ವಾಷಿಂಗ್ಟನ್: ಭಾರತೀಯ ಖ್ಯಾತ ನೃತ್ಯ ಪಟು ಅಮರನಾಥ್ ಘೋಷ್ ಅವರನ್ನು ಅಮೆರಿಕದಲ್ಲಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಘೋಷ್ ಸ್ನೇಹಿತೆ, ಟಿವಿ ನಟಿ ದೇವೋಲೀನಾ ಭಟ್ಟಾಚಾರ್ಜಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Bihar: ಟಿಕೆಟ್ ನೀಡಿದರೆ ಪಕ್ಷಕ್ಕೆ ಸೇರುವೆ… BJP ಸೇರುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕಿ
ಘೋಷ್ ಮಂಗಳವಾರ ಮಿಸೌರಿಯ ಸೈಂಟ್ ಲೂಯಿಸ್ ಸಿಟಿಯಲ್ಲಿ ಸಂಜೆ ತಿರುಗಾಡುತ್ತಿದ್ದ ಸಮಯದಲ್ಲಿ ಹಲವು ಬಾರಿ ಗುಂಡು ಹಾರಿಸಿ ಕೊಲೆಗೈಯಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನೆರವು ಬೇಕಾಗಿದೆ ಎಂದು ಭಟ್ಟಾಚಾರ್ಜಿ ಮನವಿ ಮಾಡಿಕೊಂಡಿದ್ದಾರೆ.
“ ನನ್ನ ಗೆಳೆಯ ಅಮರನಾಥ್ ಘೋಷ್ ನನ್ನು ಸೈಂಟ್ ಲೂಯಿಸ್ ಅಕಾಡೆಮಿ ಸಮೀಪ ಗುಂಡಿಟ್ಟು ಹತ್ಯೆಗೈಯಲಾಗಿದೆ. ಮೂರು ವರ್ಷಗಳ ಹಿಂದೆ ಘೋಷ್ ತಾಯಿ ನಿಧನರಾಗಿದ್ದರು. ಘೋಷ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ದಂಪತಿಗೆ ಒಬ್ಬನೇ ಮಗ. ಈವರೆಗೂ ನಮಗೆ ಹಂತಕನ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಘೋಷ್ ಕೆಲವು ಗೆಳೆಯರನ್ನು ಹೊರತುಪಡಿಸಿ ಕುಟುಂಬದ ಯಾವ ವ್ಯಕ್ತಿಯೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಸಾಧ್ಯವಿಲ್ಲ” ಎಂದು ಭಟ್ಟಾಚಾರ್ಜಿ ಎಕ್ಸ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಘೋಷ್ ಶವವನ್ನು ಒಪ್ಪಿಸುವಂತೆ ಅಮೆರಿಕದಲ್ಲಿರುವ ಕೆಲವು ಗೆಳೆಯರು ಮನವಿ ಮಾಡಿದ್ದು, ಈ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದು ವೇಳೆ ಸಾಧ್ಯವಾದರೆ ಭಾರತೀಯ ರಾಯಭಾರಿ ಕಚೇರಿ ಮಧ್ಯಪ್ರವೇಶಿಸಿ ನೆರವು ನೀಡಬೇಕು ಎಂದು ಭಟ್ಟಾಚಾರ್ಜಿ ತಿಳಿಸಿದ್ದಾರೆ.