Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚಕ್ರತೀರ್ಥ ಹಿನ್ನೆಲೆ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರೆ, ಅವರು ಯೂಟ್ಯೂಬ್ ನಲ್ಲಿ ಹೇಳಿಕೊಡುತ್ತಿರುವ ಪಾಠಕ್ಕೆ 20 ಜನ ವೀಕ್ಷಕರಿಲ್ಲ. ಇಂತಹ ಮೇಧಾವಿಯನ್ನು 1 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇವರು ಶಿಕ್ಷಣ ತಜ್ಞರಿದ್ದರೆ ಸರ್ಕಾರ ಯಾಕೆ ಸಮರ್ಥನೆಗೆ ಮುಂದೆ ಬರುತ್ತಿದೆ. ಬಿಜೆಪಿಯಲ್ಲಿ ಇರುವುದು ಒಂದೇ ಮಾನದಂಡ. ಅದು ಅಶ್ಲೀಲತೆ ಎಂದು ಟೀಕಿಸಿದರು.
Related Articles
Advertisement
ಈ ವಿಚಾರದ ಬಗ್ಗೆ ಎನ್ ಇಪಿಯಲ್ಲೂ ತನ್ನಿ.ಇದೆಲ್ಲವನ್ನು ಯುವಕರು ಓದಿ ನಂತರ ದೇಶಭಕ್ತರು ಯಾರು? ದೇಶದ್ರೋಹಿಗಳು ಯಾರು? ಎಂದು ತೀರ್ಮಾನಿಸಲಿ. ನೀವು ಕ್ವಿಟ್ ಇಂಡಿಯಾ ಚಳುವಳಿ ಸಮಯದಲ್ಲಿ ಏನು ಮಾಡಿದಿರಿ, ಸುಭಾಷ್ ಚಂದ್ರ ಬೋಸ್ ಅವರು ಇಂಡಿಯನ್ ಆರ್ಮಿ ಕಟ್ಟುವಾಗ ನೀವೇನು ಮಾಡಿದಿರಿ? ದಂಡಿ ಸತ್ಯಾಗ್ರಹ ಮಾಡುವಾಗ ನೀವೇನು ಮಾಡಿದಿರಿ? ದುಂಡು ಮೇಜು ಸಭೆ, ಅಸಹಕಾರ ಚಳುವಳಿ ಸಮಯದಲ್ಲಿ ನೀವು ಏನು ಮಾಡಿದ್ದೀರಿ ಎಂದು ಚರ್ಚಿಸಿ. ರಾಷ್ಟ್ರ ನಿರ್ಮಾಣ ಮಾಡುವಾಗ, ಭಾರತ ಪಾಕ್ ಯುದ್ಧವಾಗುವಾಗ, ಭಾರತ ಚೀನಾ ಯುದ್ಧವಾಗುವಾಗ, ಬಾಂಗ್ಲಾ ವಿಮೋಚನೆಯಾಗುವಾಗ ನೀವು ಎಲ್ಲಿದ್ದಿರಿ? ಸಂವಿಧಾನದ ಮೂಲ ಆಶಯ ಜಾರಿ ಮಾಡುವಾಗ ಎಲ್ಲಿದ್ದಿರಿ ಎಂಬ ಎಲ್ಲ ವಿಚಾರದ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದರು.
