Advertisement

ಯಾರಿಗೆ ಗೆಲುವಿನ ಹರಿವಾಣ?

09:47 AM Apr 05, 2019 | mahesh |

ಹೂಡಾಗಳಿಗೆ ಎದುರಾಗಿದೆ ಕಷ್ಟ, ಗೆಲುವಿನ ಭರವಸೆಯಲ್ಲಿ ಬಿಜೆಪಿ

Advertisement

ಒಟ್ಟು ಹತ್ತು ಲೋಕಸಭಾ ಕ್ಷೇತ್ರಗಳಿರುವ ಹರ್ಯಾಣದಲ್ಲಿ ಈ ಬಾರಿ ಯಾರು ಗೆಲ್ಲಲಿದ್ದಾರೆ? ಕಳೆದ ಲೋಕಸಭಾ ಚುನಾವಣೆಯಲ್ಲಂತೂ ಬಿಜೆಪಿ ಈ ರಾಜ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಒಟ್ಟು ಹತ್ತು ಸ್ಥಾನಗಳಲ್ಲಿ ಬಿಜೆಪಿ 7 ಸ್ಥಾನಗಳಲ್ಲಿ ಗೆದ್ದಿತ್ತು, ಅಂದು ಅದರ ಪ್ರಮುಖ ಎದುರಾಳಿ ಎಂದು ಬಿಂಬಿಸಿಕೊಂಡಿದ್ದ ಕಾಂಗ್ರೆಸ್‌ಗೆ ದಕ್ಕಿದ್ದು ಕೇವಲ 1 ಸ್ಥಾನವಷ್ಟೇ.

ಹಾಗಿದ್ದರೆ ಈ ಬಾರಿ ಚಿತ್ರಣ ಸಂಪೂರ್ಣವಾಗಿ ಬದಲಾಗಿ ಗೆಲುವಿನ ಹಾರ ಕಾಂಗ್ರೆಸ್‌ ಕೊರಳು ಸೇರಲಿದೆಯೇ? ಅಥವಾ ಈ ಬಾರಿಯೂ ಬಿಜೆಪಿಯೇ ವಿಜಯ ಪತಾಕೆ ಹಾರಿಸಲಿದೆಯೇ? ಮೂರು ದಿಕ್ಕಿನಿಂದ ನವದೆಹಲಿಯನ್ನು ಸುತ್ತುವರಿದಿರುವ ಈ ರಾಜ್ಯದಲ್ಲಿ ಒಂದೂವರೆ ಕೋಟಿ ಜನಸಂಖ್ಯೆಯಿದೆ. ಮನೋಹರ್‌ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ, ಭೂಪಿಂದರ್‌ ಸಿಂಗ್‌ ಹೂಡಾ ನೇತೃತ್ವದ ಕಾಂಗ್ರೆಸ್‌, ಕುಲ್ದೀಪ್‌ ಬಿಷ್ಣೋಯ್‌ ನೇತೃತ್ವದ ಹರ್ಯಾಣ ಜನಹಿತ ಕಾಂಗ್ರೆಸ್‌ ಮತ್ತು ಓಂ ಪ್ರಕಾಶ್‌ ಚೌಟಾಲ ನೇತೃತ್ವದ ಇಂಡಿಯನ್‌ ನ್ಯಾಷನಲ್‌ ಲೋಕದಳ (ಐಎನ್‌ಎಲ್‌ಡಿ) ಅಲ್ಲಿನ ಸದ್ಯದ ಪ್ರಮುಖ ಪಕ್ಷಗಳು.

2014ರಲ್ಲಿ ಲೋಕಸಭೆ ಅಷ್ಟೇ ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿತು ಬಿಜೆಪಿ. ಸತತ ಎರಡು ಬಾರಿ ಸಿಎಂ ಪದವಿಗೇರಿದ್ದ ಕಾಂಗ್ರೆಸ್‌ನ ಜಾಟ್‌ ನಾಯಕ ಭೂಪೇಂದರ್‌ ಸಿಂಗ್‌ ಹೂಡಾರನ್ನು ಹರ್ಯಾಣ ಜನರು ಕೈಬಿಟ್ಟಿದ್ದರು. ಬಿಜೆಪಿಯು ಜಾಟ್‌ಯೇತರ ನಾಯಕರಾದ ಮನೋಹರ್‌ ಲಾಲ್‌ ಖಟ್ಟರ್‌ರನ್ನು ಮುಖ್ಯಮಂತ್ರಿಯಾಗಿ ನೇಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಏಕೆಂದರೆ ಹರ್ಯಾ ಣದ ಜನಸಂಖ್ಯೆಯಲ್ಲಿ ಜಾಟರು 25 ಪ್ರತಿಶತದಷ್ಟಿದ್ದಾರೆ. ರಾಜ ಕೀಯವಾಗಿ ಈ ವರ್ಗದ ವೋಟುಗಳು ಬಹಳ ಮಹತ್ವ ಪಡದಿವೆ. ಗಮನಿಸಬೇಕಾದ ಸಂಗತಿಯೆಂದರೆ 2014ರ ಎರಡೂ ಚುನಾ ವಣೆಗಳಲ್ಲೂ ಬಿಜೆಪಿಯನ್ನು ಜಾಟರು ಬೆಂಬಲಿಸಿರಲಿಲ್ಲ. ಈಗಲೂ ಅವರು ಮೀಸಲಾತಿ ವಿಚಾರದಲ್ಲೂ ಬಿಜೆಪಿ ವಿರುದ್ಧವೇ ಇದ್ದಾರೆ.

ಆದರೆ ಬಿಜೆಪಿ ಮಾತ್ರ ಜಾಟ್‌ ಓಟುಗಳ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಜಾಟರನ್ನು ಎದುರುಹಾಕಿಕೊಳ್ಳುತ್ತಲೇ ಅದು ಒಂದು ರೀತಿಯಲ್ಲಿ ಜಾಟ್‌ಯೇತರ(ಜಾಟ್‌ ವಿರೋಧಿ ಎನ್ನಲೂಬಹುದು) ಗುಂಪುಗಳನ್ನೆಲ್ಲ ಧ್ರುವೀಕರಿಸುವಲ್ಲಿ ಸಫ‌ಲವಾಗಿಬಿಟ್ಟಿದೆ.
ಕಾಂಗ್ರೆಸ್‌ನಲ್ಲಿ ಕಳವಳ: ಕೆಲವೇ ದಿನಗಳ ಹಿಂದಷ್ಟೇ ಹರ್ಯಾ ಣದ “ಪರಿವರ್ತನ್‌ ಯಾತ್ರಾ’ದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಹಳೆಯೂದಿ ಹೋಗಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಗೆಲುವು ಶತಸಿದ್ಧ ಎಂದೂ ಭರವಸೆಯ ಮಾತನಾಡಿದ್ದಾರೆ. ಆದರೆ ಹರ್ಯಾಣಾ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಭೂಪೇಂದರ್‌ ಸಿಂಗ್‌ ಹೂಡಾ ಅವರ ಧ್ವನಿಯಲ್ಲಿ ಮಾತ್ರ ಈ ಭರವಸೆ ಕಾಣಿಸುತ್ತಿಲ್ಲ. ಹೂಡಾ ಅವರು ಜಾಟ್‌ ಸಮುದಾಯಕ್ಕೆ ಸೇರಿದವರು. ಜಾಟ್‌ ಹೋರಾಟದ ಕೇಂದ್ರನೆಲೆಯಾಗಿರುವ ರೋಹ¤ಕ್‌ ಅವರ ತವರು ಕ್ಷೇತ್ರ. 2014ರಲ್ಲಿ ಮೋದಿ ಅಲೆ ಇಡೀ ಹರ್ಯಾಣಕ್ಕೆ ಅಪ್ಪಳಿಸಿದ್ದರೂ ರೋಹ¤ಕ್‌ನ ಜನ ಮಾತ್ರ ಹೂಡಾ ಕುಟುಂಬದ ಕೈ ಬಿಡಲಿಲ್ಲ. ಅಂದು ಭೂಪೇಂದ್ರ ಸಿಂಗ್‌ರ ಪುತ್ರ ದೀಪೇಂದ್ರ ಹೂಡಾ ಬಿಜೆಪಿಯ ಎದುರಾಳಿಯನ್ನು 1.7 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆ ಮೂಲಕ ದೀಪೇಂದ್ರ ಸಿಂಗ್‌ ಅವರು ಸತತ ಮೂರನೇ ಬಾರಿ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

