Advertisement
ಐಸಿಸಿ ಬೋರ್ಡ್ನಲ್ಲಿರುವ 16 ಸದಸ್ಯರಲ್ಲಿ 15 ಸದಸ್ಯರ ಬೆಂಬಲವನ್ನು ಶಾ ಹೊಂದಿರಬೇಕು. ಬಿಸಿಸಿಐ ಕಾರ್ಯದರ್ಶಿಯಾಗಿ ಅವರ ಸತತ ಎರಡನೇ ಅವಧಿಗೆ ಇನ್ನೂ ಒಂದು ವರ್ಷ ಉಳಿದಿದೆ.
Related Articles
Advertisement
ರಾಜೀವ್ ಶುಕ್ಲಾ: ಬಿಸಿಸಿಐ ಹುದ್ದೆಗಳನ್ನು ಮರುಜೋಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿರುವ ಹಾಲಿ ಉಪಾಧ್ಯಕ್ಷ ಶುಕ್ಲಾ ಅವರನ್ನು ಒಂದು ವರ್ಷದವರೆಗೆ ಕಾರ್ಯದರ್ಶಿ ಕೆಲಸ ಮಾಡಲು ಕೇಳುವ ಸಾಧ್ಯತೆಯಿದೆ. ಬಿಸಿಸಿಐ ಉಪಾಧ್ಯಕ್ಷರು ರಬ್ಬರ್ ಸ್ಟಾಂಪ್ ನಂತೆ ಇರುವುದರಿಂದ ಶುಕ್ಲಾ ಕಾರ್ಯದರ್ಶಿಯಾಗಲು ಖಂಡಿತವಾಗಿಯೂ ಮನಸ್ಸು ಮಾಡಬಹುದು.
ಆಶಿಶ್ ಶೇಲಾರ್: ಮಹಾರಾಷ್ಟ್ರ ಬಿಜೆಪಿ ಹೆವಿವೇಟ್ ಆಶಿಶ್ ಶೇಲಾರ್ ಅವರು ರೇಸ್ ನಲ್ಲಿದ್ದಾರೆ. ಅವರು ಬಿಸಿಸಿಐ ಖಜಾಂಚಿ ಮತ್ತು ಎಂಸಿಎ ಆಡಳಿತದಲ್ಲಿ ದೊಡ್ಡ ಹೆಸರು. ಆದರೆ ಬಿಸಿಸಿಐ ಕಾರ್ಯದರ್ಶಿ ಹುದ್ದೆಯು ಸಮಯ ತೆಗೆದುಕೊಳ್ಳುವ ಕೆಲಸವಾದ ಕಾರಣ ಒಬ್ಬ ಪೂರ್ಣ ಪ್ರಮಾಣದ ರಾಜಕಾರಣಿಯಾಗಿರುವ ಶೆಲಾರ್ ಅವರು ಹುದ್ದೆ ಒಪ್ಪಿಕೊಳ್ಳುವುದು ಕಷ್ಟ ಎನ್ನಲಾಗಿದೆ.
ಅರುಣ್ ಧುಮಾಲ್: ಐಪಿಎಲ್ ಅಧ್ಯಕ್ಷರಾಗಿರುವ ಅರುಣ್ ಧುಮಾಲ್ ಮಂಡಳಿಯನ್ನು ನಡೆಸಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ. ಅವರು ಈ ಹಿಂದೆ ಬಿಸಿಸಿಐ ಕೋಶಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಜಂಟಿ ಕಾರ್ಯದರ್ಶಿ ದೇವಜಿತ್ ಲೋನ್ ಸೈಕಿಯಾ ಅವರ ಹೆಸರು ಕೂಡಾ ಈ ರೇಸ್ ನಲ್ಲಿದೆ.