Advertisement

ಮೋದಿ ಬಿಟ್ಟರೆ ಈತನೇ ಜನಪ್ರಿಯ: ಭಾರತದ ಅತೀ ಜನಪ್ರಿಯ ಆಟಗಾರ ಯಾರು ಗೊತ್ತಾ?

09:45 AM Sep 27, 2019 | Team Udayavani |

ಹೊಸದಿಲ್ಲಿ: ವಿಶ್ವಕಪ್ ಗೆದ್ದ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗ ಎರಡು ತಿಂಗಳ ರಜೆಯಲ್ಲಿದ್ದಾರೆ. ಇದೇ ಸಮಯದಲ್ಲಿ ಧೋನಿ ಯಾವಾಗ ನಿವೃತ್ತಿ ಕೊಡುತ್ತಾರೆ ಎಂಬ ಪ್ರಶ್ನೆಯೂ ಚಾಲ್ತಿಯಲ್ಲಿದೆ. ಅಂದಹಾಗೇ ಧೋನಿಯ ಜನಪ್ರೀಯತೆ ಕಡಿಮೆಯಾಗಿದೆಯೇ? ಇಲ್ಲ ಎನ್ನುತ್ತಿದೆ ಈ ಸಮೀಕ್ಷೆ.

Advertisement

ಯೂಗೋವ್ ಎಂಬ ಖಾಸಗಿ ಸಂಸ್ಥೆ ಭಾರತದಲ್ಲಿನ ಜನಪ್ರಿಯ ವ್ಯಕ್ತಿಗಳ ಪಟ್ಟಿ ಮಾಡಿದೆ. ವಿಶ್ವದಾದ್ಯಂತ ಸುಮಾರು 42,000 ಜನರಿಂದ ಈ ಸಂಸ್ಥೆ ಅಭಿಪ್ರಾಯ ಸಂಗ್ರಹಿಸಿ  ಪುರುಷರ ಮತ್ತು ಮಹಿಳೆಯರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಹಿಂದಿರುವುದು ಮಹೇಂದ್ರ ಸಿಂಗ್ ಧೋನಿ. ಅಂದಹಾಗೆ ಲೆಜೆಂಡ್ ಸಚಿನ್ ತೆಂಡುಲ್ಕರ್ ಏಳನೇ ಸ್ಥಾನ ಹೊಂದಿದ್ದರೆ, ವಿರಾಟ್ ಎಂಟನೇ ಸ್ಥಾನಿಯಾಗಿದ್ದಾರೆ.

ಕಳೆದ ವಿಶ್ವಕಪ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಮಹೇಂದ್ರ ಸಿಂಗ್ ಧೋನಿ ನಂತರ ಭಾರತದ ಪರವಾಗಿ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಅವರ ಜನಪ್ರೀಯತೆ ಕಡಿಮೆಯಾಗಿರಬಹುದು ಎಂಬ ಮಾತುಗಳಿದ್ದವು. ಆದರೆ ಧೋನಿ ಅಭಿಮಾನ ಇನ್ನೂ ಜನರ ಹೃದಯದಲ್ಲಿದೆ ಎಂಬುದನ್ನು ಈ ಸಮೀಕ್ಷೆ ನಿರೂಪಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next