Advertisement
ನರೇಂದ್ರ ಮೋದಿಗೆದ್ದರೆ
ಗೆಲುವಿನ ನಾಗಾಲೋಟಕ್ಕೆ ಕಡಿವಾಣವೇ ಇಲ್ಲದಂತಾಗಬಹುದು
ಮತ್ತೂಮ್ಮೆ ಪ್ರಧಾನಮಂತ್ರಿ ಹುದ್ದೆಗೇರುವ ಅವಕಾಶ ಸಿಗಲಿದೆ
ಮೋದಿ ಮೀರಿಸುವ ನಾಯಕರೇ ಇಲ್ಲ ಎಂಬ ಭಾವನೆ ಇನ್ನಷ್ಟು ಗಟ್ಟಿ
ದೇಶಾದ್ಯಂತ ಮೋದಿ ಅಲೆ ತಗ್ಗಿದೆ ಎಂಬ ಭಾವನೆ ಮೂಡಲಿದೆ
ಬಿಜೆಪಿಯೊಳಗೆ ನಾಯಕತ್ವ ಬದಲಾವಣೆಯ ಕೂಗು ಕೇಳಿಬರಬಹುದು
ಸ್ವತಃ ಮೋದಿಯವರೇ ನಾಯಕತ್ವ ವಹಿಸಿಕೊಳ್ಳಲು ಹಿಂದೇಟು ಹಾಕಬಹುದು ರಾಹುಲ್ ಗಾಂಧಿ
ಗೆದ್ದರೆ
ಬಹುಮತ ಬಾರದಿದ್ದರೂ ಮಿತ್ರರ ನೆರವಿಂದ ಪ್ರಧಾನಿಯಾಗಬಹುದು
ಕಳೆಗುಂದಿರುವ ಕಾಂಗ್ರೆಸ್‌ನ ವರ್ಚಸ್ಸು ಮತ್ತೆ ಚಿಗುರಬಹುದು
ದೇಶಾದ್ಯಂತ ಪಕ್ಷ ಬಲಿಷ್ಠಗೊಳಿಸಲು ಸಹಾಯಕವಾಗಬಹುದು
Related Articles
ನಾಯಕತ್ವದ ಕುರಿತು ಅಸಮಾಧಾನ ಸ್ಫೋಟಗೊಳ್ಳಬಹುದು
ಪ್ರಿಯಾಂಕಾಗೆ ನಾಯಕತ್ವ ವಹಿಸ ಬೇಕು ಎಂಬ ಕೂಗು ಏಳಬಹುದು. ಬೇರೊಬ್ಬ ನಾಯಕ ಉದ್ಭವಿಸಬಹುದು
ಬಿಜೆಪಿ ಮತ್ತು ಇತರ ಪಕ್ಷಗಳ ಮುಂದೆ ದೇಶ ವ್ಯಾಪಿ ದುರ್ಬಲವಾಗಬಹುದು
Advertisement
ಚಂದ್ರ ಬಾಬು ನಾಯ್ಡು ಗೆದ್ದರೆ
ಮಹಾಘಟ ಬಂಧನ್‌ನಲ್ಲಿ ದೊಡ್ಡ ನಾಯಕನಾಗಬಹುದು
ಪ್ರಧಾನಿಯಾಗುವ ಆಕಾಂಕ್ಷೆ ಈಡೇರಿಸಿಕೊಳ್ಳಬಹುದು
ಮೋದಿ-ರಾಹುಲ್‌ಗೆ ಪರ್ಯಾಯ ನಾಯಕನಾಗಬಹುದು ಸೋತರೆ
ಕೇಂದ್ರ-ರಾಜ್ಯಗಳೆರಡರಲ್ಲೂ ಆಡಳಿತ ಕೈತಪ್ಪಿ ಮೂಲೆ ಗುಂಪಾಗಬಹುದು
ಮಹಾಘಟ ಬಂಧನ್ ಪ್ರಯತ್ನ ವಿಫಲವಾಗಿ ತೃತೀಯ ರಂಗದ ಕಲ್ಪನೆ ಹೋಗಬಹುದು
ಜಗನ್ ಮೋಹನ್ ರೆಡ್ಡಿ ಆಂಧ್ರದ ನಾಯಕನಾಗಿ ಬೆಳೆಯಬಹುದು. ಕುಮಾರಸ್ವಾಮಿ
ಗೆದ್ದರೆ
ಪ್ರಮುಖ 3 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆದ್ದರೆ ಸರಕಾರ ಸೇಫ್ ಮೈತ್ರಿಕೂಟ 16 ಸ್ಥಾನ ಗೆದ್ದರೆ ಜನ ಒಪ್ಪಿದ್ದಾರೆ ಎಂದು ಹೇಳಬಹುದು
ಮೋದಿ ಅಲೆಯಲ್ಲೂ ಸಾಧನೆ ಮಾಡಿದ್ದೇವೆ ಎಂದು ಹೇಳಬಹುದು ಸೋತರೆ
12 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಕಷ್ಟವಾಗಬಹುದು.
