಗಾರರು ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ 3 ಮಾನದಂಡಗಳನ್ನು ಹಾಕಿಕೊಂಡಿದ್ದಾರೆ. ಅವೆಂದರೆ, ಬಿಜೆಪಿಯ ಮೂಲ ಸಿದ್ಧಾಂತಗಳನ್ನು ಪ್ರತಿಪಾದಿಸುವ ವ್ಯಕ್ತಿಯಾಗಿರಬೇಕು, ರಾಜ್ಯಸಭೆಯ ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡುವವರಾಗಬೇಕು ಹಾಗೂ ದಲಿತ ನಾಯಕರಾದ ರಾಮನಾಥ್‌ ಕೋವಿಂದ್‌ರಂತೆ ಬಿಜೆಪಿಯನ್ನು ಬೆಂಬಲಿಸುವ ಸಮುದಾಯವೊಂದನ್ನು ಪ್ರತಿನಿಧಿಸುವವರಾಗಿರಬೇಕು. 

Advertisement

ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಕುರಿತು ಸಮಾಲೋಚನೆ ಆರಂಭಿಸಿದ್ದಾರೆ. ಶಾ ಅವರು ಆರೆಸ್ಸೆಸ್‌ ನಾಯಕರಾದ ಡಾ| ಕೃಷ್ಣ ಗೋಪಾಲ ಶರ್ಮಾ ಹಾಗೂ ಸುರೇಶ್‌ ಭಯ್ನಾಜಿ ಜೋಷಿ ಅವರ ಜತೆ ಚರ್ಚಿಸಿದ್ದಾರೆ. ಒಂದೆರಡು ದಿನಗಳಲ್ಲೇ ಮೋದಿ, ಶಾ ತಮ್ಮ ಆದ್ಯತೆಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next