Advertisement
ಒಮ್ಮೆ ಗುಣಮುಖರಾದವರಿಗೆ ಸೋಂಕು ಬರುವುದಿಲ್ಲ. ಹೀಗಾಗಿ ಅಂಥವರಿಗೆ ಮತ್ತೂಮ್ಮೆ ಸೋಂಕು ಬರಲಾರದು ಎಂಬ ಪ್ರಮಾಣ ಪತ್ರ (ಇಮ್ಯೂನಿಟಿ ಪಾಸ್‌ಪೋರ್ಟ್) ಅಥವಾ ರಿಸ್ಕ್-ಫ್ರೀ ಪ್ರಮಾಣ ಪತ್ರಗಳನ್ನು ನೀಡುವ ಪರಿ ಕಲ್ಪನೆಗೆ ಡಬ್ಲ್ಯೂ ಎಚ್‌ಒ ವಿರೋಧಿಸಿದೆ. ಇಂಥ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಸೋಂಕು ಮುಕ್ತರಾದವರಿಗೆ ತಮ್ಮ ಕೆಲಸಗಳಿಗೆ ಮರಳಲು ಅನುಮತಿ ನೀಡಬೇಕೆಂಬ ಸಲಹೆಗಳು ಕೇಳಿಬಂದಿದ್ದರಿಂದ ಡಬ್ಲ್ಯೂಎಚ್‌ಒ ಈ ಎಚ್ಚರಿಕೆ ನೀಡಿದೆ.
Related Articles
Advertisement
ದೇಶಾದ್ಯಂತ ನಿಗಾದಲ್ಲಿ 9.5 ಲಕ್ಷ ಮಂದಿಕೋವಿಡ್-19 ವಿರುದ್ಧ ದೇಶವು ಸಮರ್ಥವಾಗಿ ಹೋರಾಟ ನಡೆಸುತ್ತಿದೆ. ಇದರ ಹೊರತಾಗಿಯೂ ಬೇರೆ ಬೇರೆ ಕಾರಣಗಳಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶಾದ್ಯಂತ ಪ್ರಸ್ತುತ ಸುಮಾರು 9.5 ಲಕ್ಷ ಮಂದಿ ನಿಗಾದಲ್ಲಿದ್ದಾರೆ. ಜನವರಿಯಲ್ಲಿ ಅಂದರೆ ಕೊರೊನಾ ವೈರಸ್ ಭಾರತಕ್ಕೆ ಪ್ರವೇಶ ಪಡೆದ ಆರಂಭದಲ್ಲಿ ಕೇವಲ 13 ಮಂದಿ ಮಾತ್ರ ನಿಗಾವಣೆ ಯಲ್ಲಿದ್ದರು. ಆ ಸಂಖ್ಯೆ ಈಗ ಹಲವು ಪಟ್ಟು ಹೆಚ್ಚಾಗಿದೆ. ಕೋವಿಡ್-19 ಸೋಂಕಿತರ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿ ರುವಂಥ ಅಥವಾ ವಿದೇಶಗಳಿಗೆ ಪ್ರಯಾಣ ಬೆಳೆಸಿ ವಾಪಸಾಗಿರುವಂಥ ವ್ಯಕ್ತಿಗಳು ನಿಗಾದಲ್ಲಿರುತ್ತಾರೆ. ಇಲ್ಲಿ ನಿಗಾ ಎಂದರೆ, ಶಂಕಿತರನ್ನು ಕ್ವಾರಂಟೈನ್ ನಲ್ಲಿಡುವುದು ಅಥವಾ ಸಾಮುದಾಯಿಕ ನಿಗಾ ದಲ್ಲಿಡುವುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಜ.23ರ ವೇಳೆಗೆ 13 ಮಂದಿ ನಿಗಾದಲ್ಲಿದ್ದರು. ಜ.30ರ ವೇಳೆಗೆ ಈ ಸಂಖ್ಯೆ 1,088 ಆಯಿತು. ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾಗುವ ಸ್ವಲ್ಪ ಮುನ್ನ ಅಂದರೆ ಮಾ.19ರಂದು ದೇಶಾದ್ಯಂತ ನಿಗಾದಲ್ಲಿದ್ದವರ ಸಂಖ್ಯೆ 90,459ಕ್ಕೇರಿತ್ತು. ಲೆಕ್ಕಾಚಾರ ಹೇಗೆ?
ಒಟ್ಟಾರೆ ಸೋಂಕಿತರ ಸಂಖ್ಯೆಯಿಂದ ಹೊಸ ಪ್ರಕರಣಗಳ ಸಂಖ್ಯೆಯನ್ನು ಭಾಗಿಸುವ ಮೂಲಕ ಪ್ರಕರಣಗಳ ಏರಿಕೆಯ ದರವನ್ನು ಲೆಕ್ಕ ಹಾಕಲಾಗುತ್ತದೆ. ಹಾಗೆಯೇ ಒಟ್ಟಾರೆ ಸೋಂಕಿತರ ಸಂಖ್ಯ ಯಿಂದ ಗುಣಮುಖರಾದವರ ಸಂಖ್ಯೆಯನ್ನು ಭಾಗಿಸುವ ಮೂಲಕ ಗುಣ ಮುಖರಾದವರ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅದೇ ರೀತಿ, ಸೋಂಕಿತರ ಸಂಖ್ಯೆಯು ಎರಡು ಪಟ್ಟು ಆಗಲು ತಗಲುವ ಅವಧಿ ಎಷ್ಟೆಂದು ನೋಡುವ ಮೂಲಕ ದ್ವಿಗುಣಗೊಳ್ಳುವ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ.