Advertisement

ಪ್ರಧಾನಿ ತೊಡೆ ಮೇಲಿದ್ದ‌ ಮಗು ಯಾರದ್ದು?

01:17 AM Jul 24, 2019 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಇನ್‌ಸ್ಟಾಗ್ರಾಂ, ಟ್ವಿಟರ್‌ ಖಾತೆಗಳಲ್ಲಿ ತಾವು ಮಗುವೊಂದನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಡಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದು, ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Advertisement

ಎರಡು ಫೋಟೋಗಳು ಪೋಸ್ಟ್‌ ಆಗಿದ್ದು, ಒಂದರಲ್ಲಿ ಹಾಲುಗಲ್ಲದ ಪುಟಾಣಿಯು ಮೋದಿಯವರ ತೊಡೆ ಮೇಲೆ ಆಟಿಕೆ ಹಿಡಿದು ಆಡುತ್ತಿದ್ದರೆ, ಮತ್ತೂಂದರಲ್ಲಿ, ಪ್ರಧಾನಿ ಎದುರಿ ರುವ ಮೇಜಿನ ಮೇಲಿಟ್ಟಿದ್ದ ಚಾಕೋಲೆಟ್‌ಗಳನ್ನು ಬಾಚಲು ಯತ್ನಿಸಿತ್ತು.

ಫೋಟೋಗಳು ಪೋಸ್ಟ್‌ ಆದ ಬೆನ್ನಿಗೇ ಲಕ್ಷಾಂತರ ಲೈಕ್‌ಗಳು, ಕಮೆಂಟ್‌ಗಳನ್ನು ಪಡೆದ ಈ ಚಿತ್ರಗಳನ್ನು ಕಂಡ ನೆಟ್ಟಿಗರಲ್ಲಿ ಮೂಡಿದ ಒಂದೇ ಒಂದು ಪ್ರಶ್ನೆ… “ಈ ಮಗು ಯಾರದ್ದು?’ ಎಂದು! ಕೆಲವರು, ಕ್ರಿಕೆಟಿಗ ರೋಹಿತ್‌ ಶರ್ಮಾರ ಮಗಳೆಂದರೆ, ಇನ್ನೂ ಕೆಲವರು ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮೊಮ್ಮಗು ಎಂದರು.

ಆದರೆ, ಸಂಜೆ ಹೊತ್ತಿಗೆ ಆ ಮಗು, ಬಿಜೆಪಿ ಹಿರಿಯ ನಾಯಕ ಡಾ| ಸತ್ಯನಾರಾಯಣ ಜಟಿಯಾ ಅವರ ಮೊಮ್ಮಗಳು ಎಂದು ತಿಳಿಯು ವಲ್ಲಿ ನೆಟ್ಟಿಗರು ನಿಟ್ಟುಸಿರು ಬಿಟ್ಟರು!

Advertisement

Udayavani is now on Telegram. Click here to join our channel and stay updated with the latest news.

Next