Advertisement

ಯಾರಿಗೆ ಬಹುಮಾನ?

10:01 AM Dec 20, 2019 | mahesh |

ಶಾಲೆಯಲ್ಲಿ ಚದ್ಮವೇಷ ಮತ್ತು ಭಾಷಣ ಸ್ಪರ್ಧೆ ಏರ್ಪಾಡಾಗಿತ್ತು. ಸಿರಿ ಯಾವ ವೇಷ ಹಾಕಿದ್ಲು ಗೊತ್ತಾ?

Advertisement

ಮನೆ ತಲುಪುತ್ತಲೆ ಸಿರಿ ಅಮ್ಮನಿಗೆ ಹೇಳಿದಳು. “ಅಮ್ಮ ನಾಳಿದ್ದು ಶಾಲೆಯಲ್ಲಿ ಚದ್ಮವೇಷ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಇದೆ. ನಾನು ಹೆಸರು ಕೊಟ್ಟು ಬಂದಿದ್ದೇನೆ. “ನೀನು ಯಾವ ವೇಷ ಹಾಕುತ್ತಿದ್ದೀಯಾ?’ “ನಾನು ಟೀಚರ್‌ ಆಗ್ತಿನಮ್ಮ. ಟೀಚರ್‌ ಆಗಿಯೇ ಎರಡು ನಿಮಿಷ ಮಾತಾಡ್ತೇನೆ ಅಂತ ಹೆಸರು ಕೊಟ್ಟು ಬಂದಿದ್ದೇನೆ.’ “ಟೀಚರ್‌ ಆಗ್ತಿಯ? ಯಾಕೆ? ಬೇರೆ ಏನೂ ಹೊಳೆಯಲೇ ಇಲ್ಲವಾ? ಡಾಕ್ಟರೋ, ಇಂಜಿನಿಯರೋ ಆಗಬಹುದಿತ್ತು.’ “ನನಗೆ ಟೀಚರ್‌ ಆಗೋದಕ್ಕೆ ತುಂಬ ಇಷ್ಟ.’ “ಅಯ್ಯೋ ಪೆದ್ದೆ, ಟೀಚರ್‌ ಆಗ್ತಿàನಿ ಅಂದ್ರೆ ಎಲ್ಲ ನಗ್ತಾರೆ. ನಿಮ್ಮ ಟೀಚರಿಗೆ ಫೋನು ಮಾಡಿ ಹೇಳು, ಡಾಕ್ಟರೋ, ಲಾಯರ್‌ ವೇಷವನ್ನೋ ಹಾಕಿಕೊಂಡು ಬರ್ತಿನಿ ಅಂತ.’ “ಇಲ್ಲಮ್ಮ… ನನಗೆ ಸಂಗೀತ ಮೇಡಂ ತರಹ ಟೀಚರ್‌ ಆಗೋದಕ್ಕೆ ಇಷ್ಟ.. ಅವರು ಎಷ್ಟು ಚೆನ್ನಾಗಿ ಪಾಠ ಮಾಡ್ತಾರೆ ಗೊತ್ತಾ? ಆಟದ‌ ಜೊತೆ ಪಾಠಾನೂ ಕಲಿಸ್ತಾರೆ. ಕಥೆ ಹೇಳ್ತಾರೆ.’ ಕಡೆಗೂ ಅಮ್ಮ ಸಿರಿಯ ಮಾತನ್ನು ಒಪ್ಪಿಕೊಂಡರು. “ನಿಮ್ಮಜ್ಜಿಯ ಹಳೆ ಖಾದಿ ಸೀರೆ ಟ್ರಂಕಲ್ಲಿದೆ. ಅವರ ಕನ್ನಡಕ ಕೂಡ ಅಲ್ಲೇ ಇದೆ. ನಾನು ಹೇಳುವುದು ಹೇಳಿದ್ದೇನೆ. ಸ್ಪರ್ಧೆಯಲ್ಲಿ ಬಹುಮಾನ ಬರದೇ ಇದ್ದರೆ ಅಳಬೇಡ’. ಸಿರಿ ಅಜ್ಜಿಯ ಸೀರೆಯನ್ನು ತೊಟ್ಟು ಅಭ್ಯಾಸ ಮಾಡಿದ್ದೇ ಮಾಡಿದ್ದು.

