Advertisement

ಮಾನವೀಯ ಬದುಕನ್ನು ಬೋಧಿಸಿದವರು ಗುರುಗಳು: ಯೋಗೇಶ

04:16 PM Sep 22, 2019 | Suhan S |

ಮುಂಬಯಿ, ಸೆ. 21: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಕಾಂದಿವಲಿ ಸ್ಥಳೀಯ ಕಚೇರಿಯ ವತಿಯಿಂದ 165 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯು ಸೆ. 15ರಂದು ಕಾಂದಿವಲಿ ಸ್ಥಳೀಯ ಕಚೇರಿ ಸಂತ ಜ್ಞಾನೇಶ್ವರ ಎಸ್‌. ಎರ್‌. ಎ. ಕೋ ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ ನೆಲ ಮಾಳಿಗೆಯ ರೂಮ್‌ ನಂಬರ್‌ 1, ಎಂ. ಜಿ. ಕ್ರಾಸ್‌ರೋಡ್‌ ಕಾಂದಿವಲಿ ಪಶ್ಚಿಮದ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಕಾಂದಿವಲಿ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12.30ರಿಂದ ಗುರುಪೂಜೆ, ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಜರಗಿದ ಬಳಿಕ ಮಹಾಮಂಗಳಾರತಿ ನೆರವೇರಿತು. ಅನಂತರ ನೆರೆದ ಸರ್ವ ಸಮಾಜ ಬಾಂಧವರಿಗೆ ಪ್ರಸಾದ ವಿತರಿಸಲಾಯಿತು.

ಪೂಜಾ ಕೈಂಕರ್ಯವನ್ನು ನೆರವೇ ರಿಸಿದ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಯೋಗೇಶ್‌ ಕೆ. ಹೆಜ್ಮಾಡಿ ಅವರು ಮಾತನಾಡಿ, ಇಂದುವಿಶ್ವದಾದ್ಯಂತ ಬದುಕನ್ನು ಬೋಧಿಸಿದ ಮಹನೀಯ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನದಲ್ಲಿ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಇತರರಿಗೂ ಬೋಧಿಸುವ ಆಜಾತಶತ್ರುವಾಗಿ ತನ್ನ ಕೊನೆಯ ಜೀವನವನ್ನು ಕಳೆದರು. ಬಡವರಿಗೆ, ದೀನದಲಿತರಿಗೆ ನಾಗರಿಕ ಬದುಕಿನ ಅರ್ಥವನ್ನು ಕಲ್ಪಿಸಿದ ಶ್ರೀ ನಾರಾಯಣ ಗುರುಗಳು ದೈವತ್ವ ಜೀವನದ ದಾರ್ಶನಿಕರು. ಧರ್ಮಕ್ಕೆ ಮತಾಂತರ ಪರಿಹಾರವಲ್ಲ. ಮನುಷ್ಯನಾಗಿ ಬಾಳುವುದೇ ನಿಜವಾದ ಜೀವನ ಎಂಬ ಅರ್ಥವನ್ನು ವಿಶ್ವಕ್ಕೆ ಬೋಧಿಸಿದ ಮಹಾನೀಯರು.

ಅಸ್ಪೃಶ್ಯತೆ ವಿರುದ್ಧ ಹೋರಾಡಿ ವಿದ್ಯೆ ಮತ್ತು ಸಂಘಟನೆಯೇ ಎಲ್ಲದಕ್ಕೂ ಸೂಕ್ತ ಪರಿಹಾರ ಎಂದು ಕಂಡುಕೊಳ್ಳುವ ಮೂಲಕ ತನ್ನ ತತ್ವವನ್ನು ವಿಶ್ವದೆಲ್ಲೆಡೆ ಬೆಳಕು ಚೆಲ್ಲುವಂತೆ ಮಾಡಿದವರು. ಶ್ರೀ ಗುರುಗಳಂತಹ ಮಹಾನ್‌ ಪುರುಷರನ್ನು ಸಮಾಜ ಬಾಂಧವರ ಸಮ್ಮುಖದಲ್ಲಿ ಪೂಜೆ ಪುನಸ್ಕಾರಗಳ ಮೂಲಕ ಪೂಜಿಸುವ ಅವಕಾಶ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಫಲವಾಗಿದೆ ಎಂದು ನುಡಿದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಚೇರಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ನಾಗೇಶ್‌ ಕೋಟ್ಯಾನ್‌, ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್‌, ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಗಂಗಾಧರ ಜೆ. ಪೂಜಾರಿ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಕೇಂದ್ರ ಕಚೇರಿಯ ಪದಾಧಿಕಾರಿಗಳು, ಸಾಮಾಜಿಕ, ಧಾರ್ಮಿಕ ಉಪಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement

ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ ಎಂ. ಪೂಜಾರಿ, ಉಪ ಕಾರ್ಯಾಧ್ಯಕ್ಷ ಎನ್‌.ಜಿ. ಪೂಜಾರಿ, ಜಗನ್ನಾಥ್‌ ಡಿ. ಕುಕ್ಯಾನ್‌, ಗೌರವ ಕಾರ್ಯದರ್ಶಿ ಉಮೇಶ್‌ ಎನ್‌. ಸುರತ್ಕಲ್‌, ಗೌರವ ಕೋಶಾಧಿಕಾರಿ ರಮೇಶ್‌ ಪಿ. ಬಂಗೇರ, ಕೇಂದ್ರ ಕಚೇರಿಯ ಪ್ರತಿನಿಧಿ ಹರೀಶ್‌ ಜಿ. ಪೂಜಾರಿ ಮತ್ತು ಕಾರ್ಯಕಾರಿ ಸಮಿತಿಯ  ಸರ್ವ ಸದಸ್ಯರು, ಮಹಿಳಾ ಹಾಗೂ ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸ್ಥಳೀಯ ಸಮಾಜ ಬಾಂಧ ವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next