Advertisement
ರೂಟ್ 1,855 ರನ್ಜೋ ರೂಟ್ 2021ರ 18 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,855 ರನ್ ಪೇರಿಸಿ ಮೆರೆದಿದ್ದಾರೆ. ಸರಾಸರಿ 58.37. ಇದರಲ್ಲಿ 6 ಶತಕಗಳು ಸೇರಿವೆ. ಶ್ರೀಲಂಕಾ ಎದುರಿನ ಗಾಲೆ ಟೆಸ್ಟ್ ಪಂದ್ಯದಲ್ಲಿ 228 ರನ್ ಬಾರಿಸುವ ಮೂಲಕ ರೂಟ್ ತಮ್ಮ ಅಭಿಯಾನ ಆರಂಭಿಸಿದ್ದರು. ಬಳಿಕ ಭಾರತದೆದುರಿನ ಚೆನ್ನೈ ಟೆಸ್ಟ್ನಲ್ಲಿ 218 ರನ್ ರಾಶಿ ಹಾಕಿದರು. ಭಾರತದೆದುರಿನ 4 ಪಂದ್ಯಗಳಲ್ಲಿ 3 ಶತಕ ಸೇರಿದಂತೆ 564 ರನ್ ಪೇರಿಸಿದ ಹಿರಿಮೆ ರೂಟ್ ಅವರದಾಗಿದೆ. ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನೂ ಅಲಂಕರಿಸಿದರು. ಆದರೆ ವರ್ಷಾಂತ್ಯದ ಆ್ಯಶಸ್ ಸರಣಿಯಲ್ಲಿ ಸತತ 3 ಟೆಸ್ಟ್ ಗಳಲ್ಲಿ ಸೋಲನುಭವಿಸಿದ್ದು ರೂಟ್ ಅವರ ಅಷ್ಟೂ ಸಾಧನೆಗೆ ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ.
ಪಾಕಿಸ್ಥಾನದ ವೇಗಿ ಶಾಹೀನ್ ಶಾ ಅಫ್ರಿದಿ ವರ್ಷವಿಡೀ ಘಾತಕ ಬೌಲಿಂಗ್ ಮೂಲಕ ಮೂರೂ ಮಾದರಿಗಳಲ್ಲಿ ಎದುರಾಳಿಗಳಿಗೆ ಅಪಾಯಕಾರಿಯಾಗಿ ಗೋಚರಿಸಿದರು. ಆರಂಭಿಕ ಸ್ಪೆಲ್ ಹಾಗೂ ಡೆತ್ ಓವರ್ಗಳೆರಡರಲ್ಲೂ ಅಫ್ರಿದಿ ಎಸೆತಗಳು ಅತ್ಯಂತ ಹರಿತವಾಗಿದ್ದವು. 36 ಅಂತಾರಾಷ್ಟ್ರೀಯ ಪಂದ್ಯಗಳಿಂದ 78 ವಿಕೆಟ್ ಕೆಡವಿದ ಸಾಧನೆ ಇವರದಾಗಿದೆ. ಟಿ20 ವಿಶ್ವಕಪ್ನಲ್ಲಿ ಮಿಂಚಿನ ದಾಳಿ ಸಂಘಟಿಸಿದ ಅಫ್ರಿದಿ ಭಾರತವನ್ನು ಸೋಲಿಸುವಲ್ಲಿ, ಪಾಕಿಸ್ಥಾನವನ್ನು ಸೆಮಿಫೈನಲ್ಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ವರ್ಷದ 21 ಟಿ20 ಪಂದ್ಯಗಳಲ್ಲಿ 23 ವಿಕೆಟ್ ಉರುಳಿಸಿದ ಸಾಧನೆ ಅಫ್ರಿದಿ ಅವರದು. ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ರಾಹುಲ್ ಟೀಮ್ ಇಂಡಿಯಾ ನಾಯಕ
Related Articles
ಕೇನ್ ವಿಲಿಯಮ್ಸನ್ ಸಾಧನೆಯನ್ನು ಕೇವಲ ಬ್ಯಾಟಿಂಗ್ ಮೂಲಕ ಅಳೆದರು ಸಾಲದು, ಅವರ ನಾಯಕತ್ವದ ಯಶಸ್ಸು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಇದಕ್ಕೆ ಅತ್ಯು ತ್ತಮ ನಿದರ್ಶನವೆಂದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಎತ್ತಿದ್ದು. 16 ಅಂತಾರಾಷ್ಟ್ರೀಯ ಪಂದ್ಯಗಳಿಂದ 2,021 ರನ್ ಪೇರಿಸಿದ ಹೆಗ್ಗಳಿಕೆ ಕಿವೀಸ್ ಕಪ್ತಾನನದು. ಬಳಿಕ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೂ ವಿಲಿಯಮ್ಸನ್ ಪಡೆ ಫೈನಲ್ಗೆ ಪ್ರವೇಶಿಸಿತಾದರೂ ಇಲ್ಲಿ ಅದೃಷ್ಟ ಕೈಕೊಟ್ಟಿತು. ಆದರೆ ಬ್ಯಾಟಿಂಗ್ ಹೋರಾಟದ ಮೂಲಕ ಅವರು ಬಾರಿಸಿದ 85 ರನ್ ಎಲ್ಲರ ಪ್ರಶಂಸೆ ಗಳಿಸಿತು.
Advertisement
ರಿಜ್ವಾನ್: 1,915 ರನ್ ಸಾಧನೆಪಾಕಿಸ್ಥಾನದ ವಿಕೆಟ್ ಕೀಪಿಂಗ್ ಓಪನರ್ ಮೊಹಮ್ಮದ್ ರಿಜ್ವಾನ್ 2021ರಲ್ಲಿ ರನ್ ಪ್ರವಾಹವನ್ನೇ ಹರಿಸಿದರು. 44 ಪಂದ್ಯಗಳಿಂದ 1,915 ರನ್ ಬಾರಿಸಿದ ಸಾಧನೆ ಇವರದು. ಸರಾಸರಿ 56.32. ಇದರಲ್ಲಿ 2 ಶತಕ ಕೂಡ ಸೇರಿದೆ. ಕೀಪಿಂಗ್ ವೇಳೆ 56 ವಿಕೆಟ್ ಪತನಕ್ಕೆ ಕಾರಣರಾಗಿದ್ದಾರೆ. ಮುಖ್ಯವಾಗಿ ಟಿ20 ಕ್ರಿಕೆಟ್ನಲ್ಲಿ ರಿಜ್ವಾನ್ ಸಾಧನೆ ಅಮೋಘವಾಗಿತ್ತು. 29 ಪಂದ್ಯಗಳಿಂದ ಪೇರಿಸಿದ್ದು ಬರೋಬ್ಬರಿ 1,326 ರನ್! ಸರಾಸರಿ 73.66, ಸ್ಟ್ರೈಕ್ರೇಟ್ 134.89. ಹಾಗೆಯೇ 9 ಟೆಸ್ಟ್ಗಳಿಂದ 455 ರನ್ ಗಳಿಸಿದ್ದಾರೆ.