ಚದ್ಮವೇಷ ಸ್ಪರ್ಧೆಯ ದಿನ ಬಂದೇಬಿಟ್ಟಿತು. ಸಿರಿ ಆ ದಿನ ಬೇಗನೆ ಎದ್ದು ಚದ್ಮವೇಷಕ್ಕೆ ಬೇಕಾದ ಪರಿಕರಗಳೆಲ್ಲವನ್ನೂ ಪ್ಯಾಕ್‌ ಮಾಡಿಕೊಂಡು ಹೋದಳು. ಫ‌ಲಿತಾಂಶ ಏನಾಗಲಿದೆ ಎಂಬ ಕುತೂಹಲ ಅಮ್ಮನಿಗೂ ಇತ್ತು. ಆ ದಿನ ಮಧ್ಯಾಹ್ನ ಸಿರಿಯ ಶಾಲೆಯಿಂದ ಫೋನು ಬಂದಿತು. ಸಿರಿಯ ಅಮ್ಮ ಫೋನೆತ್ತಿದಾಗ ಅತ್ತ ಕಡೆಯಿಂದ ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿದರು. ಆ ದಿನ ಮಧ್ಯಾಹ್ನ ತಮ್ಮನ್ನು ಭೇಟಿ ಮಾಡುವಂತೆ ಅವರು ಹೇಳಿದರು. ಸಿರಿಯ ಅಮ್ಮನಿಗೆ ದುಗುಡ ಶುರುವಾಯಿತು. ಸಿರಿ ಯಾವ ತೊಂದರೆಗೆ ಸಿಲುಕಿಕೊಂಡಿದ್ದಾಳ್ಳೋ ಎಂದು ಅವರಿಗೆ ಆತಂಕವಾಯಿತು. ಸಿರಿಯ ಅಮ್ಮ ಪತಿಗೆ ಫೋನಾಯಿಸಿದರು “ರೀ, ಯಾಕೋ ಭಯ ಆಗ್ತಿದೆ. ಸಿರಿಯ ಶಾಲೆಯಿಂದ ಹೊರಟು ಬರುವಂತೆ ಫೋನು ಬಂದಿತ್ತು. ನೀವೂ ಬಂದಿದ್ದರೆ ಚೆನ್ನಾಗಿತ್ತು.’ ಎಂದರು. ಆದರೆ ಸಿರಿಯ ಅಪ್ಪ ಕಚೇರಿ ಕೆಲಸದಲ್ಲಿ ಬ್ಯುಸಿ ಇದ್ದರು. ಹೀಗಾಗಿ “ನನಗೆ ಬರಲು ಆಗುತ್ತಿಲ್ಲ. ಸಿರಿಯ ಶಾಲೆಗೆ ನೀನೇ ಹೋಗಿ ಬಾ. ನೀನು ಚಿಂತಿಸುವಂಥದ್ದೇನೂ ಆಗಿರುವುದಿಲ್ಲ. ಸಿರಿ ಏನಾದರೂ ತಪ್ಪು ಮಾಡಿದ್ದರೆ ಇನ್ಯಾವತ್ತೂ ಆ ತಪ್ಪು ಮರುಕಳಿಸುವುದಿಲ್ಲ ಎಂದು ಸುಮ್ಮನಾಗಿಬಿಡು. ಎಲ್ಲವೂ ಸರಿಯಾಗುತ್ತೆ’ ಎಂದುಬಿಟ್ಟರು.

