Advertisement

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪಿಆರ್ ಏಜೆನ್ಸಿ: ಡೊನಾಲ್ಡ್ ಟ್ರಂಪ್ ಆರೋಪ

08:24 AM May 02, 2020 | Mithun PG |

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪಿಆರ್ಏಜೆನ್ಸಿ (ಸಾರ್ವಜನಿಕ ಸಂಪರ್ಕ ಸಂಸ್ಥೆ) ಮಾದರಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಿಡಿಕಾರಿದ್ದಾರೆ.

Advertisement

ಈಗಾಗಲೇ ಅಮೆರಿಕಾ  ಕೋವಿಡ್ -19 ವೈರಸ್ ನಲ್ಲಿ WHO ಪಾತ್ರದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಪ್ರತಿವರ್ಷ ಸುಮಾರು 500 ಮಿಲಿಯನ್ ಡಾಲರ್ ಗಳನ್ನು Who ಗೆ ಪಾವತಿಸಲಾಗುತ್ತಿತ್ತು, ಈ ಬಾರಿ ಆರ್ಥಿಕ ಸಹಾಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೇ ಚೀನಾ ಕೇವಲ ವರ್ಷಕ್ಕೆ 38 ಮಿಲಿಯನ್ ಡಾಲರ್ ಪಾವತಿಸುತಿತ್ತು. ಇದು ಇನ್ನೂ ಹೆಚ್ಚಿನದಾಗಿದ್ದರೂ, ಅದು ಅಪ್ರಸ್ತುತವಾಗುತ್ತದೆ. ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಸಾಯಲು ಕಾರಣವಾಗುವ ತಪ್ಪುಗಳನ್ನು ಎಂದೂ ಕ್ಷಮಿಸಲಾಗದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಏತನ್ಮಧ್ಯೆ, ಈ ವರ್ಷದ ಕೊನೆಯಲ್ಲಿ ಅಮೆರಿಕಾದ  ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು  ಚೀನಾಕ್ಕೆ ತಾನು ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ನೋಡಲಾಗದೆ ಇಂತಹ ಕೃತ್ಯ ಎಸಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಉತ್ತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next