Advertisement

ನಿರ್ಗಮನ ಪಂದ್ಯದಲ್ಲಿ ನಗುವವರು ಯಾರು?

02:29 AM May 08, 2019 | Team Udayavani |

ವಿಶಾಖಪಟ್ಟಣ: ಒಂದೆಡೆ ಸರ್ವಾಧಿಕ 18 ಅಂಕ ಸಂಪಾದಿಸಿಯೂ ಎಲಿಮಿನೇಟರ್‌ ಪಂದ್ಯವನ್ನು ಆಡುವ ಸಂಕಟಕ್ಕೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್‌, ಇನ್ನೊಂದೆಡೆ “ರನ್‌ರೇಟ್‌ ಲಕ್‌’ ಮೂಲಕ ಪ್ಲೇ ಆಫ್ ಪ್ರವೇಶಿಸಿದ ಸನ್‌ರೈಸರ್ ಹೈದರಾಬಾದ್‌. ಈ ತಂಡಗಳು ಬುಧವಾರ ರಾತ್ರಿ ವಿಶಾಖಪಟ್ಟಣದಲ್ಲಿ ಐಪಿಎಲ್‌ ಬಿಸಿ ಏರಿಸಲಿವೆ. ಈ “ನಿರ್ಗಮನ ಪಂದ್ಯ’ದಲ್ಲಿ ಸೋತವರು ಸೀದಾ ಮನೆಗೆ ಮರಳಬೇಕಾದ್ದರಿಂದ ಎರಡೂ ತಂಡಗಳು ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡುವುದು ಅನಿವಾರ್ಯ.

Advertisement

ಹೈದರಾಬಾದ್‌ ತಂತಿ ಮೇಲಿನ ನಡಿಗೆ
ಕಳೆದ ಸಲದ ರನ್ನರ್‌ ಅಪ್‌ ಸನ್‌ರೈಸರ್ ಹೈದರಾಬಾದ್‌ನದ್ದು ತಂತಿ ಮೇಲಿನ ನಡಿಗೆ. ಅತ್ಯಂತ ಕಡಿಮೆ ಅಂಕಗಳೊಂದಿಗೆ (12) ಪ್ಲೇ ಆಫ್ ಪ್ರವೇಶಿಸಿದ ಹೈದರಾಬಾದ್‌, ಡೇವಿಡ್‌ ವಾರ್ನರ್‌-ಜಾನಿ ಬೇರ್‌ಸ್ಟೊ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾಗ ಉತ್ತಮ ಲಯದಲ್ಲಿತ್ತು. ತಂಡದ ರನ್‌ ಗಳಿಕೆಯಲ್ಲಿ ಇವರಿಬ್ಬರದೇ ಸಿಂಹಪಾಲಾಗಿತ್ತು. ವಾರ್ನರ್‌ ವಿಶ್ವಕಪ್‌ ತಯಾರಿಗಾಗಿ ತವರಿಗೆ ಮರಳಿದರೂ ಈಗಲೂ ಸರ್ವಾಧಿಕ ರನ್‌ ಹೆಗ್ಗಳಿಕೆಯೊಂದಿಗೆ “ಆರೇಂಜ್‌ ಕ್ಯಾಪ್‌’ ಧರಿಸಿರುವುದೇ ಇದಕ್ಕೆ ಸಾಕ್ಷಿ.

ಆದರೆ ತಂಡವೀಗ ಮಾರ್ಟಿನ್‌ ಗಪ್ಟಿಲ್‌-ವೃದ್ಧಿಮಾನ್‌ ಸಾಹಾ ಅವರ ಆರಂಭವನ್ನು ನೆಚ್ಚಿ ಕೊಳ್ಳಬೇಕಿದೆ. ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಮನೀಷ್‌ ಪಾಂಡೆ ಮೇಲೆ ಹೆಚ್ಚಿನ ಬ್ಯಾಟಿಂಗ್‌ ಹೊಣೆಗಾರಿಕೆ ಇದೆ. ವಿಶ್ವಕಪ್‌ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ವಿಜಯ್‌ ಶಂಕರ್‌ಗೆ ಇದೊಂದು ಉತ್ತಮ ಅವಕಾಶ.

ಹೈದರಾಬಾದ್‌ ಬೌಲಿಂಗ್‌ ಹೆಚ್ಚು ವೈವಿಧ್ಯಮಯ. ಭುವನೇಶ್ವರ್‌, ಖಲೀಲ್‌, ರಶೀದ್‌, ನಬಿ ಇಲ್ಲಿನ ಪ್ರಮುಖ ಅಸ್ತ್ರಗಳು. ಯೂಸುಫ್ ಪಠಾಣ್‌ ನಿರ್ಣಾ ಯಕ ಪಂದ್ಯದಲ್ಲಾದರೂ ಮಿಂಚುವರೇ ಎಂಬುದೊಂದು ನಿರೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next