Advertisement

ಆದರೆ ಈ ಬಾರಿ ದೀಪೇಂದ್ರ ಸಿಂಗ್‌ ಅವರ ಹಾದಿ ಅಷ್ಟು ಸುಗಮವಾಗಿಲ್ಲ. ಅವರ ತಂದೆ ಭೂಪೇಂದ್ರ ಸಿಂಗ್‌ ಹೂಡಾ ಅವರ ಮೇಲಿನ ಭ್ರಷ್ಟಾಚಾರದ ಪ್ರಕರಣಗಳು ಹೂಡಾಗಳ ಹೆಸರು ಕೆಡಿಸಿದೆ. ಇದು ಸಾಲದೆಂಬಂತೆ 2016ರ ಜಾಟ್‌ ಮೀಸಲಾತಿ ಹೋರಾಟವು ಹಿಂಸಾಚಾರದ ರೂಪಕ್ಕೆ ತಿರುಗಿ ದ್ದರಿಂದ ಜಾಟೇತರ ಮತದಾರರೆಲ್ಲ ಬಿಜೆಪಿಯತ್ತ ನೋಡುತ್ತಿ ದ್ದಾರೆ. ಜಾಟರು ಕೂಡ ತಂದೆ-ಮಗನ ಮೇಲೆ ಮುನಿಸಿಕೊಂ ಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು ಹಿಂಜರಿ ಯುತ್ತಿರುವುದರಿಂದ, ಪಕ್ಷಕ್ಕೆ ಅಭ್ಯರ್ಥಿ ಗಳನ್ನು ಹುಡುಕುವುದೇ ದೊಡ್ಡ ಕೆಲಸವಾಗಿದೆ. ಕೆಲವೇ ಸಮಯದ ಹಿಂದೆ ಜಿಂದ್‌ ವಿಧಾನಸಭಾ ಉಪಚುನಾವಣೆಯಲ್ಲಿ ಎದುರಾದ ಹೀನಾಯ ಸೋಲು ಅವರ ಈ ಹಿಂಜರಿಕೆಗೆ ಕಾರಣ ಎನ್ನಲಾಗುತ್ತಿದೆ.

ಉತ್ಸಾಹದಲ್ಲಿ ಬಿಜೆಪಿ
ಅತ್ತ ಕಾಂಗ್ರೆಸ್‌ ಗೊಂದಲದಲ್ಲೇ ಮುಂದುವರಿದಿದ್ದರೆ ಇತ್ತ ಬಿಜೆಪಿ ತನ್ನ ಶಕ್ತಿಯನ್ನು ಇನ್ನಷ್ಟು ಬಲಿಷ್ಠಗೊಳಿಸು ವುದಕ್ಕೆ ಎಂದಿನಿಂದಲೋ ಕಾರ್ಯ ಆರಂಭಿಸಿದೆ. ಇತ್ತೀಚೆಗಷ್ಟೇ ಬಿಜೆಪಿಯು ಎಲ್ಲಾ ಕ್ಷೇತ್ರದಲ್ಲೂ ಫೀಡ್‌ಬ್ಯಾಕ್‌ ಸಮೀಕ್ಷೆಯನ್ನು ಮಾಡಿಸಿತ್ತು. ಪಿಎಂ ಮೋದಿ ಮತ್ತು ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರ ವರ್ಚಸ್ಸಿನ ಆಧಾರದಲ್ಲಿ ಈ ಸಮೀಕ್ಷೆಯನ್ನು ಮಾಡಿತ್ತು ಬಿಜೆಪಿ. ಎಲ್ಲಾ ಕ್ಷೇತ್ರಗಳಲ್ಲೂ ಫೀಡ್‌ಬ್ಯಾಕ್‌ ಸರ್ವೇ ಪೂರ್ಣಗೊಂಡಿದ್ದು, ಬಿಜೆಪಿಗರಂತೂ ಸಮೀಕ್ಷೆಯ ಫ‌ಲಿತಾಂಶದಿಂದ ಬಹಳ ಖುಷಿಯಲ್ಲಿ ದ್ದಾರೆ. ಹರ್ಯಾಣಾ ವಿತ್ತ ಸಚಿವ ಕ್ಯಾಪ್ಟನ್‌ ಅಭಿಮನ್ಯು ಅವರ ಪ್ರಕಾರ ಬಿಜೆಪಿ ಈ ಬಾರಿ ಎಲ್ಲಾ ಹತ್ತು ಸ್ಥಾನಗಳಲ್ಲೂ ಗೆಲುವಿನ ಪತಾಕೆ ಹಾರಿಸಲಿದೆಯಂತೆ.

ಎಲೆಕ್ಷನ್‌ನಿಂದ ಎಲ್ಲಾ ಫಾಸ್ಟ್‌
ಎಲ್ಲಾ ಸರ್ಕಾರಗಳೂ ಹಾಗೆಯೇ ಚುನಾವಣೆ ಬಂದಾಗ ಫ‌ಲಾನುಭವಿಗಳಿಗೆ ವಿವಿಧ ಯೋಜನೆಗಳ ಸಹಾಯಧನ ನೀಡಲು ವಿಳಂಬ ಮಾಡುವುದಿಲ್ಲ. ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌ಗಳಲ್ಲಿ ವಿಮಾ ಕಂಪನಿಗಳು ರೈತರಿಗೆ ಸಂಬಂಧಿಸಿದ ವಿಮೆಯ ಕ್ಲೇಮುಗಳನ್ನು ಶೇ.90ರಷ್ಟು ಇತ್ಯರ್ಥ ಮಾಡಿವೆ. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಕೂಡ ಕಂಪನಿಗಳಿಗೆ ತಾಕೀತು ಮಾಡಿದ್ದು, ರೈತರ‌ ಕ್ಲೇಮು, ಮನವಿಗಳನ್ನು ಇತ್ಯರ್ಥ ಮಾಡಲು ಸೂಚಿಸಿದೆ.

ಭದ್ರತೆಗೆ ಮೇಣದ ಕಡ್ಡಿಗಳು
ಸ್ಟ್ರಾಂಗ್‌ರೂಂನಲ್ಲಿ ಇರಿಸಲಾಗುವ ಇವಿಎಂಗಳಿಗೆ ಶಸ್ತ್ರಸಜ್ಜಿತ ಸಿಬ್ಬಂದಿ ಹೇಗಿದ್ದರೂ ಇರುತ್ತಾರೆ. ಅವರ ಜತೆಗೆ 6.81 ಲಕ್ಷ ಮೇಣದ ಕಡ್ಡಿಗಳು ಮತ್ತು ನಾಲ್ಕು ಲಕ್ಷ ಕ್ಯಾಂಡಲ್‌ಗ‌ಳನ್ನು ಬಳಕೆ ಮಾಡಲಾಗುತ್ತದೆ. ಕೆಂಪು ಬಣ್ಣದ ಮೇಣವನ್ನು ಮೊಹರು ಮಾಡಲು ಬಳಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಅದನ್ನು ಬಳಕೆ ಮಾಡಲಾಗುತ್ತದಂತೆ ಅದಕ್ಕಾಗಿ ಚುನಾವಣಾ ಆಯೋಗ ಪೂರೈಕೆ ಮಾಡುವ ಕ್ಯಾಂಡಲ್‌ಗ‌ಳನ್ನೇ ಬಳಕೆ ಮಾಡಬೇಕಾಗುತ್ತದೆ.

2  00ನೇ ಬಾರಿ ಸ್ಪರ್ಧೆ
ಇವರ ಹೆಸರೇ ಎಲೆಕ್ಷನ್‌ ಕಿಂಗ್‌ ಅಥವಾ ಚುನಾವಣೆಗಳ ರಾಜ. ಈ ಬಾರಿ ಅವರು ಸ್ಪರ್ಧೆ ಮಾಡುವುದು 200ನೇ ಬಾರಿಗೆ. ಯಾವುದೇ ಚುನಾವಣೆ ಇರಲಿ ತಮಿಳುನಾಡಿನ ಸೇಲಂ ಮೂಲದ ಕೆ.ಪದ್ಮರಾಜನ್‌ ಕಣದಲ್ಲಿ ಇದ್ದೇ ಇರುತ್ತಾರೆ. 2014ರಲ್ಲಿ ವಡೋದರಾದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿದು ದೇಶಾದ್ಯಂತ ಸುದ್ದಿಯೂ ಆಗಿದ್ದರು. 1988ರಲ್ಲಿ ಮೆಟ್ಟೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು ಮೊದಲ ಪ್ರಯತ್ನ. ಇದುವರೆಗೆ ಅವರು ಗೆದ್ದಿಲ್ಲ.

2014ರ ಲೋಕಸಭೆ ಫ‌ಲಿತಾಂಶ
ಒಟ್ಟು ಸ್ಥಾನಗಳು 10
ಬಿಜೆಪಿ: 7 ಕಾಂಗ್ರೆಸ್‌:1 ಐಎನ್‌ಎಲ್‌ಡಿ: 2

Advertisement

Udayavani is now on Telegram. Click here to join our channel and stay updated with the latest news.

Next