ಬೇರೆ ದಾರಿಯಿಲ್ಲದೆ ಸಿರಿಯ ಅಮ್ಮ ಒಬ್ಬರೇ ಶಾಲೆಗೆ ಹೋದರು. ತಮ್ಮ ಕೊಠಡಿಯಲ್ಲಿ ಪ್ರಿನ್ಸಿಪಾಲರು ಗಂಭೀರವಾಗಿ ಕುಳಿತಿದ್ದರು. ಸಿರಿಯ ಅಮ್ಮನಿಗೆ ಸಿರಿ ಏನೋ ದೊಡ್ಡ ತಪ್ಪನ್ನೇ ಮಾಡಿಸಿಕ್ಕಿಬಿದ್ದಿದ್ದಾಳೆ ಎನ್ನಿಸಿತು. ಪ್ರಿನ್ಸಿಪಾಲರು “ನಮಸ್ಕಾರ ಮೇಡಂ. ನೀವೇನಾ ಸಿರಿ ತಾಯಿ? ಬನ್ನಿ ಕುಳಿತುಕೊಳ್ಳಿ ಎಂದರು. ಸಿರಿಯ ಅಮ್ಮ “ಸಿರಿ ಏನು ತಪ್ಪು ಮಾಡಿದ್ದರೂ ಕ್ಷಮಿಸಿ. ಅವಲಿಗೆ ನಾನು ಬುದ್ಧಿ ಹೇಳುತ್ತೇನೆ.’ ಎಂದರು. ಪ್ರಿನ್ಸಿಪಾಲರಿಗೆ ಏನೂ ಅರ್ಥವಾಗದೆ ಪಕ್ಕದಲ್ಲಿ ನಿಂತಿದ್ದ ಸಂಗೀತಾ ಆಚರನ್ನು ನೋಡಿದರು. ಸಂಗೀತ ಟೀಚರ್‌ “ಇವತ್ತು ನಿಮ್ಮ ಸಿರಿ… ಎರಡೂ ಸ್ಪರ್ಧೆಗಳಲ್ಲಿ ಮೊದಲನೇ ಬಹುಮಾನ ಗಳಿಸಿದ್ದಾಳೆ. ನಮಗೆಲ್ಲ ತುಂಬ ಖುಷಿಯಾಗಿದೆ. ಎಲ್ಲಾ ಮಕ್ಕಳು ಡಾಕ್ಟರ್‌, ಎಂಜಿನಿಯರ್‌, ಪೊಲೀಸ್‌ ವೇಷ ಧರಿಸಿದ್ದರೆ ಸಿರಿ ಮಾತ್ರ ನನ್ನ ವೇಷವನ್ನು ಧರಿಸಿದ್ದಳು. ಅಷ್ಟೇ ಅಲ್ಲ, ಭಾಷಣ ಸ್ಪರ್ಧೆಯಲ್ಲೂ ತುಂಬಾ ಚೆನ್ನಾಗಿ ಮಾತಾಡಿದಳು. ಶಿಕ್ಷಕರು ಕೇವಲ ತರಗತಿಗಳ ನಾಲ್ಕು ಗೋಡೆಗಳ ಮಧ್ಯದ ಶಿಕ್ಷಕರಾಗಬಾರದು. ಮಗುವಿನ ಜೀವನವನ್ನೇ ಬೆಳಗುವ ದಾರಿದೀಪಗಳಾಗಬೇಕು ಅಂತೆಲ್ಲಾ ಹೇಳಿದಳು’.

ಸಂಗೀತಾ ಟೀಚರ್‌ ಮಾತು ಕೇಳಿ ಸಿರಿಯ ಅಮ್ಮನಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಪ್ರಿನ್ಸಿಪಾಲರು ಹೇಳಿದರು, “ಮಗುವಿನ ಮೊದಲ ಪಾಠಶಾಲೆ ಮನೆ ಎನ್ನುತ್ತಾರೆ. ತಾಯಿ ಮಗುವಿನ ಮೊದಲ ಗುರು. ಆದ್ದರಿಂದ ಸಿರಿಗೆ ನೀವೇ ಬಹುಮಾನ ಕೊಡಬೇಕೆಂದು ನಿಮ್ಮನ್ನು ಕರೆಸಿದ್ದೇವೆ. “ಸಿರಿ, ನೀನು ಹೇಳಮ್ಮ… ನಿನ್ನ ಬೆಸ್ಟ್‌ ಟೀಚರ್‌ ಯಾರು? ಸಂಗೀತ ಮಿಸೊÕà, ಅಮ್ಮನೋ? ಸಿರಿ ಆತ್ಮವಿಶ್ವಾಸದಿಂದ ಹೇಳಿದಳು, “ಇಬ್ಬರೂ..’

Advertisement

-ಮತ್ತೂರು ಸುಬ್ಬಣ್ಣ

Advertisement

Udayavani is now on Telegram. Click here to join our channel and stay updated with the latest news.

Next