ಎಚ್‌ಎಂಟಿ ಕ್ಷೇತ್ರದಲ್ಲಿ ಸೋತರೆ ಜೆಡಿಎಸ್ ಭವಿಷ್ಯ ಮಂಕಾಗಬಹುದು
ಕಾಂಗ್ರೆಸ್‌ನವರು ಬೆಂಬಲ ಹಿಂದೆಗೆದುಕೊಂಡರೆ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರಬಹುದು ಸಿದ್ದರಾಮಯ್ಯ
ಗೆದ್ದರೆ
16 ಸ್ಥಾನ ಗೆದ್ದರೆ ಮತ್ತಷ್ಟು ಪ್ರಭಾವಿಯಾಗಬಹುದು
ತಮ್ಮ ಸಮುದಾಯದ ಬೆಂಬಲ ಜೆಡಿಎಸ್‌ಗೂ ಸಿಕ್ಕಿದೆ ಎನ್ನಬಹುದು
ಬಿಜೆಪಿಯೇತರ ಸರಕಾರ ಬಂದರೆ ಮಂತ್ರಿ ಸ್ಥಾನದ ಚಾನ್ಸ್ ಸಿಗಬಹುದು ಸೋತರೆ
ಹೆಚ್ಚು ಸ್ಥಾನ ಗೆಲ್ಲದಿದ್ದರೆ ಒಳ ಏಟು “ಆರೋಪ’ ಹೊರಬೇಕಾಗಬಹುದು
ಕಾಂಗ್ರೆಸ್ 9 ಕ್ಕಿಂತ ಕಡಿಮೆ ಸ್ಥಾನ ಗೆದ್ದರೆ “ತಲೆದಂಡ’ವಾಗಬಹುದು
ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳದಿದ್ದರೆ ಮುಖಭಂಗವಾಗಬಹುದು ಯಡಿಯೂರಪ್ಪ
ಗೆದ್ದರೆ
20 ಸ್ಥಾನ ಗಳಿಸಿದರೆ ಬಿಜೆಪಿ ಸರಕಾರಕ್ಕೆ ಯತ್ನಿಸಬಹುದು
ಮೋದಿ ವರ್ಚಸ್ಸು. ಲಿಂಗಾಯತರು ಕೈ ಹಿಡಿದಿದ್ದಾರೆ ಎನ್ನಬಹುದು
2 ವಿಧಾನಸಭೆ ಕ್ಷೇತ್ರಗಳಲ್ಲೂ ಗೆದ್ದರೆ ಆಪರೇಷನ್‌ಗೆ ಯತ್ನಿಸಬಹುದು ಸೋತರೆ
17ಸ್ಥಾನಕ್ಕಿಂತ ಕಡಿಮೆ ಬಂದರೆ “ತಲೆದಂಡ’ವಾಗಬಹುದು
ತುಮಕೂರು, ಶಿವಮೊಗ್ಗ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೆ ವೈಯಕ್ತಿಕ ಹೊಣೆ ಹೊರಬೇಕಾಗಬಹುದು.
ರಾಜ್ಯದಲ್ಲಿ ಸರಕಾರ ರಚನೆಯ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು