Advertisement

ಯುದ್ಧಾಪರಾಧಿ ಯಾರು?ತೀರ್ಮಾನ ಹೇಗೆ…ಯಾವುದು ವಾರ್‌ಕ್ರೈಂ

11:43 AM Mar 18, 2022 | Team Udayavani |

ಪುತಿನ್‌ರನ್ನು ಅಮೆರಿಕ ಅಧ್ಯಕ್ಷ ಯುದ್ಧಾಪರಾಧಿ (ವಾರ್‌ ಕ್ರಿಮಿನಲ್‌) ಎಂದು ನೇರವಾಗಿ ಆರೋಪಿಸಿದ್ದಾರೆ. ಆದರೆ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ಯುದ್ಧಾಪರಾಧಿ ಎಂದು ಕರೆಯುವು ದಕ್ಕಾಗದು. ಯುದ್ಧಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಕಾನೂನನ್ನು ಉಲ್ಲಂ ಸಿದರೆ ಮಾತ್ರ ಅವರನ್ನು ಹಾಗೆ ಕರೆಯಲಾಗುತ್ತದೆ. ಆ ಕಾನೂನು ಏನು, ಅದರಲ್ಲಿರುವ ಅಂಶಗಳು ಯಾವುವು? ಇತ್ಯಾದಿಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

Advertisement

ಇದನ್ನೂ ಓದಿ:ಪೊಲೀಸರಿಂದ ಮೋಸ ಆರೋಪ: ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ

ಕಾನೂನು ಮುರಿದರೆ ಅಪರಾಧಿಯಾಗಿ ಪರಿಗಣನೆ
ಶತಮಾನಗಳ ಹಿಂದೆ, ವಿಶ್ವ ನಾಯಕ ರೆಲ್ಲರೂ ಒಟ್ಟಾಗಿ ರೂಪಿಸಿರುವ “ಲಾ ಆಫ್ ಆರ್ಮ್ಡ್ ಕಾನ್ ಪ್ಲಿಕ್ಟ್’ ಎಂಬ ಕಾನೂನನ್ನು ಉಲ್ಲಂ ಸುವವರನ್ನು ಯುದ್ಧಾಪರಾಧಿ ಎಂದು ಕರೆಯಬಹುದು. ಕಾಲಾನುಕ್ರಮದಲ್ಲಿ ಈ ಕಾನೂನಿನಲ್ಲಿ ಹಲವಾರು ಬದಲಾವಣೆಗಳು, ಪರಿಷ್ಕರಣೆಗಳು ಆಗಿವೆ. 2ನೇ ಮಹಾಯುದ್ಧದ ಅನಂತರ ಏರ್ಪಟ್ಟ ಜಿನಿವಾ ಒಪ್ಪಂದಗಳನ್ನು ಇಂದಿಗೂ ಅನುಸರಿಸಬೇಕಿರುತ್ತದೆ.

ಜಿನಿವಾ ಒಪ್ಪಂದದ ಪ್ರಮುಖಾಂಶಗಳೇನು?
ಯುದ್ಧದಲ್ಲಿ ಪಾಲ್ಗೊಳ್ಳದ ಜನರ ರಕ್ಷಣೆಗೆ ಯುದ್ಧ ಮಾಡುವ ಎರಡೂ ರಾಷ್ಟ್ರಗಳು ಬದ್ಧರಾಗಿರಬೇಕು ಎಂಬುದು ಈ ಕಾನೂನಿನಲ್ಲಿರುವ ಪ್ರಮುಖ ನಿಯಮ. ವೈದ್ಯರು, ಶುಶ್ರೂಷಕಿಯರಿಗೆ, ಗಾಯಗೊಂಡ ಸೈನಿಕರಿಗೆ, ಕೈದಿಗಳಿಗೆ ಸೂಕ್ತವಾದ ರಕ್ಷಣೆ ನೀಡಬೇಕು ಎಂದೂ ಈ ಕಾನೂನಿನಲ್ಲಿ ಉಲ್ಲೇಖೀಸಲಾಗಿದೆ. ಇದಲ್ಲದೆ, ಎಂಥ ಪರಿಸ್ಥಿತಿಯಲ್ಲಿ ಯುದ್ಧ ಮಾಡಬೇಕು, ಯುದ್ಧ ಮಾಡುವುದೇ ಆದರೆ ಯಾವ ಶಸ್ತ್ರಾಸ್ತ್ರಗಳನ್ನು ಬಳಸಬೇಕು, ಯಾವುದನ್ನು ಬಳಸಬಾರದು ಎಂಬ ನಿಯಮಗಳಿವೆ.

ಯಾವುದು ವಾರ್‌ಕ್ರೈಂ?
*ಉದ್ದೇಶಪೂರ್ವಕವಾಗಿ ನಗರಗಳನ್ನು ವ್ಯಾಪಕವಾಗಿ ಹಾನಿಗೊಳಿಸುವುದು.

Advertisement

*ಆವಶ್ಯಕತೆ ಇಲ್ಲದ ಕಡೆಯಲ್ಲೆಲ್ಲ ದಾಳಿ ನಡೆಸುವುದು.

*ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುವುದು ಅಥವಾ ಅವರನ್ನು ಸೆರೆಹಿಡಿದು ಅವರನ್ನು ತಮ್ಮ ಗುರಾಣಿಯನ್ನಾಗಿ ಬಳಸುವುದು

*ಸೆರೆ ಹಿಡಿಯಲ್ಪಟ್ಟ ನಾಗರಿಕರನ್ನು ಕೊಲ್ಲುವುದು, ನಿರ್ನಾಮಗೊಳಿಸುವುದು, ಬಲವಂತವಾಗಿ ಬೇರೆಡೆ ರವಾನಿಸುವುದು, ಹಿಂಸಿಸುವುದು, ಅತ್ಯಾಚಾರ ಹಾಗೂ ಇನ್ನಿತರ ಹೇಯ ಕೃತ್ಯಗಳನ್ನು ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next