ಕೇವಲ ಒಂದು ಪಾಠ ತಿರುಚಿ ಹೇಳುತ್ತೀರಿ. ಹೆಡೆಗೆವಾರ್ ಅವರು ಭಾಗವಧ್ವಜಕ್ಕೆ ನಮ್ಮ ನಿಯತ್ತು ಇರಬೇಕು ಎಂದು ಹೇಳಿದ್ದು, ಪಠ್ಯದಲ್ಲಿ ಕೇವಲ ಧ್ವಜ ಎಂದು ಯಾಕೆ ಹೇಳಿದ್ದೀರಿ? ಅದನ್ನು ಹೇಳಲು ಧೈರ್ಯ ಇಲ್ಲವೇ? ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್, ಹೇಳಿಕೆ ನೀಡುವವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡುಚತ್ತೀರಾ? ನಮ್ಮ ವಿದ್ಯಾರ್ಥಿ ಭವಿಷ್ಯ ಹಾಳು ಮಾಡುತ್ತಿದ್ದರೆ ನಾವದನ್ನು ನೋಡಿ ಸುಮ್ಮನೆ ಕೂರಬೇಕಾ? ಈ ಸಮಿತಿ, ಸರ್ಕಾರಕ್ಕೆ ಸಮಾನತೆ ಎಂದರೆ, ಸಂವಿಧಾನ, ದಲಿತರು ಎಂದರೆ ಅಲರ್ಜಿ. ಮಹಿಳೆಯರು ಹಿಂದುಳಿದವರು ಮುಖ್ಯವಾಹಿನಿಗೆ ಬರಬಾರದು, ಆರ್ಥಿಕವಾಗಿ ಮುಂದೆಬರಬಾರದು ಎಂಬ ಧೋರಣೆಗಳಿವೆ. ಇವರು ಎಂತಹ ತತ್ವಜ್ಞಾನಿಗಳು, ಸಮಾನತೆ ಪ್ರತಿಪಾದನೆ ಮಾಡಿದವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದವರ ಜೀವನ ಚರಿತ್ರೆ ತಿರುಚಿದ್ದಾರೆ ಅಥವಾ ಕೈಬಿಟ್ಟಿದ್ದಾರೆ. ಬುದ್ಧ, ಬಸವ, ನಾರಾಯಣಗುರು ಅವರಿಗೆ ಅನ್ಯಾಯ ಮಾಡಿದ್ದು, ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರ. ಸಾವಿತ್ರಿ ಭಾಯಿ ಪುಲೆ ಅವರ ಪಠ್ಯ ಬಿಟ್ಟಿದ್ದಾರೆ. ಪಿ.ಲಂಕೇಶ್, ಮಾಲಗತ್ತಿ, ದೇವನೂರು ಮಹಾದೇವ ಅವರ ಲೇಖನ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಏನು? ಪ್ರಸ್ತುತವಲ್ಲವೇ? ವೈಜ್ಞಾನಿಕ ಭಾವನೆ, ಸಂವಿಧಾನ ಆಶಯ ಇಲ್ಲವೇ? ಇವರ ಲೇಖನ ಬದಲಾಗಿ ಮೋದಿಗೆ ಜೈಕಾರ ಹಾಕುವವರ ಲೇಖನ ಹಾಕಿದ್ದಾರೆ ಎಂದರು.
ನಿನ್ನೆ ಮುಖ್ಯಮಂತ್ರಿಗಳು ಪತ್ರಿಕಾಪ್ರಕಟಣೆ ಪ್ರಕಟಿಸಿದ್ದು, ನನಗೆ ಇವರ ಉತ್ತರ ಕೇಳಿ ಸಾಕಾಗಿದೆ. ನನಗೆ ಒಂದು ಸ್ಪಷ್ಟನೆ ಬೇಕಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ಯಾವುದೇ ವಿಚಾರ ನೋಡಿದರೂ ಮುಖ್ಯಮಂತ್ರಿಗಳು ಮೂಖಬಸವರಾಗಿರುತ್ತಾರೆ ಯಾಕೆ? ಯಾರ ಬಳಿ ನ್ಯಾಯ ಕೇಳಬೇಕು? ಪಿಎಸ್ಐ ಹಗರಣ ಅಂದರೂ ಸುಮ್ಮನಿರುತ್ತಾರೆ, ಅವರು ಹಿಂಜರಿಯುತ್ತಿರುವುದೇಕೆ. ನಾಡಗೀತೆ ತಿರುಚಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳು ಸಾಧ್ಯವಾಗುತ್ತಿಲ್ಲ ಯಾಕೆ? ಆತ ಅಷ್ಟೋಂದು ಪ್ರಭಾವಿ ವ್ಯಕ್ತಿಯೇ? ಕುವೆಂಪು, ಬುದ್ಧ, ನಾರಾಯಣ ಗುರು, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಆತನ ಮುಂದೆ ಮಂಡಿಯೂರುತ್ತಿರುವುದೇಕೆ? ಎಂದು ಪ್ರಶ್ನಿಸಿದರು.